Advertisement

ಮಾರ್ಚ್‌ನಿಂದ 4 ಲಕ್ಷ ಕೇಂದ್ರಗಳಲ್ಲಿ ಸ್ಪರ್ಶ್‌ ಸೇವೆ ಲಭ್ಯ

08:59 PM Feb 22, 2022 | Team Udayavani |

ನವದೆಹಲಿ: ದೇಶದ ಮಾಜಿ ಸೈನಿಕರಿಗೆ ಪಿಂಚಣಿ ಸಂಬಂಧಿ ಆನ್‌ಲೈನ್‌ ಸೇವೆಗಳನ್ನು ಒದಗಿಸುವ “ಸ್ಪರ್ಶ್‌’ ಪೋರ್ಟಲ್‌ನ ಸೇವೆಯು ಸದ್ಯದಲ್ಲೇ ದೇಶಾದ್ಯಂತ 4 ಲಕ್ಷ ಕೇಂದ್ರಗಳಲ್ಲಿ ಲಭ್ಯವಾಗಲಿದೆ.

Advertisement

ಡಿಜಿಟಲ್‌ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರದ ರಕ್ಷಣಾ ಲೆಕ್ಕಪತ್ರ ಇಲಾಖೆ(ಡಿಎಡಿ)ಯು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲೇ ಈ ಸೇವೆಯನ್ನು ಆರಂಭಿಸಿದೆ.

ಈಗ ಸಿಎಸ್‌ಇ ಇ-ಗವರ್ನೆನ್ಸ್‌ ಸರ್ವಿಸಸ್‌ ಇಂಡಿಯಾ ಲಿ.ನೊಂದಿಗೆ ಇದೇ 24ರಂದು ರಕ್ಷಣಾ ಲೆಕ್ಕಪತ್ರ ಇಲಾಖೆಯು ಒಪ್ಪಂದವೊಂದಕ್ಕೆ ಸಹಿ ಹಾಕಲಿದ್ದು, ಮಾರ್ಚ್‌ನಿಂದಲೇ 4 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸ್ಪರ್ಶ್‌ ಸೇವೆಗಳು ಲಭ್ಯವಾಗುವಂತೆ ಮಾಡಲಿದೆ.

ಇದರಿಂದಾಗಿ ದುರ್ಗಮ ಪ್ರದೇಶಗಳಲ್ಲಿ ನೆಲೆಸಿರುವ, ಕನೆಕ್ಟಿವಿಟಿ ಸಮಸ್ಯೆಯಿರುವಂಥ ಮಾಜಿ ಯೋಧರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಪಿಂಚಣಿ ಪಡೆಯಲು ಸುಲಭವಾಗಲಿದೆ.

6 ತಿಂಗಳಲ್ಲಿ ಎಲ್ಲರಿಗೂ ಆನ್‌ಲೈನ್‌ ಪಿಂಚಣಿ:
ಯಾವುದೇ ಮಧ್ಯಂತರ ಸಂಸ್ಥೆಯನ್ನು (ಬ್ಯಾಂಕ್‌) ಅವಲಂಬಿಸದೇ ನೇರವಾಗಿ ನಿವೃತ್ತ ಯೋಧರ ಖಾತೆಗಳಿಗೆ ಪಿಂಚಣಿ ಮೊತ್ತವನ್ನು ಜಮೆ ಮಾಡುವ ಕೆಲಸವನ್ನು ಸ್ಪರ್ಶ ಅಥವಾ ಪಿಂಚಣಿ ಆಡಳಿತ ವ್ಯವಸ್ಥೆ(ರಕ್ಷಾ) ಮಾಡುತ್ತದೆ. ದೇಶದಲ್ಲಿ 33 ಲಕ್ಷ ರಕ್ಷಣಾ ಪಿಂಚಣಿದಾರರಿದ್ದಾರೆ. ಈ ಪೈಕಿ 5 ಲಕ್ಷದಷ್ಟು ಮಂದಿ ಈ ಹೊಸ ವ್ಯವಸ್ಥೆಗೆ ಬದಲಾಗಿದ್ದಾರೆ. ಮುಂದಿನ 6 ತಿಂಗಳಲ್ಲಿ ಎಲ್ಲರೂ ಸ್ಪರ್ಶ್‌ ಪೋರ್ಟಲ್‌ ಬಳಕೆ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಸರ್ಕಾರಕ್ಕೂ ಉಳಿತಾಯ:
ಪಿಂಚಣಿದಾರರೆಲ್ಲರೂ ಆನ್‌ಲೈನ್‌ ವ್ಯವಸ್ಥೆಗೆ ಬದಲಾದರೆ, ಕೇಂದ್ರ ಸರ್ಕಾರವು ಪ್ರತಿ ತಿಂಗಳು ಬ್ಯಾಂಕುಗಳಿಗೆ ಪಿಂಚಣಿ ಪ್ರೊಸೆಸಿಂಗ್‌ ಶುಲ್ಕ ಪಾವತಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಹೀಗಾಗಿ, ಸರ್ಕಾರಕ್ಕೆ ವಾರ್ಷಿಕ 250 ಕೋಟಿ ರೂ. ಉಳಿತಾಯವಾಗಲಿದೆ. ಪ್ರಸ್ತುತ ದೇಶದಲ್ಲಿ 800ರಷ್ಟು ಸ್ಪರ್ಶ್‌ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next