Advertisement
ಪ್ರಯಾಣಿಸಿದ್ದು ಯಾವಾಗ?ಮೇ 31ರ ಮಧ್ಯ ರಾತ್ರಿ ಭಾರತೀಯ ಕಾಲಮಾನ ಸುಮಾರು 12 ಗಂಟೆ ಹೊತ್ತಿಗೆ, ಫ್ಲಾರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಸಾಕ್ಕೆ ‘ಫಾಲ್ಕನ್ 9’ ರಾಕೆಟ್ ನಲ್ಲಿ ರಾಬರ್ಟ್ ಬೆಹ್ನ್ ಕೆನ್ ಹಾಗೂ ಡಗ್ಲಾಸ್ ಹರ್ಲೆ ಎಂಬಿಬ್ಬರು ಖಗೋಳ ಯಾತ್ರಿಕರು ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ. ಆ ರಾಕೆಟ್ ಬಾಹ್ಯಾಕಾಶಕ್ಕೆ ಆ ವಿಜ್ಞಾನಿಗಳನ್ನು ತಲುಪಿಸಿ ಮತ್ತೆ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಹಿಂದಿರುಗಿತ್ತು! ಇಬ್ಬರು ವಿಜ್ಞಾನಿಗಳು ಇದ್ದ ಸ್ಪೇಸ್ ಕ್ಯಾಪ್ಸೂಲ್, ರಾಕೆಟ್‌ನಿಂದ ಬೇರ್ಪಟ್ಟ ನಂತರ ವಿಜ್ಞಾನಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಿತ್ತು.
ಭಾರತೀಯ ಕಾಲಮಾನದ ಪ್ರಕಾರ, ಆ. 2ರ ಮಧ್ಯರಾತ್ರಿ 12:18ರ ಸುಮಾರಿಗೆ ಖಗೋಳ ಯಾತ್ರಿಗಳಿದ್ದ ಸ್ಪೇಸ್ ಕ್ಯಾಪ್ಸೂಲ್ ಮೆಕ್ಸಿಕೋ ಕೊಲ್ಲಿಯಲ್ಲಿ ಬಂದಿಳಿದಿದೆ. ಅವರು ಬಂದಿಳಿಯುವ ಜಾಗವನ್ನು ಮೊದಲೇ ಗ್ರಹಿಸಿದ್ದ ಸ್ಪೇಸ್ ಎಕ್ಸ್ ತಂತ್ರಜ್ಞರು, ಈಜುಗಾರರೊಂದಿಗೆ ನೌಕೆಯಲ್ಲಿ ಸಾಗಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.
ಹೆಗ್ಗಳಿಕೆಯೇನು?
ಮರುಬಳಕೆ ಮಾಡಬಹುದಾದ ರಾಕೆಟ್‌ನಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸಿ, ಆನಂತರ ಅಲ್ಲಿಂದ ಅವರನ್ನು ಭೂಮಿಗೆ ಸುರಕ್ಷಿತವಾಗಿ ವಾಪಸ್ ಕರೆಯಿಸಿಕೊಂಡ ವಿಶ್ವದ ಮೊದಲ ಖಾಸಗಿ ಕಂಪೆನಿ ಎಂಬ ಹೆಗ್ಗಳಿಕೆಗೆ ಸ್ಪೇಸ್ ಎಕ್ಸ್ ಹಾಗೂ ಅದರ ಮಾಲಕ ಎಲಾನ್ ಮಸ್ಕ್ ಪಾತ್ರರಾಗಿದ್ದಾರೆ. ಖಗೋಳ ಯಾತ್ರೆಯ ಇತಿಹಾಸದಲ್ಲಿ ಇದೊಂದು ಅಪೂರ್ವ ಸಾಧನೆ.
Related Articles
– 468 ಕೋಟಿ ರೂ. ಫಾಲ್ಕನ್-9 ಉಡಾವಣೆಗೆ ತಗುಲಿದ ವೆಚ್ಚ
– 28,163 ಕಿ.ಮೀ. ಭೂಮಿಗೆ ಹಿಂದಿರುಗುವಾಗ ಸ್ಪೇಸ್ ಕ್ಯಾಪ್ಸೂಲ್‌ನ ವೇಗ (ಪ್ರತಿ ಗಂಟೆಗೆ)
Advertisement