Advertisement
ನಾನು ಹೀಗೆ ಕೇಳ್ತೀನಿ ಅಂತ ಬೇಜಾರಾಗ್ಬೇಡ. ನಾನೇನಿದ್ರೂ ಸ್ಟ್ರೇಟ್ ಫಾರ್ವರ್ಡ್. ಹಿಂದೊಂದು ಮುಂದೊಂದು ಮಾತಾಡೋದು ನಂಗೊತ್ತಿಲ್ಲ. ಹಾಗೆ ಮಾತಾಡೋರನ್ನ ಕಂಡ್ರೂ ನನಗಾಗಲ್ಲ. ಬೀಸೋ ಗಾಳಿ, ಸುರಿಯೋ ಮಳೆ, ಸೂರ್ಯನ ಬೆಳಕು, ಅಷ್ಟೇ ಏಕೆ? ಉರಿಯೋ ಬೆಂಕಿಯೂ ಪ್ರಕೃತಿಯಲ್ಲಿ ತಾರತಮ್ಯ ಮಾಡದೇ ಬದುಕುವ ಪಾಠ ಹೇಳುತ್ತಿವೆ. ಜಗತ್ತಿನ ಯಾವ ಜೀವಿಗೂ ಇಲ್ಲದ ಬುದ್ಧಿವಂತಿಕೆ, ವಿವೇಚನೆ, ವೈಚಾರಿಕತೆ, ಜ್ಞಾನ, ತರ್ಕ ಇರೋ ಮನುಷ್ಯನ ಈ ಪ್ರೀತಿಯ ವಿಷಯದಲ್ಲಿ ಅದ್ಯಾಕೆ ಹೀಗಾಡ್ತಾನೋ ಗೊತ್ತಿಲ್ಲ. ಇದು ನಿಮ್ಮನೆ ಕಥೆ ಮಾತ್ರವಲ್ಲ, ಎಲ್ಲರದೂ. ಜಾತಿ, ಅಂತಸ್ತಿನ ಅಡ್ಡಗೋಡೆ ಕಟ್ಟುವ ಜನ- ಬೆಳ್ಳಿ-ಬಂಗಾರ, ವಜ್ರ-ವೈಢೂರ್ಯಕ್ಕಿಂತಲೂ ಬೆಲೆ ಬಾಳ್ಳೋ ಪ್ರೀತಿಯ ಆಭರಣವನ್ನು ತಿರಸ್ಕರಿಸಿಬಿಡುತ್ತಾರೆ. ಬಹಳ ಓದಿ ತಿಳಿದಿರೋ ನಿಮ್ಮಪ್ಪಾಜಿಗೆ ನನ್ನ-ನಿನ್ನ ಪ್ರೀತಿ ವಿಷಯದಲ್ಲಿ ಇಂತಹ ಕ್ಷುಲ್ಲಕ ವಿಚಾರ ಇರದೇ ಇರಬಹುದು. ಅವರೊಂದಿಗೆ ಮನಸ್ಸು ಬಿಚ್ಚಿ ಮಾತಾಡು. ಇಲ್ಲವೇ ನನಗೆ ಮಾತಾಡಲು ಬಿಡು.
ಅಶೋಕ ವಿ ಬಳ್ಳಾ