Advertisement
ಭಾನುವಾರ “ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ವಿವಿಧ ಭಾಷೆಗಳಲ್ಲಿ ಇರುವ ಹಾಡುಗಳನ್ನು ಹಾಡಿ ವಿಡಿಯೋ ಮಾಡಿ, ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಬೇಕು. ಇಂಥ ಕ್ರಮದ ಮೂಲಕ ಸ್ಥಳೀಯ ಭಾಷೆಗಳ ಜನಪ್ರಿಯತೆಗೆ ನೆರವಾಗಬೇಕು ಎಂದು ಸಲಹೆ ನೀಡಿದ್ದಾರೆ.
ನಮ್ಮ ದೇಶದ ಸಂಗೀತ ವ್ಯವಸ್ಥೆ ಜಗತ್ತಿನ ಎಲ್ಲರಿಗೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ಕೆಲವು ವರ್ಷಗಳ ಹಿಂದೆ ಹಲವು ದೇಶಗಳ ಸಂಗೀತಗಾರರು ಮಹಾತ್ಮಾ ಗಾಂಧಿ ಅವರಿಗೆ ಜನಪ್ರಿಯವಾಗಿರುವ “ವೈಷ್ಣವ ಜನತೋ’ ಹಾಡನನ್ನು ಮನಮುಟ್ಟುವಂತೆ ಹಾಡಿದ್ದೇ ಸೂಕ್ತ ಉದಾಹರಣೆ ಎಂದಿದ್ದಾರೆ.
Related Articles
Advertisement
ತಾಂಜೇನಿಯಾದ ಕಿಲಿ ಪೌಲ್ ಮತ್ತು ನಿಲೀಮಾ ಅವರು ದೇಶದ ಹಾಡುಗಳಿಗೆ ಲಿಪ್‌ಸಿಂಕ್ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ನಮ್ಮ ದೇಶದ ಮಕ್ಕಳೂ ವಿವಿಧ ರಾಜ್ಯಗಳ ಹಾಡುಗಳಿಗೆ ಲಿಪ್ ಸಿಂಕ್ ಮಾಡಲಿ ಎಂದೂ ಮೋದಿ ಹೇಳಿದ್ದಾರೆ.
ಇದೇ ವೇಳೆ, ದೇಶದಲ್ಲಿ ತ್ರಿವಳಿ ತಲಾಖ್ ಕಾನೂನು ಜಾರಿಯಾದ ಬಳಿಕ ಇಂಥ ಪ್ರಕರಣಗಳ ಸಂಖ್ಯೆ ಶೇ.80ರಷ್ಟು ಇಳಿಮುಖವಾಗಿದೆ ಎಂದೂ ಅವರು ಹೇಳಿದ್ದಾರೆ.
ಅಮೂಲ್ಯ ವಸ್ತುಗಳು ದೇಶಕ್ಕೆ:ದೇಶದಿಂದ ಹಿಂದಿನ ಹಲವು ವರ್ಷಗಳ ಅವಧಿಯಲ್ಲಿ ಕಳವಾಗಿದ್ದ ಅಮೂಲ್ಯ ವಸ್ತುಗಳನ್ನು ಮತ್ತೆ ವಾಪಸ್ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2013ರ ವರೆಗೆ ಕೇವಲ 13 ಪ್ರಾಚೀನ ಕಾಲದ ಅಮೂಲ್ಯ ವಿಗ್ರಹಗಳನ್ನು ಕಳವು ಮಾಡಲಾಗಿತ್ತು. ಆದರೆ, ಕಳೆದ ಏಳು ವರ್ಷಗಳ ಅವಧಿಯಲ್ಲಿ 200ಕ್ಕೂ ಅಧಿಕ ಪ್ರಾಚೀನ ವಿಗ್ರಹ ಮತ್ತು ಇತಿಹಾಸದ ಅಮೂಲ್ಯ ವಸ್ತುಗಳನ್ನು ದೇಶಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.