Advertisement
ಇದಕ್ಕೆ ಉತ್ತಮ ಉದಾಹರಣೆ ಎಂದರೆ 1981ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡಕ್ಕೆ ಪಂದ್ಯವನ್ನು ಟೈ ಮಾಡಿಕೊಳ್ಳಲು 1 ಎಸೆತದಲ್ಲಿ 6 ರನ್ನುಗಳ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ಆಸೀಸ್ ಕಪ್ತಾನ ಗ್ರೆಗ್ ಚಾಪೆಲ್ ತನ್ನ ಸಹೋದರ ಟ್ರೆವರ್ ಚಾಪಲ್ ಗೆ ಕೊನೇ ಎಸೆತವನ್ನು ‘ಅಂಡರ್ ಆರ್ಮ್’ ರೀತಿಯಲ್ಲಿ ಎಸೆಯಲು ಸೂಚಿಸುತ್ತಾರೆ. ಎದುರಾಳಿ ಬ್ಯಾಟ್ಸ್ ಮನ್ ಸಹಿತ ಎಲ್ಲರೂ ಒಮ್ಮೆ ಅವಾಕ್ಕಾಗುತ್ತಾರೆ. ಆದರೆ ಕ್ರಿಕೆಟ್ ನಿಯಮದ ಪ್ರಕಾರ ಚಾಪೆಲ್ ಅವರ ನಿರ್ಧಾರ ಸರಿಯಾಗಿಯೇ ಇತ್ತು ಆದರೆ ಕ್ರೀಡಾ ಸ್ಪೂರ್ತಿ ಪ್ರಕಾರ…? ಈ ಘಟನೆಯ ಬಳಿಕ ಐಸಿಸಿ ಈ ಒಂದು ನಿಯಮವನ್ನೇ ರದ್ದುಪಡಿಸುತ್ತದೆ.
ಈಗಾಗಲೇ ಮೇಲೆ ತಿಳಿಸಿರುವಂತೆ ನಾನ್ ಸ್ಟ್ರೈಕ್ ನಲ್ಲಿರುವ ಬ್ಯಾಟ್ಸ್ ಮನ್ ಒಬ್ಬನನ್ನು ಆತನ ಅರಿವಿಗೆ ಬರದಂತೆ ರನೌಟ್ ಮಾಡುವ ವಿಧಾನ ಇದಾಗಿದ್ದು ಈ ಸ್ವಾತಂತ್ರ್ಯ ಆ ಓವರ್ ಬೌಲಿಂಗ್ ಮಾಡುತ್ತಿರುವ ಬೌಲರ್ ಗೆ ಮಾತ್ರವೇ ಇರುತ್ತದೆ. ಮತ್ತು ಇದು ಸಂಪೂರ್ಣವಾಗಿ ಬೌಲರೊಬ್ಬನ ವಿವೇಚನೆಗೆ ಬಿಟ್ಟಿರುವ ವಿಚಾರವಾಗಿರುತ್ತದೆ. 1947ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕ್ವೀನ್ಸ್ ಲ್ಯಾಂಡ್ ವಿರುದ್ಧದ ಪಂದ್ಯವೊಂದರಲ್ಲಿ ಭಾರತದ ಎಡಗೈ ಸ್ಪಿನ್ನರ್ ವೀನೂ ಮಂಕಡ್ ಅವರು ಬಿಲ್ ಬ್ರೌನ್ ಅವರನ್ನು ನಾನ್ ಸ್ಟ್ರೈಕ್ ಭಾಗದಲ್ಲಿ ರನೌಟ್ ಮಾಡಿದ್ದರು. ಆ ಬಳಿಕ ಕ್ರಿಕೆಟ್ ನ ಈ ವಿಚಿತ್ರ ನಿಯಮಕ್ಕೆ ‘ಮಂಕಡ್’ ನಿಯಮ ಎಂದೇ ಹೆಸರಾಯ್ತು. ಆ ಸಂದರ್ಭದಲ್ಲಿ ಮಂಕಡ್ ಅವರ ಈ ವರ್ತನೆಗೆ ಸಾಕಷ್ಟು ಟೀಕೆ ವ್ಯಕ್ತವಾದರೂ ಕ್ರಿಕೆಟ್ ಲೆಜೆಂಡ್ ಡಾನ್ ಬ್ರಾಡ್ಮನ್ ಅವರು ಮಂಕಡ್ ಅವರ ಈ ಆಟವನ್ನು ಸಮರ್ಥಿಸಿಕೊಂಡಿದ್ದರು. ‘ಬೌಲರ್ ಕೈಯಿಂದ ಚೆಂಡು ಹೊರಬೀಳುವತನಕ ನಾನ್ ಸ್ಟ್ರೈಕರ್ ತನ್ನ ಕ್ರೀಸ್ ಅನ್ನು ಬಿಡಬಾರದೆಂದು ಕ್ರಿಕೆಟ್ ನಿಯಮವೇ ಇದೆ ; ಹಾಗಿರುವಾಗ ಮಂಕಡ್ ಅವರ ಈ ಆಟ ತಪ್ಪು ಹೇಗಾಗುತ್ತದೆ ಎಂದೇ ನನಗೆ ಅರ್ಥವಾಗುತ್ತಿಲ್ಲ’ ಎಂದು ಬ್ರಾಡ್ಮನ್ ಅವರು ಒಂದು ಕಡೆ ಬರೆದುಕೊಳ್ಳುತ್ತಾರೆ.
Related Articles
ಅದು 1992. ಬಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಸೌಹಾರ್ಧ ಸರಣಿಯ ಪೋರ್ಟ್ ಎಲಿಝಬೆತ್ ಏಕದಿನ ಪಂದ್ಯದಲ್ಲಿ ವಿಲಕ್ಷಣ ಘಟನೆಯೊಂದು ನಡೆದೇಹೋಯಿತು. ಭಾರತದ ಧಿಗ್ಗಜ ಬೌಲರ್ ಕಪಿಲ್ ದೇವ್ ಅವರು ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಪೀಟರ್ ಕಸ್ಟರ್ನ್ ಅವರನ್ನು ‘ಮಂಕಡ್’ ರೀತಿಯಲ್ಲಿ ರನೌಟ್ ಮಾಡುತ್ತಾರೆ. ಇದು 23 ವರ್ಷಗಳ ಹಿಂದೆ ಏಳನೇ ‘ಮಂಕಡ್’ ಘಟನೆಯಾಗಿ ದಾಖಲಾಗುತ್ತದೆ. ಕಸ್ಟರ್ನ್ ಅವರು ಪದೇ ಪದೇ ನಾನ್ ಸ್ಟ್ರೈಕರ್ ಭಾಗದಲ್ಲಿ ತನ್ನ ಕ್ರೀಸ್ ಅನ್ನು ಬಿಟ್ಟು ಮುಂದೆ ಹೋಗುತ್ತಿದ್ದರು ಇದನ್ನು ಗಮನಿಸಿದ ಕಪಿಲ್ ದೇವ್ ಬೇಲ್ಸ್ ಹಾರಿಸುತ್ತಾರೆ ಮತ್ತು ಅಂಪೈರ್ ಸೈರಸ್ ಮಿಚ್ಲೇ ಅವರತ್ತ ಔಟ್ ಅಪೀಲ್ ಮಾಡುತ್ತಾರೆ. ಕ್ರಿಕೆಟ್ ನಿಯಮದಂತೆ ಅಂಪೈರ್ ಔಟ್ ಕೊಡುತ್ತಾರೆ. ಆದರೆ ಕಪಿಲ್ ಅವರ ಈ ಕ್ರಮಕ್ಕೆ ಎಲ್ಲಾ ಕಡೆಯಿಂದ ಅಪಸ್ವರ ಕೇಳಿಬರುತ್ತದೆ. ಔಟ್ ನೀಡಿದ ಅಂಪೈರ್ ಮಿಚ್ಲೇ ಅವರೂ ಸಹ ಪಂದ್ಯದ ಬಳಿಕ ಹೇಳಿಕೆಯೊಂದನ್ನು ನೀಡಿ ‘ನಾನು ಕಪಿಲ್ ಅವರನ್ನು ಬಹುವಾಗಿ ಗೌರವಿಸುತ್ತೇನೆ ; ಆದರೆ ಅವರು ಇವತ್ತು ಮಾಡಿದ್ದನ್ನು ನಾನು ಒಪ್ಪುವುದಿಲ್ಲ’ ಎಂದು ಬಿಡುತ್ತಾರೆ.
Advertisement
ಜಾಸ್ ಬಟ್ಲರ್ ಇದೇ ಮೊದಲ ಸಲ ‘ಮಂಕಡ್’ ಮಾದರಿಗೆ ಬಲಿಯಾಗುತ್ತಿರುವುದಲ್ಲ!ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯವೊಂದರ ಸಂದರ್ಭದಲ್ಲಿ ಬೌಲರ್ ಸೇನಾನಾಯಕೆ ಅವರು ಜಾಸ್ ಬಟ್ಲರ್ ಅವರನ್ನು ಇದೇ ರೀತಿ ‘ಮಂಕಡ್’ ಖೆಡ್ಡಾಗೆ ಕೆಡವಿದ್ದರು. ಹಾಗೆಯೇ 2012ರಲ್ಲೊಮ್ಮೆ ಆರ್. ಅಶ್ವಿನ್ ಅವರು ತ್ರಿ ರಾಷ್ಟ್ರ ಸರಣಿಯಲ್ಲಿ ಆಸ್ಟ್ರೇಲಿಯಾದಲ್ಲಿ ಶ್ರೀಲಂಕಾ ಆಟಗಾರ ಮ್ಯಾಥ್ಯೂಸ್ ಅವರನ್ನು ‘ಮಂಕಡ್’ ಬಲೆಗೆ ಕೆಡವಿದ್ದರು. ಆದರೆ ಅಂದು ಸಚಿನ್ ಮತ್ತು ನಾಯಕ ಸೆಹ್ವಾಗ್ ಅವರ ಮದ್ಯಸ್ಥಿಕೆಯಿಂದಾಗಿ ಮ್ಯಾಥ್ಯೂಸ್ ಗೆ ಜೀವದಾನ ಲಭಿಸಿತ್ತು. ಆದರೆ ಐಪಿಎಲ್ ಕೂಟದಲ್ಲಿ ಮಾತ್ರ ‘ಮಂಕಡ್’ ಪ್ರಯೋಗ ಇದೇ ಮೊದಲ ಬಾರಿ ನಡೆದಿರುವುದು.
ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ತಮ್ಮ ತಂಡದ ಗೆಲುವಿಗೆ ಮೈದಾನದಲ್ಲಿ ಆಟಗಾರರು ರೂಪಿಸುವ ಪ್ರತೀ ತಂತ್ರಗಳೂ ಗಣನೆಗೆ ಬರುತ್ತವೆ. ಹೀಗಿರುವಾಗ ‘ಮಂಕಡ್’ ರೀತಿಯಲ್ಲಿ ನಾನ್ ಸ್ಟ್ರೈಕರ್ ಬ್ಯಾಟ್ಸ್ ಮನ್ ಒಬ್ಬನನ್ನು ಔಟ್ ಮಾಡಲು ಕ್ರಿಕೆಟ್ ಕಾನೂನಿನಲ್ಲೇ ಅವಕಾಶ ಇರುವಾಗ ಅದನ್ನು ಬೌಲರ್ ಬಳಸಿಕೊಂಡರೆ ‘ಫೇರ್ ಪ್ಲೇ’ ಪ್ರಶ್ನೆ ಏಳುವುದಾದರೂ ಯಾಕೆ? ಕ್ರಿಕೆಟ್ ಅಂಗಳದಲ್ಲಿ ಆಸೀಸ್ ಆಟಗಾರರು ಎದುರಾಳಿ ಆಟಗಾರರನ್ನು ದೃತಿಗೆಡಿಸಲು ಮತ್ತು ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಲು ಯಾವೆಲ್ಲಾ ವಿಧಾನಗಳನ್ನು ಅನುಸರಿಸಿತ್ತದ್ದರೆಂಬುದನ್ನು ಕ್ರಿಕೆಟ್ ಅಭಿಮಾನಿಗಳು ಖಂಡಿತಾ ಮರೆಯಲು ಸಾಧ್ಯವಿಲ್ಲ. ಹಾಗಾದರೆ ಅವೆಲ್ಲಾ ಕ್ರಿಕೆಟ್ ನಿಯಮಗಳ ಅಡಿಯಲ್ಲೇ ಬರುತ್ತಿದ್ದವೇ? ಕ್ರಿಕೆಟ್ ಆಟದ ಶೈಲಿ ಬದಲಾಗಿದೆ ಹಾಗೆಯೇ ಇಂದಿನ ಆಟಗಾರರ ಮನಸ್ಥಿತಿಯೂ ಬದಲಾಗಿರುವುದು ಸುಳ್ಳಲ್ಲ…