Advertisement

ಕಲಾಪ ಬಹಿಷ್ಕಾರ ಹಿನ್ನೆಲೆ: ಕಾಂಗ್ರೆಸ್ ನಾಯಕರಿಗೆ ಸಂಧಾನಕ್ಕೆ ಆಹ್ವಾನ

12:00 PM Dec 10, 2020 | keerthan |

ಬೆಂಗಳೂರು: ಚರ್ಚೆಗೆ ಅವಕಾಶ ನೀಡದೆ ಗೋ ಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ಮಾಡಿದ ಸರ್ಕಾರದ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಇಂದಿನ ಕಲಾಪವನ್ನು ಬಹಿಷ್ಕರಿಸಿದೆ. ಈ ಹಿನ್ನಲೆಯಲ್ಲಿ ಸಂಧಾನಕ್ಕೆ ಬರುವಂತೆ ಕಾಂಗ್ರೆಸ್ ನಾಯಕರಿಗೆ ಸ್ಪೀಕರ್ ಕಚೇರಿಯಿಂದ ಆಹ್ವಾನ ನೀಡಲಾಗಿದೆ.

Advertisement

ಸಂಧಾನಕ್ಕೆ ಬರುವಂತೆ ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಸಿದ್ದರಾಮಯ್ಯ ಗೆ ಆಹ್ವಾನ ನೀಡಿದ್ದಾರೆ. ಆದರೆ ಇಂದು ಕಾಂಗ್ರೆಸ್ ನ ಶಾಸಕಾಂಗ ಸಭೆ ನಡೆಯುತ್ತಿದೆ. ವಿಶಾಲಾಕ್ಷಿ ಅವರು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯುತ್ತಿರುವ ಕಚೇರಿಗೆ ಆಗಮಿಸಿ ಸಿದ್ದರಾಮಯ್ಯಗೆ ಆಹ್ವಾನ ನೀಡಿದರು.

ಇದನ್ನೂ ಓದಿ:ಎಪಿಎಂಸಿ ಕಾಯ್ದೆಯಿಂದ ರೈತರ ಆದಾಯ ದ್ವಿಗುಣ: ಪ್ರತಾಪ್ ಸಿಂಹ ನಾಯಕ್

ಸಿಎಲ್ ಪಿ ಸಭೆ ನಂತರ ಸಂಧಾನಕ್ಕೆ ಬರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಲಹಾ ಸಮಿತಿಯಲ್ಲಿ ಹೊಸ ಮಸೂದೆ ಮಂಡನೆ ಮಾಡುವುದಿಲ್ಲವೆಂದು ಹೇಳಿ ಮಸೂದೆ ಮಂಡನೆ ಮಾಡಿರುವುದು ತಪ್ಪು. ಈ ವೇಳೆ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ಸಿದ್ದರಾಮಯ್ಯ ಬುಧವಾರ ಕಲಾಪದಲ್ಲೇ ಆಕ್ಷೇಪವೆತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next