Advertisement
ನಾಯಕ ಶ್ರೇಯಸ್ ಹಾಗೂ ನಾಯಕಿ ನಿಶ್ವಿಕಾ ನಾಯ್ಡು ‘ಒಂದು ಮಾತಲಿ ನೂರು ಹೆಳಲೇ..’ ಎಂಬ ರೊಮ್ಯಾಂಟಿಕ್ ಹಾಡನ್ನು ರಿಚ್ ಆಗಿ ಚಿತ್ರೀಕರಿಸಲಾಗಿದ್ದು, ಕಾಲೇಜು ಹುಡುಗಿಯ ಹಿಂದೆ ಸುತ್ತುವ ಯುವ ಪ್ರೇಮಿಯಾಗಿ ಶ್ರೇಯಸ್ ಮುದ್ದಾಗಿ ಕಾಣಿಸುತ್ತಾರೆ.
ನಾಗಾರ್ಜುನ ಶರ್ಮಾ ಅವರ ಸಾಹಿತ್ಯ ಈ ಹಾಡಿಗಿದೆ. ಸರಿಗಮಪ ಖ್ಯಾತಿಯ ಸಂಜೀತ್ ಹೆಗ್ಡೆ ಈ ಹಾಡನ್ನು ರೊಮ್ಯಾಂಟಿಕ್ ಫೀಲ್ ನಲ್ಲಿ ಹಾಡಿದ್ದು ಸಂಜಿತ್ ಸ್ವರ ಕೇಳುಗರನ್ನು ಮೋಡಿ ಮಾಡುತ್ತದೆ. ಈ ಚಿತ್ರದ ಹಾಡಿನ ಪ್ರಾರಂಭದಲ್ಲಿ ಸ್ಯಾಂಡಲ್ ವುಡ್ ನಟಿಯರು ಶುಭಕೋರಿದ್ದು, ಪ್ರೇಮಿಗಳ ಕೆಲವೊಂದು ಅಮೂಲ್ಯ ಟಿಪ್ಸ್ ಗಳನ್ನೂ ನೀಡಿದ್ದಾರೆ. ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಗುರು ದೇಶಪಾಂಡೆ ಅವರು ನಿರ್ದೇಶಿಸುತ್ತಿದ್ದಾರೆ.