Advertisement

50 ವರ್ಷಗಳ ಬಳಿಕ ಬಿಹಾರ ಸ್ಪೀಕರ್‌ ಸ್ಥಾನಕ್ಕೆ ಚುನಾವಣೆ

02:39 AM Nov 26, 2020 | mahesh |

ಪಾಟ್ನಾ: ಬಿಹಾರ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಎನ್‌ಡಿಎಯ ವಿಜಯ ಕುಮಾರ್‌ ಸಿನ್ಹಾ ಬುಧವಾರ ಆಯ್ಕೆಯಾಗಿ ದ್ದಾರೆ. ಅವರು ಆರ್‌ಜೆಡಿಯ ಅವಧ್‌ ಬಿಹಾರ್‌ ಚೌಧರಿ ಅವರನ್ನು 12 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಗಮನಾರ್ಹ ಅಂಶವೆಂದರೆ 1969ರ ಬಳಿಕ ಇದೇ ಮೊದಲ ಬಾರಿಗೆ ಬಿಹಾರ ವಿಧಾನಸಭೆ ಯಲ್ಲಿ ಸ್ಪೀಕರ್‌ ಸ್ಥಾನಕ್ಕೆ ಚುನಾವಣೆ ನಡೆದಿದೆ. ಒಟ್ಟು 50 ವರ್ಷಗಳ ಅವಧಿ ಯಲ್ಲಿ ಸ್ಪೀಕರ್‌ ಹುದ್ದೆಗೆ ಸಹಮತದಿಂದಲೇ ಆಯ್ಕೆ ಪ್ರಕ್ರಿಯೆ ನಡೆಸುತ್ತಾ ಬರಲಾಗುತ್ತಿತ್ತು.

Advertisement

ಎನ್‌ಡಿಎ ಶಾಸಕರಿಗೆ ರಾಂಚಿಯಿಂದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಫೋನ್‌ ಮಾಡಿ ಸಚಿವ ಸ್ಥಾನದ ಆಮಿಷವೊಡ್ಡಿ ಸರಕಾರ ಪತನಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಸುಶೀಲ್‌ ಮೋದಿ ಮಂಗಳವಾರ ಮಾಡಿದ್ದ ಟ್ವೀಟ್‌ ವಿಧಾನಸಭೆಯಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿತು.

ಎಚ್‌ಎಎಂ(ಎಸ್‌)ನ ಮೂವರು ಶಾಸಕರು, ಎಐಎಂಐಎಂನ ಒಬ್ಬ ಶಾಸಕ, ಬಿಎಸ್‌ಪಿಯ ಒಬ್ಬ ಶಾಸಕ ಮತದಾನದಲ್ಲಿ ಭಾಗವಹಿಸಲಿಲ್ಲ.

ನಿತೀಶ್‌ ಗೆದ್ದ ಕಾರಣಕ್ಕೆ ಬೆರಳು ಕತ್ತರಿಸಿಕೊಂಡ
ಸತತವಾಗಿ ನಾಲ್ಕನೇ ಬಾರಿಗೆ ಸಿಎಂ ಆಗಿ ನಿತೀಶ್‌ ಕುಮಾರ್‌ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಅಭಿಮಾನಿಯೊಬ್ಬ ನಾಲ್ಕನೇ ಬಾರಿಗೆ ಬೆರಳು ಕತ್ತರಿಸಿಕೊಂಡಿದ್ದಾನೆ. ಜೆಹಾನಾಬಾದ್‌ ಜಿಲ್ಲೆಯ ವೈನಾ ಗ್ರಾಮದ ಅನಿಲ್‌ ಶರ್ಮಾ (45) ಎಂಬಾತ ಎಡಗೈಯ ಬೆರಳನ್ನು ಸ್ಥಳೀಯ ದೇಗುಲಕ್ಕೆ ಕತ್ತರಿಸಿ ಅರ್ಪಿಸಿದ್ದಾನೆ. 2015ರಲ್ಲಿ ಮೊದಲ ಬಾರಿಗೆ ನಿತೀಶ್‌ ಕುಮಾರ್‌ ಸಿಎಂ ಆಗಿದ್ದಕ್ಕೆ ಬೆರಳು ಅರ್ಪಿಸಿದ್ದ. 2005, 2010, 2015, 2018ರಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾಗ ಇದೇ ರೀತಿ ಮಾಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next