Advertisement
ಅದರಂತೆ ದೇಶದ ಮಿನಿ ರತ್ನ ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸ್ಥಾವರದೊಳಗೆ ಪೆಟ್‌ಕೋಕ್ ಸಾಗಿಸಲು 2018ರ ಡಿಸೆಂಬರ್‌ನಿಂದ ಗೂಡ್ಸ್ ರೈಲು ಸಂಚರಿಸಲಿದೆ.
Related Articles
ಎಂಆರ್‌ಪಿಎಲ್ ಹಳಿ ಸಂಪರ್ಕ ಭಾಗದಲ್ಲಿ ನಾಲ್ಕು ಗ್ಯಾಸ್ ಪೈಪ್‌ಲೈನ್ ಸಾಗಣೆ ಸಹಿತ ಬಹುಪಯೋಗಿ 10 ಕಿರು
ಸೇತುವೆಗಳು ನಿರ್ಮಾಣವಾಗಲಿದೆ. ಈ ಪ್ರದೇಶ ನೀರು ನಿಲ್ಲುವ ಮತ್ತು ಒಸರುವ ಪ್ರದೇಶವಾದ ಕಾರಣ ಹಳಿ ನಿರ್ಮಾಣಕ್ಕೆ ರೈಲ್ವೇಯು ಅತ್ಯಾಧುನಿಕ ತಂತ್ರಜ್ಞಾನ ಬಳಸಲಿದೆ. ಟ್ರಕ್ಕುಗಳಲ್ಲಿ 20ರಿಂದ 25ಟನ್ ಮಾತ್ರ ಪೆಟ್ ಕೋಕ್ ಹೇರಲು ಅವಕಾಶವಿತ್ತು. ಆದರೆ ಗೂಡ್ಸ್ ವ್ಯಾಗನ್ ನಲ್ಲಿ 40ರಿಂದ 50 ಟನ್‌ಗೂ ಹೆಚ್ಚು ಸರಕು ಹಾಕಬಹುದಾಗಿದೆ. ಒಂದು ಬಾರಿಗೆ 1,400 ಟನ್‌ಗಳಷ್ಟು ಪೆಟ್ ಕೋಕ್‌ನ್ನು ಸಾಗಿಸಬಹುದು.
Advertisement
ಹಳಿ ನಿರ್ಮಾಣಎಂಆರ್ಪಿಎಲ್ ಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹಳಿ ನಿರ್ಮಿಸಲಾಗುತ್ತಿದೆ. ನೇರವಾಗಿ ಸರಕನ್ನು ಕಂಪೆನಿಯ ಒಳಭಾಗದಲ್ಲೇ ಲೋಡ್ ಮಾಡಿ ಬೇರೆಡೆ ಒಯ್ಯಲಾಗುತ್ತದೆ. ಇದರಿಂದ ಸಮಯ ಉಳಿತಾಯದ ಜತೆಗೆ ಪರಿಸರ ಮಾಲಿನ್ಯ ತಪ್ಪಲಿದೆ.
– ಸುಧಾಕೃಷ್ಣ ಮೂರ್ತಿ
ಸಾರ್ವಜನಿಕ ಸಂಪರ್ಕಾಧಿಕಾರಿ,
ಕೊಂಕಣ ರೈಲ್ವೇ ಉಡುಪಿ 170 ಕೋ.ರೂ. ವೆಚ್ಚ
ಎಂಆರ್‌ಪಿಎಲ್‌ಗೆ ಸುಮಾರು 170 ಕೋಟಿ ರೂ. ವೆಚ್ಚದಲ್ಲಿ ರೈಲ್ವೇ ಕಾಮಗಾರಿ ನಡೆಯುತ್ತಿದೆ. 80 ಕೋಟಿ ರೂ. ಮೊತ್ತದ ಹಳಿ ಕಾಮಗಾರಿಯನ್ನು ಕೊಂಕಣ ರೈಲ್ವೇ ನಿರ್ವಹಿಸುತ್ತಿದೆ. ಸುಮಾರು 90 ಕೋಟಿ ರೂ. ವೆಚ್ಚದಲ್ಲಿ ಎಂಆರ್‌ಪಿಎಲ್ ಸ್ವತಃ ರೈಲ್ವೇಗೆ ಬೇಕಾದ ಪೂರಕ ಕಾಮಗಾರಿಯನ್ನು ಕೈಗೊಳ್ಳುತ್ತಿದೆ. ಇದರಿಂದ ಪೆಟ್ ಕೋಕ್ ಮತ್ತಿತರ ಸರಕು ಸಾಗಣೆಗೆ ಅನುಕೂಲವಲ್ಲದೇ, ಲಾರಿಗಳ ಒತ್ತಡವೂ ತಗ್ಗಲಿದೆ.
– ಪ್ರಶಾಂತ್ ಬಾಳಿಗಾ
ಜನರಲ್ ಮ್ಯಾನೇಜರ್, ಕಾರ್ಪೊರೇಟ್ ಸಂಪರ್ಕ, ಎಂಆರ್‌ಪಿಎಲ್ ಲಕ್ಷ್ಮೀ ನಾರಾಯಣ ರಾವ್