Advertisement

BJP: ಸ್ಪೀಕರ್‌ ಯು.ಟಿ.ಖಾದರ್‌ ಕಾರ್ಯಶೈಲಿ: ಬಿಜೆಪಿ ಅತೃಪ್ತಿ

11:03 PM Dec 14, 2023 | Team Udayavani |

ಬೆಳಗಾವಿ: ಪಕ್ಷದ ಕಾರ್ಯಕ್ರಮಕ್ಕೆ ಅನುಮತಿ ಪಡೆದು ಹೋಗಿದ್ದರೂ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ, ಕಲಾಪ ಮುಂದುವರಿಸಿ ಮಸೂದೆಗಳ ಅಂಗೀಕಾರಕ್ಕೆ ಅವಕಾಶ ನೀಡಿದ್ದರ ಬಗ್ಗೆ ಬಿಜೆಪಿ ಸದಸ್ಯರು, ಸ್ಪೀಕರ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಗುರುವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಬುಧವಾರ ನಿಮ್ಮ ಅನುಮತಿ ಪಡೆದುಕೊಂಡೇ ನಾವು ನಮ್ಮ ಪಕ್ಷದ ಕಾರ್ಯಕ್ರಮಕ್ಕೆ ಹೋಗಿದ್ದೆವು. ಸಂಜೆ 5 ಗಂಟೆಗೆ ಸದನ ಮುಗಿಸುವುದಾಗಿ ಮಾತು ಕೊಟ್ಟು, ಬಳಿಕ ಅದಕ್ಕೆ ಬದ್ಧರಾಗಿ ರದೆ ಕಲಾಪ ಮುಂದುವರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಿಜೆಪಿಯ ಸುನಿಲ್‌ಕುಮಾರ್‌, ಆರಗ ಜ್ಞಾನೇಂದ್ರ ದನಿಗೂಡಿಸಿದರು. ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ನೀವು ಅಧಿಕಾರದಲ್ಲಿದ್ದಾಗ ಸದನ ಹೇಗೆ ನಡೆಸಿದ್ದೀರಿ ಎಂಬುದನ್ನು ಜ್ಞಾಪಿಸಿಕೊಳ್ಳಿ ಎಂದು ಎದುರೇಟು ನೀಡಿದರು.

ಸ್ಪೀಕರ್‌ ಯು.ಟಿ.ಖಾದರ್‌ ಮಾತನಾಡಿ, ನಿಮ್ಮ ಅನುಪಸ್ಥಿತಿಯಲ್ಲಿ ಮಸೂದೆ ಮಂಡನೆ ಉದ್ದೇಶ ಇರಲಿಲ್ಲ. ಪೂರಕ ಅಂದಾಜು ಮೇಲಿನ ಮಸೂದೆ ಪರಿಷತ್‌ಗೆ ಹೋಗಿ ಅಂಗೀಕಾರವಾಗಿ ಶುಕ್ರವಾರ ವಿಧಾನಸಭೆಗೆ ಆಗಮಿಸಬೇಕಾಗಿದೆ. ಅದಕ್ಕಾಗಿ ಅದನ್ನು ಅಂಗೀಕರಿಸಲಾಯಿತು. ವಕೀಲರ ರಕ್ಷಣೆ ಮಸೂದೆ ವಿಪಕ್ಷದವರು ಚರ್ಚಿಸಲಿ ಎಂಬ ಕಾರಣಕ್ಕೆ ಅಂಗೀಕಾರಕ್ಕೆ ಅವಕಾಶ ನೀಡಿಲ್ಲ. ನಿಮ್ಮದೇ ಪಕ್ಷದ ಹಲವು ಸದಸ್ಯರು ಕಲಾಪದಲ್ಲಿ ಪಾಲ್ಗೊಂಡಿದ್ದರು, ಜೆಡಿಎಸ್‌ ಶಾಸಕರೂ ಇದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next