Advertisement
ಚಾರ್ವಾಕ ಸೋಷಿಯಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ದೇವರು-ಧರ್ಮ-ರಾಜಕಾರಣ ಕುರಿತು ಅವರು ಮಾತನಾಡಿದರು. ಹಳೆಯ ಯಾವುದೇ ದೇವಸ್ಥಾನಗಳಲ್ಲಿ ಬೆಳಕಿಲ್ಲ. ಅದೇ ರೀತಿ ಸಮಾಜವನ್ನೂ ಕಗತ್ತಲಲ್ಲಿಟ್ಟಿದ್ದಾರೆ. ಜನ ಬುದ್ಧಿವಂತರಾದರೆ ಪ್ರಶ್ನೆ ಮಾಡುತ್ತಾರೆ. ಒತ್ತಾಯ ಮಾಡಿ ಪ್ರತಿಭಟನೆ ಮಾಡುತ್ತಾರೆ ಎಂಬ ಕಾರಣಕ್ಕೆ ಎಲ್ಲ ಕಾಲದಲ್ಲಿಯೂ ಜನರನ್ನು ಕತ್ತಲಲ್ಲಿಡುತ್ತಾ ಬಂದಿದ್ದಾರೆ.
Related Articles
Advertisement
ಸಮುದ್ರಕ್ಕೆ ಎಲ್ಲಾ ನದಿಗಳು ಸೇರಿದರೂ ಇದು ಇಂತಹ ನದಿಯ ನೀರು ಎಂದು ಗುರುತಿಸಲಾಗುವುದಿಲ್ಲ. ಅದೇ ರೀತಿ ಸಮುದ್ರಗಳು ಸೇರಿಕೊಂಡಂತೆ ಮನುಷ್ಯ ಜನಾಂಗ ಸೇರಿದೆ. ಆದರೆ, ನಾವು ಹಿಂದೂ, ಮುಸ್ಲಿಂ, ಕ್ರೆ„ಸ್ತ ಎಂದು ಒಡೆದು ಹಾಕಿದ್ದೇವೆ. ಸಮುದ್ರದ ಉದಾಹರಣೆಕೊಟ್ಟು ಮಾನವ ಜನಾಂಗ ಒಂದು ಎಂದು ಹೇಳಿದ ಬುದ್ಧನನ್ನು ರಾಮಯಾಣದಲ್ಲಿ ರಾಮನ ಬಾಯಲ್ಲಿ ನಿಂದಿಸಲಾಗಿದೆ ಎಂದು ಹೇಳಿದರು.
ವೇದ, ಉಪನಿಷತ್, ಸಂಸ್ಕೃತ ಗ್ರಂಥಗಳಲ್ಲೆಲ್ಲೂ ಹಿಂದೂ ಎಂಬ ಪದ ಉಲ್ಲೇಖವಿಲ್ಲ. ಆದರೆ, ಅನಾದಿ ಕಾಲದಲ್ಲಿ ಹೀನರನ್ನು ಹಿಂದೂ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಗೌರವ ಇದ್ದವರ್ಯಾರೂ ನಾನು ಹಿಂದೂ ಎಂದು ಹೇಳಿಕೊಳ್ಳಬಾರದು ಎಂದರು. ಬಸವಣ್ಣ ದಯೆಯೇ ಧರ್ಮದ ಮೂಲ ಎಂದಿದ್ದಾರೆ. ಆದರೆ, ಇಂದು ಭಯವೇ ಧರ್ಮದ ಮೂಲವಾಗಿದೆ ಎಂದು ಲೇವಡಿ ಮಾಡಿದರು.
ಉರಿಲಿಂಗಿಪೆದ್ದಿಮಠದ ಜಾnನಪ್ರಕಾಶ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಚಿಂತಕಿ ನಂದಾ ಹಳೆಮನೆ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಚಿಂತಕಿ ಡಾ.ರತಿರಾವ್, ರಘೋತ್ತಮ್ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.