ಕಲಬುರಗಿ: ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕುಷ್ಠರೋಗ ವಿಭಾಗದ ಸಂಯುಕ್ತ ಆಶ್ರಯದದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಹಸಿರು ನಿಶಾನೆ ತೋರಿಸುವ ಮೂಲಕ ಶುಕ್ರವಾರ ಚಾಲನೆ ನೀಡಿದರು.
ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕ ಡಾ| ಬಿ.ಎನ್. ಜೋಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಮಾಧವ್‌ರಾವ್ ಪಾಟೀಲ ಕೆ., ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ| ಶರಣಬಸಪ್ಪಾ ಕ್ಯಾತ್ನಾಳ, ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಹಾಗೂ ನರ್ಸಿಂಗ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು, ಬೀದಿ ನಾಟಕ ತಂಡನ್ನೊಳಗೊಂಡ ಜಾಥಾವು ಜಿಲ್ಲಾ ಆಸ್ಪತ್ರೆ ಆವರಣ ಆರಂಭಗೊಂಡು ಎಸ್.ಟಿ.ಬಿ.ಟಿ. ಜಗತ್ ವೃತ್ತದಲ್ಲಿ ಬೀದಿನಾಟಕ ತಂಡದಿಂದ ಪ್ರದರ್ಶನ ಮಾಡಲಾಯಿತು. ಸ್ಪರ್ಶ ಕುಷ್ಠ ಅರಿವು ಘೋಷಣೆಯೊಂದಿಗೆ ಹಳೆ ಜಿಲ್ಲಾ ಪಂಚಾಯತಿಗೆ ಆಗಮಿಸಿ ಕೊನೆಗೊಂಡಿತು.
ಹಳೆಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕಿ ಚನ್ನಮಲ್ಲಯ್ಯ ಹಿರೇಮಠ ಉದ್ಘಾಟಿಸಿದರು.
ನಿವೃತ್ತ ಸಹಾಯಕ ಕುಷ್ಠರೋಗ ಅಧಿಕಾರಿ ಎಂ.ಪಿ.ಕಾಂಬಳೆ ಕುಷ್ಠರೋಗದ ಪ್ರಾರಂಭಿಕ ಹಂತ, ಮುಜಾಗೃತಾ ಕ್ರಮ, ಅದರ ಉಪಚಾರ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಮಾಧವ್‌ರಾವ್ ಪಾಟೀಲ ಕೆ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧಿಧೀಕ್ಷಕ ಡಾ| ಬಿ.ಎನ್. ಜೋಶಿ, ಜಿಲ್ಲಾ ಕುಷ್ಟರೋಗ ಅಧಿಕಾರಿ ಡಾ| ಶರಣಬಸಪ್ಪಾ ಕ್ಯಾತ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ವೈದ್ಯಾಧಿಕಾರಿ ಡಾ| ಶರಣಬಸಪ್ಪಾ ಗಣಜಲಖೇಡ, ಡಾ| ವಿಜಯಲಕ್ಷ್ಮೀ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ರಾಜೇಂದ್ರ ಭಾಲ್ಕಿ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ| ದೀಪಕ್‌ಕುಮಾರ ಸುಕೆ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳಾದ ಡಾ| ಅಂಬಾರಾಯ ಎಸ್.ರುದ್ರವಾಡಿ ಪಾಲ್ಗೊಂಡಿದ್ದರು.
ಜಿಲ್ಲಾ ಕುಷ್ಠರೋಗ ಅಧಿಕಾರಿಗಳ ಕಾರ್ಯಾಲಯದ ಹಿರಿಯ ಆರೋಗ್ಯ ಸಹಾಯಕರಾದ ರಾಜು ಧಾಬೀಮನಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಘೋಷಣೆ ಬೋಧಿಸಿದರು. ನಾಗರಾಜ ಬಿರಾದಾರ ವಂದಿಸಿದರು.