Advertisement
ರುದ್ರಾಕ್ಷಿ ಆಧ್ಯಾತ್ಮಿಕ ಮೌಲ್ಯವುಳ್ಳದ್ದು ರೋಗ ನಿವಾರಕ ಶಕ್ತಿ ಉಳ್ಳದ್ದು, ಮಾನಸಿಕ ಆರೋಗ್ಯ ರಕ್ಷಣಾ ಸಾಮರ್ಥ್ಯವುಳ್ಳದ್ದು ಎಂದು ಪ್ರಾಚೀನ ಕಾಲದಿಂದಲೂ ಮನ್ನಣೆಗೆ ಪಾತ್ರವಾಗಿದೆ.
Related Articles
Advertisement
ಭಾರತೀಯ ಅಧ್ಯಾತ್ಮ ತತ್ವಗಳಿಗೆ ಮಾರು ಹೋದ, ಯುರೋಪ್, ಅಮೆರಿಕಾ ಇತ್ಯಾದಿ ಪಾಶ್ಚಾತ್ಯ ದೇಶಗಳ ಸಹಸ್ರಾರು ಮಂದಿ ಇದನ್ನು ಧರಿಸುತ್ತಾರೆಂದರೆ ಅದರ ಪ್ರಾಮುಖ್ಯ ಅರಿವಾಗದಿರಲಾರದು. 1864ರಲ್ಲಿಯೂ ಇಂಗ್ಲೆಂಡ್‌ನ ಕೆರ್ಬರ್ ಡ್ರುರಿ ಎಂಬವನು ಶುದ್ದೀಕರಿಸಿದ ರುದ್ರಾಕ್ಷಿ ಗಳಿಗೆ ಚಿನ್ನ ಕಟ್ಟಿಸಿ, ಮಾಡಿದ ಹಾರಗಳನ್ನು ಇಂಗ್ಲೆಂಡ್‌ನಲ್ಲಿ ಮಾರಾಟ ಮಾಡುತ್ತಿದ್ದರೆಂದು ಬರೆದಿದ್ದಾನೆ.
ಇದನ್ನೂ ಓದಿ: ಔಷಧೀಯ ಗುಣಗಳ ರುದ್ರಾಕ್ಷಿ; ಇದರಲ್ಲಿರುವ ವಿಟಮಿನ್ ಗುಣದ ಸಂಪೂರ್ಣ ಮಾಹಿತಿ
ಇದನ್ನೂ ಓದಿ: ರುದ್ರಾಕ್ಷಿ ಧಾರಣೆಯ ವೈಜ್ಞಾನಿಕ ಉಪಯೋಗಗಳು ನಿಮಗೆ ಗೊತ್ತೇ? ಪುರಾಣ ಕಣ್ಣಲ್ಲಿ ರುದ್ರಾಕ್ಷಿ
ಲೋಕಕಂಟಕರಾದ ತ್ರಿಪುರಾಸುರರ ಸಂಹಾರಕ್ಕಾಗಿ ಶಿವನು ಸಾವಿರ ವರ್ಷ ಧ್ಯಾನಸ್ಥನಾದ ಬಳಿಕ ಕಣ್ಣು ತೆರೆಯುವ ಅವನ ಕಣ್ಣು (ಅಕ್ಷ) ಗಳಿಂದ ಉದುರಿದ ಆನಂದಬಾಷ್ಪಗಳು, ಹಿಮಾಲಯ ಪ್ರದೇಶಗಳಲ್ಲಿ ಬಿದ್ದು ಅವುಗಳಿಂದ ರುದ್ರಾಕ್ಷಿ ಫಲ ನೀಡುವ ವೃಕ್ಷಗಳ ಉಂಟಾದವು. ರುದ್ರಾಕ್ಷಿಗಳ ಪ್ರಾಮುಖ್ಯತೆ, ಧಾರಣ ಕ್ರಮಗಳು (ಮಂತ್ರಗಳು), ಆಧ್ಯಾತ್ಮಿಕ ಮತ್ತು ಆರೋಗ್ಯಗಳ (ರೋಗಹರ ಶಕ್ತಿ) ಹಲವಾರು ವಿಷಯಗಳು ಶಿವಪುರಾಣ, ಶ್ರೀಮದ್ ದೇವಿ ಭಾಗವತ, ಸ್ಕಂದ ಪುರಾಣ, ಪದ್ಮಪುರಾಣ, ಮಂತ್ರ ಮಹಾರ್ಣವ ಇತ್ಯಾದಿಗಳಲ್ಲಿ ಹಲವಾರು ವಿವರಗಳಿವೆ. ಇದನ್ನೂ ಓದಿ: ಹೇಗಿರುತ್ತದೆ ರುದ್ರಾಕ್ಷಿ ಮರ? ಏಕಮುಖಿ ರುದ್ರಾಕ್ಷಿ ಶ್ರೇಷ್ಠವೇ? : ಇಲ್ಲಿದೆ ಫುಲ್ ಡಿಟೇಲ್ಸ್
ಇದನ್ನೂ ಓದಿ: ರುದ್ರಾಕ್ಷಿಗಳಲ್ಲಿರುವ ಪ್ರಬೇಧಗಳು ಮತ್ತು ಇವುಗಳ ಧಾರಣೆಯಿಂದ ಆಗುವ ಪ್ರಯೋಜನಗಳ Full Details ಮುಂದುವರಿಯುವುದು… (ನಾಳೆ: ರುದ್ರಾಕ್ಷಿಯ ಔಷಧೀಯ ಮಹತ್ವ)