Advertisement

ನ್ಯಾ|ಕರ್ಣನ್‌ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಕಿಡಿ

03:45 AM Jul 07, 2017 | Harsha Rao |

ಹೊಸದಿಲ್ಲಿ: ನ್ಯಾ| ಸಿ.ಎಸ್‌.ಕರ್ಣನ್‌ ಪ್ರಕರಣದಲ್ಲಿ ಮಾಧ್ಯಮಗಳ ವರ್ತನೆಯನ್ನು ಖಂಡಿಸಿರುವ ಸುಪ್ರೀಂ ಕೋರ್ಟ್‌, ಈ ವಿಷಯದಲ್ಲಿ “ಮಾಧ್ಯಮಗಳು ಬೇಜವಾಬ್ದಾರಿಯಿಂದ ನಡೆದುಕೊಂಡಿವೆ’ ಎನ್ನುವ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡಿದೆ.

Advertisement

ಭಾರತದ ನ್ಯಾಯಾಂಗ ವ್ಯವಸ್ಥೆಗೆ ಆಗುತ್ತಿರುವ ಹಾನಿ ಗಮನಿಸುವ ಗೋಜಿಗೆ ಹೋಗದ ಮಾಧ್ಯಮಗಳು, ನ್ಯಾ| ಕರ್ಣನ್‌ ಅಲೆ ಮೇಲೆ ಸವಾರಿ ಮಾಡಿವೆ ಎಂದು ನ್ಯಾಯಾ ಲಯ ಹೇಳಿದೆ. ನ್ಯಾ| ಕರ್ಣನ್‌ರಿಗೆ ಜೈಲು ಶಿಕ್ಷೆ ತೀರ್ಪಿನ ಪ್ರತಿಯಲ್ಲಿ ಸಿಜೆಐ ಜೆ.ಎಸ್‌.ಖೇಹರ್‌ ನೇತೃತ್ವದ 7 ನ್ಯಾಯ ಮೂರ್ತಿಗಳನ್ನೊಳಗೊಂಡ ಪೀಠ, ಭಾರತ ಹಾಗೂ ವಿದೇಶಿ ಮಾಧ್ಯಮಗಳ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾ| ಕರ್ಣನ್‌ ಅವರ ಅಕ್ರಮ ಆದೇಶಗಳು ಮತ್ತು ಅಸಂಬದ್ಧ ಹೇಳಿಕೆಗಳಿಂದ ಭಾರತದ ನ್ಯಾಯಾಂಗ ವ್ಯವಸ್ಥೆ ನಗೆಪಾಟಲಿ ಗೀಡಾಗಿದೆ. ಇದರೊಂದಿಗೆ ಭಾರತ ಸೇರಿ ಬಿಬಿಸಿ ರೀತಿಯ ಅಂತಾರಾಷ್ಟ್ರೀಯ ಮಾಧ್ಯಮಗಳು ಕರ್ಣನ್‌ ಹೇಳಿಕೆಗಳು, ಪ್ರಕರಣಕ್ಕೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ನೀಡಿ ನ್ಯಾಯಾಂಗ ವ್ಯವಸ್ಥೆಯನ್ನು ಮುಜುಗರಕ್ಕೀಡುಮಾಡಿವೆ,’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next