Advertisement

ಸದ್ಯದಲ್ಲೇ ಚಂದ್ರನನ್ನು ಅಪ್ಪಳಿಸಲಿದೆ ರಾಕೆಟ್‌!

08:23 PM Jan 31, 2022 | Team Udayavani |

ಅಡಿಲೇಡ್‌: ಇನ್ನು ಕೆಲವೇ ವಾರಗಳಲ್ಲಿ ರಾಕೆಟ್‌ವೊಂದು ಚಂದ್ರನಿಗೆ ಡಿಕ್ಕಿ ಹೊಡೆಯಲಿದೆ!

Advertisement

ಹೌದು, 2015ರಲ್ಲಿ ಉಡಾವಣೆಯಾದ ರಾಕೆಟ್‌ ಅಂದಿನಿಂದಲೂ ಭೂಮಿ ಮತ್ತು ಚಂದ್ರನ ಸುತ್ತಲೂ ಗಿರಕಿ ಹೊಡೆಯುತ್ತಿತ್ತು. ಈಗ ಅದು ಅತ್ಯಂತ ವೇಗವಾಗಿ ಚಂದ್ರನತ್ತ ಸಂಚರಿಸುತ್ತಿದ್ದು, ಸದ್ಯದಲ್ಲೇ ಚಂದ್ರನಿಗೆ ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

2015ರಲ್ಲಿ ಬಾಹ್ಯಾಕಾಶದ ವಾತಾವರಣ ಪರಿವೀಕ್ಷಣಾ ಉಪಗ್ರಹವನ್ನು ನಭಕ್ಕೆ ಚಿಮ್ಮಿಸಿದ್ದ ರಾಕೆಟ್‌ ಇದು. ಸ್ಪೇಸ್‌ಎಕ್ಸ್‌ ಫಾಲ್ಕನ್‌ 9 ರಾಕೆಟ್‌ನ ಮೇಲ್ಭಾಗದ ಒಂದು ತುಂಡು (ಬಾಹ್ಯಾಕಾಶ ತ್ಯಾಜ್ಯ) ಮಾರ್ಚ್‌ 4ರಂದು ಚಂದ್ರನ ಮೇಲ್ಮೈ ಗೆ ಅಪ್ಪಳಿಸುವ ಸಾಧ್ಯತೆಯಿದೆ.

ಸದ್ಯ ಇದು ಗಂಟೆಗೆ 9 ಸಾವಿರ ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ಅದು ಚಂದ್ರನ ಮತ್ತೊಂದು ಬದಿಯಲ್ಲಿ ಅಪ್ಪಳಿಸುವ ಕಾರಣ, ಭೂಮಿಯಿಂದ ಅದನ್ನು ನೋಡಲು ಸಾಧ್ಯವಿಲ್ಲ ಎಂದಿದ್ದಾರೆ ವಿಜ್ಞಾನಿಗಳು.

ಇದನ್ನೂ ಓದಿ:ಬಡವರಿಗೆ ಮನೆ, ನಿವೇಶನ ಹಂಚಿಕೆಗೆ ಕಾನೂನು ಸರಳೀಕರಣ : ಸಿಎಂ ಬಸವರಾಜ ಬೊಮ್ಮಾಯಿ

Advertisement

ಈ ಬಾಹ್ಯಾಕಾಶ ತ್ಯಾಜ್ಯವು ಚಂದ್ರನನ್ನು ತಾಕುವ ಕಾರಣ, ಚಂದ್ರನಲ್ಲಿ ಒಂದು ಕುಳಿ ನಿರ್ಮಾಣವಾಗಲಿದೆ ಎಂದೂ ಅವರು ಹೇಳಿದ್ದಾರೆ. ಈ ರೀತಿಯ ವಿದ್ಯಮಾನ ನಡೆಯುತ್ತಿರುವುದು ಇದೇ ಮೊದಲಲ್ಲ. 1959ರಲ್ಲಿ ಉಡಾವಣೆ ಮಾಡಲಾದ ಸೋವಿಯತ್‌ ಲೂನಾ 2 ರಾಕೆಟ್‌ ಕೂಡ ಇದೇ ರೀತಿ ಚಂದ್ರನನ್ನು ಅಪ್ಪಳಿಸಿತ್ತು.

2019ರಲ್ಲಿ ಇಸ್ರೇಲ್‌ನ ಬಿಯರ್‌ಶೀಟ್ ಲ್ಯಾಂಡರ್‌ ಕೂಡ ಹಾದಿತಪ್ಪಿ ಹೋಗಿ ಚಂದ್ರನಿಗೆ ಡಿಕ್ಕಿ ಹೊಡೆದಿತ್ತು. 2012ರಲ್ಲಿ ನಾಸಾದ ಎಬ್‌ ಆ್ಯಂಡ್‌ ಫ್ಲೋ ಬಾಹ್ಯಾಕಾಶನೌಕೆ ಉದ್ದೇಶಪೂರ್ವಕವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಅಪ್ಪಳಿಸಿತ್ತು. ಗಂಟೆಗೆ 6 ಸಾವಿರ ಕಿ.ಮೀ. ವೇಗದಲ್ಲಿ ಈ ನೌಕೆ ಡಿಕ್ಕಿ ಹೊಡೆದ ಕಾರಣ, 6 ಮೀಟರ್‌ನ ಕುಳಿ ನಿರ್ಮಾಣವಾಗಿತ್ತು.

ಚಂದ್ರನನ್ನು ಅಪ್ಪಳಿಸುವ ರಾಕೆಟ್‌ ಯಾವುದು?- ಸ್ಪೇಸ್‌ಎಕ್ಸ್‌ ಫಾಲ್ಕನ್‌ 9 ರಾಕೆಟ್‌

ಇದು ಉಡಾವಣೆಯಾಗಿದ್ದು ಯಾವಾಗ?- 2015ರಲ್ಲಿ

ರಾಕೆಟ್‌ನ ವೇಗ – ಗಂಟೆಗೆ 9,000 ಕಿ.ಮೀ.

ಯಾವಾಗ ಅಪ್ಪಳಿಸುತ್ತೆ?- ಮಾರ್ಚ್‌ 4

Advertisement

Udayavani is now on Telegram. Click here to join our channel and stay updated with the latest news.

Next