ಹೊಸದಿಲ್ಲಿ: ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್ ಹೆಡ್ ನಗರದ ಜೂರಿಯನ್ ಕೊಲ್ಲಿ ತೀರದಲ್ಲಿ ಪತ್ತೆಯಾಗಿರುವ ವಿಚಿತ್ರ ವಸ್ತು ಚಂದ್ರಯಾನ-3ರ ಬಿಡಿಭಾಗವಲ್ಲ. ಬದಲಿಗೆ ಸುಮಾರು 20 ವರ್ಷಗಳ ಹಿಂದೆ ಉಡಾಯಿಸಲಾದ ಭಾರತದ ರಾಕೆಟ್‌ನ ಭಾಗ ವಾ ಗಿರಬಹುದು ಎಂದು ಬಾಹ್ಯಾಕಾಶ ತಜ್ಞರು ಅಂದಾಜಿಸಿದ್ದಾರೆ.
ಸೋಮವಾರ ಪತ್ತೆಯಾದ ಗೋಳಾಕಾರದ ಈ ವಸ್ತುವು ಬಗೆಯಬಗೆಯ ಚರ್ಚೆಗೆ ಕಾರಣವಾಗಿತ್ತು. ಜು.14ರಂದು ಶ್ರೀಹರಿಕೋಟಾದಲ್ಲಿ ಗಗನಕ್ಕೇರಿದ ಚಂದ್ರಯಾನ-3ನ ಅವಶೇಷಗಳ ತುಣು ಕಿರಬಹುದು ಎಂದು ಕೆಲ ವರು ಊಹಿಸಿದ್ದರು. ಇನ್ನೂ ಕೆಲ ವರು ಅದನ್ನು ಅನ್ಯಗ್ರಹ ಜೀವಿಗಳ ವಾಹನ ಎಂದು ತರ್ಕಿಸಿದ್ದರು.
ಮಂಗಳವಾರ ಈ ಕುರಿತು ಮಾತ ನಾಡಿರುವ ಐರೋಪ್ಯ ಬಾಹ್ಯಾಕಾಶ ಕೇಂದ್ರದ ಎಂಜಿನಿಯರ್ ಆ್ಯಂಡ್ರೂ ಬಾಯ್ಡ “ಈ ವಸ್ತುವಿನ ಆಕಾರ ಮತ್ತು ಗಾತ್ರವನ್ನು ನೋಡಿದರೆ ಇದು ಭಾರತದ ಬಾಹ್ಯಾಕಾಶ ನೌಕೆಯ ಮೇಲ್-ಹಂತದ ಎಂಜಿನ್ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಇದು ಈ ವರ್ಷದ್ದಲ್ಲ. ಸುಮಾರು 20 ವರ್ಷಗಳಷ್ಟು ಹಳೆಯದು. ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುತ್ತಾ ಸಾಗುವಾಗ, ಪ್ರಥಮ, ದ್ವಿತೀಯ ಮತ್ತು ತೃತೀಯ ಹಂತದ ಎಂಜಿನ್‌ಗಳು ಸಾಮಾನ್ಯವಾಗಿ ಹಿಂದೂ ಮಹಾಸಾಗರದಲ್ಲಿ ಬೀಳುತ್ತವೆ. ಸಮುದ್ರದ ಅಲೆಗಳ ಹರಿವಿನೊಂದಿಗೆ ಅದು ಈಗ ತೀರಕ್ಕೆ ಬಂದಿರಬಹುದು’ ಎಂದಿದ್ದಾರೆ. ಇದೇ ವೇಳೆ ಆಸೀಸ್ ಬಾಹ್ಯಾಕಾಶ ಸಂಸ್ಥೆ, “ಅದರ ಹತ್ತಿರ ಹೋಗಬೇಡಿ, ಸಮಸ್ಯೆಯಾಗಬಹುದು’ ಎಂದು ಎಚ್ಚರಿಸಿದೆ.
3ನೇ ಹಂತದ ಪ್ರಕ್ರಿಯೆ ಯಶಸ್ವಿ
ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುವಂಥ ಮೂರನೇ ಹಂತದ ಪ್ರಕ್ರಿಯೆಯನ್ನು ಮಂಗಳವಾರ ನಡೆಸಲಾಗಿದ್ದು, ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಜು.20(ಗುರುವಾರ)ರಂದು ಮಧ್ಯಾಹ್ನ 2ರಿಂದ 3 ಗಂಟೆಯೊಳಗೆ ಮುಂದಿನ ಹಂತದ ಕಕ್ಷೆ ಎತ್ತರಿಸುವ ಕಾರ್ಯ ನೆರವೇರಿಸಲಿದ್ದೇವೆ ಎಂದೂ ಮಾಹಿತಿ ನೀಡಿದೆ.