Advertisement

ಆರ್ಥಿಕ ಶಿಸ್ತು ಬೆಳಸಿಕೊಂಡು‌ ಸಾಧನೆ ಮಾಡಬೇಕು : ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

01:36 PM Feb 27, 2022 | Team Udayavani |

ಶಿರಸಿ : ಧರ್ಮ ಮಾರ್ಗದಲ್ಲಿ ಅರ್ಥ ಧರಿಸಿಕೊಂಡರೆ ಕಾಮ, ಮೋಕ್ಷ ಸಾಧನೆ ಸಾಧ್ಯ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಅವರು ಭಾನುವಾರ ನಗರದ ಭಾವನಾ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಬೆಳ್ಳಿ ಹಬ್ಬಕ್ಕೆ ಚಾಲನೆ ನೀಡಿ‌ ಮಾತನಾಡಿದರು.

ನ್ಯಾಯ‌ ಮಾರ್ಗದ ಹಣ ವಯಕ್ತಿಕ, ಆರ್ಥಿಕ ಜೀವನದ ಯಶಸ್ಸು ಸಾಧ್ಯ. ಅನ್ಯ ಚಟುವಟಿಕಟೆಯಿಂದ ಹಣ ಮಾಡಿದರೆ ಅದು ಅನ್ಯ ಚಟುವಟಿಕೆಗೇ ಬಳಸಲಾಗುತ್ತದೆ. ಯಾರಿಗೂ ಹಣ ಗಳಿಸುವದೇ ಗುರಿ ಆಗಬಾರದು. ಹಣ ಸಂಪಾದನೆ‌ ಮಾತ್ರ ಓದು, ಕೆಲಸದ ಗುರಿ ಆಗಬಾರದು. ದುಡಿದ ಹಣದ ಸದ್ಭಳಕೆ ಕೂಡ ಬೇಕು ಎಂದೂ ಹೇಳಿದರು.

ಯಾರ ಆಸೆಗೆ‌ ಮಿತಿಯಿಲ್ಲ. ಎಲ್ಲರೂ ಆರ್ಥಿಕ ಶಿಸ್ತು ಬೆಳಸಿಕೊಂಡು‌ ಸಾಧನೆ ಮಾಡಬೇಕು. ಬ್ಯಾಂಕ್ ಕೂಡ ಹಿಂದಿನಂತೆ‌ ಹೆಸರು ಉಳಸಿಕೊಂಡು ಕೆಲಸ ಮಾಡಬೇಕು ಎಂದ ಅವರು, ಯಾರೇ ಸಮಾಜಕ್ಕೆ, ಆರ್ಥಿಕ ಲೋಪ‌ ಮಾಡಿದರೆ ಕಾನೂನು ಬಿಡುವದಿಲ್ಲ ಎಂದೂ ವಿವರಿಸಿದರು.

ಸಾಲ ಪಡೆದು ಸಾಧಿಸಿದವರನ್ನೂ ಪರಿಚಯಿಸಬೇಕು ಎಂದ ಅವರು,‌ಸಮಾಜವನ್ನೂ‌ ಮೀರಿ ಬೆಳೆದ ಸಂಸ್ಥೆ ಇದಾಗಿದೆ ಎಂದರು.

Advertisement

ಇದನ್ನೂ ಓದಿ : ಕಾಯಿಲೆಗಳ ನಿರ್ಮೂಲನೆಗಾಗಿ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಿ: ತಹಸೀಲ್ದಾರ್

ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ್ ನಾಯಕ, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ ಸಂಸ್ಥೆ ಅಧ್ಯಕ್ಷ ರತ್ನಾಕರ‌ ಲೋಖಂಡೆ, ಉಪಾಧ್ಯಕ್ಷ ಜಯಪ್ರಕಾಶ‌ ಮೂಳೆ, ನಿರ್ದೇಶಕರಾದ ವಿಜಯಕುಮಾರ‌ ಮೂಳೆ, ನಾಗಾನಂದ ಶೇಂಡಗೆ, ಸುರೇಶ ತೇಲ್ಕರ, ವಿಲಾಸ ಲೋಖಂಡೆ, ಪ್ರತಾಪ‌ ಮೂಳೆ, ಮೋಹನ ಮೂಡೊ, ರಾಜಾ ಸರ್ವದೆ, ನಿತಿನ್ ಕುಮಾರ ಭಟ್ಟಿ, ಮಹಾಬಲೇಶ್ವರ ಬೋಂಗಾಳೆ, ಸೀಮಾ‌ ಮೂಡಿ, ದೀಪಾ ತಿರುಮಲೆ ಇತರರು ಇದ್ದರು. ಅರ್ಚನಾ ಬೊಂಗಾಳೆ ನಿರ್ವಹಿಸಿದರು‌. ವ್ಯವಸ್ಥಾಪಕ‌ ನಿರ್ದೇಶಕ ರಾಜಪ್ಪ ಜಿ ನಿರ್ವಹಿಸಿದರು. ಇದೇ ವೇಳೆ ಸ್ಮರಣ ಸಂಚಿಕೆ ಬಿಡಡು.

Advertisement

Udayavani is now on Telegram. Click here to join our channel and stay updated with the latest news.

Next