Advertisement

ಕಾಲ ಅಂತರಿಕ್ಷ ಮತ್ತು ರಾಹುಕೇತುಗಳು ಹೀಗಿವೆ ನೋಡಿ…

05:43 AM Dec 26, 2015 | |

ಭಾರತೀಯ ಜೋತಿಷ್ಯಶಾಸ್ತ್ರ ರಾಹು ಹಾಗೂ ಕೇತುಗಳೆಂಬ ಅಸ್ತಿತ್ವದಲ್ಲಿರದ ಛಾಯಾಗ್ರಹಗಳನ್ನು ಗುರುತಿಸಿದೆ. ಆದಿ ಅಂತ್ಯಗಳು ತಿಳಿದಿಲ್ಲ. ಒಂದು ಅಳತೆಯಲ್ಲಿ ನಾವು ಗುರುತಿಸಿಕೊಳ್ಳಬೇಕು ಅಷ್ಟೇ. ಈ ಕಾರಣಕ್ಕಾಗಿಯೇ ಭಾರತೀಯ ಜೋತಿಷ್ಯ ಶಾಸ್ತ್ರ ಭೂಮಿಯನ್ನು ಮಧ್ಯದ ಬಿಂದುವನ್ನಾಗಿ ರೂಪಿಸಿಕೊಂಡಿತು. ಸೂರ್ಯ ಮತ್ತು ಚಂದ್ರರು ಕೂಡಾ ಗ್ರಹಗಳೆ ಆದರು. ಅದರಾಚೆಗಿನ ರಾಹುಕೇತುಗಳೆಂಬ ಛಾಯಾಗ್ರಹಗಳು. ಇವಕ್ಕೆ ಇದೇ ಎಂಬ ಆಸ್ತಿತ್ವ ಇಲ್ಲ. ಆದರೆ ಅವುಗಳ ಪರಿಣಾಮ ನಮ್ಮ ಮೇಲೆ ಬೀಳುತ್ತಲೇ ಇರುತ್ತದೆ. ಇದು ಅಸಂಗತವಾದರೂ ಸತ್ಯ. 

Advertisement

ಕಾಲದ ಪ್ರಾರಂಭ ತಿಳಿದಿಲ್ಲ. ಅದು ಎಲ್ಲಿಂದಲೋ ಪ್ರಾರಂಭವಾಗಿದೆ. ಅಂತರಿಕ್ಷ ಎಷ್ಟು ವ್ಯಾಪಿಸಿಕೊಂಡಿದೆಯೋ ಯಾರಿಗೂ ತಿಳಿದಿಲ್ಲ. ಕನ್ನಡಿಯ ಮುಂದೆ ಕನ್ನಡಿ ಇಟ್ಟರೆ ಪ್ರತಿಬಿಂಬಗಳು ಅಗಣಿತ. ಹೀಗಾಗಿ ಕಾಲ ಹಾಗೂ ಆಂತರಿಕ್ಷದ ವ್ಯಾಪ್ತಿಗೆ ಗೋಚರದ ಇದು ಇಷ್ಟೇ ಅಲ್ಲ ಇದೆ ಎಂಬ ಬಿಂದುಗಳಿಲ್ಲ. ಅಂತೆಯೇ ಭಾರತೀಯ ಜೋತಿಷ್ಯಶಾಸ್ತ್ರ ರಾಹು ಹಾಗೂ ಕೇತುಗಳೆಂಬ ಅಸ್ತಿತ್ವದಲ್ಲಿರದ ಛಾಯಾಗ್ರಹಗಳನ್ನು ಗುರುತಿಸಿದೆ. ಆದಿ ಅಂತ್ಯಗಳು ತಿಳಿದಿಲ್ಲ. ಒಂದು ಅಳತೆಯಲ್ಲಿ ನಾವು ಗುರುತಿಸಿಕೊಳ್ಳಬೇಕು ಅಷ್ಟೇ. ಈ ಕಾರಣಕ್ಕಾಗಿಯೇ ಭಾರತೀಯ ಜೋತಿಷ್ಯ ಶಾಸ್ತ್ರ ಭೂಮಿಯನ್ನು ಮಧ್ಯದ ಬಿಂದುವನ್ನಾಗಿ ರೂಪಿಸಿಕೊಂಡಿತು. ಸೂರ್ಯ ಮತ್ತು ಚಂದ್ರರು ಕೂಡಾ ಗ್ರಹಗಳೆ ಆದರು. ಅದರಾಚೆಗಿನ ರಾಹುಕೇತುಗಳೆಂಬ ಛಾಯಾಗ್ರಹಗಳು. ಇವಕ್ಕೆ ಇದೇ ಎಂಬ ಆಸ್ತಿತ್ವ ಇಲ್ಲ. ಆದರೆ ಅವುಗಳ ಪರಿಣಾಮ ನಮ್ಮ ಮೇಲೆ ಬೀಳುತ್ತಲೇ ಇರುತ್ತದೆ. ಇದು ಅಸಂಗತವಾದರೂ ಸತ್ಯ. 

ಆದಿಶೇಷನ ಮೇಲೆ ಮಲಗಿದ ಮಹಾವಿಷ್ಣು
ನಮ್ಮ ಪುರಾತನದ ಪ್ರಕಾರ ಆದಿಶೇಷನ ಮೇಲೆ ವಿಷ್ಣು ಪವಡಿಸಿದ್ದಾನೆ. ವಿಷ್ಣುವಿನ ಲೋಕ ವೈಕುಂಠ. ಅವನ ಕಾಲೊತ್ತಿ ಸುಹಾಸಕರತೆಯಲ್ಲಿಡುವ ಮಹಾಲಕ್ಷಿ$¾ ಚಂಚಲೆಯಾದರೂ ಲಕ್ಷಿ$¾ ವಿಷ್ಣುವಿನ ಕಾಲೊತ್ತಲು ಗಮನ ಕೇಂದ್ರೀಕರಿಸಿದ್ದಾಳೆ. ಹಾಲ್ಗಡಲ ಮೇಲೆ ವಿಷಜಂತು ಆದಿಶೇಷ ಮಲಗಿದ್ದಾನೆ. ವಿಷ್ಣುವೇ ಆದಿಶೇಷನೆಂಬುದನ್ನು ನಮ್ಮ ಪುರಾಣಗಳು ಹೇಳುತ್ತಲೇ ಬಂದಿದೆ. ಹಾಲಿನ ಕಡಲು ತುಂಬಿದೆ. ಆದಿಶೇಷ ಹಾಸಿಗೆಯಂತೆ ತೇಲಿಕೊಂಡಿದ್ದಾನೆ. ಆದಿಶೇಷನ ಮೇಲೆ ಷ್ಣು ಮಲಗಿದ್ದಾನೆ. ಮಹಾಷ್ಣುನ ವಾಹನ ಗರುಡ,. ಗರುಡ ನಾಗಕುಲಕ್ಕೆ ವೈರಿ. ಅಂದರೆ ವಿಷ್ಣುಗೂ ವೈರಿ? ಅರ್ಥ ಹೀಗೆ ಹೊರಡುತ್ತದೆ. ಲಕ್ಷಿ$¾à ಮಹಾವಿಷ್ಣುವಿನ ಕಾಲನ್ನು ಒತ್ತುತ್ತಿದ್ದಾಳೆ. ಆದಿ ಶೇಷನ ನೆತ್ತಿಯ ಮೇಲೆ ವಿಷ್ಣುವಿನ ಮತ್ತೂಬ್ಬ ಪತ್ನಿಯಾದ 
ಇಳೆ ನೆಲೆನಿಂತಿದ್ದಾಳೆ. ಅವಳು ಬೇರೆಯಲ್ಲ ಲಕ್ಷಿ$¾à ಬೇರೆಯಲ್ಲ ಅಂದರೆ ಲಕ್ಷಿ$¾à ದಾಸಿಯೂ ಹೌದು ನೆತ್ತಿಗೆ ಕಿರೀಟವೂ ಹೌದು. ವಿಶ್ವದ ಪ್ರತಿಯೊಂದು ಅಂಶಗಳು ಭ್ರಮೆ ಮತ್ತು ವಾಸ್ತವಗಳ ನಡುವೆ ಅಡಕಗೊಂಡಿದೆ. ಇದಕ್ಕಾಗಿಯೇ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಪ್ರಪಂಚವನ್ನು ವ್ಯಕ್ತಮಧ್ಯ ಎಂಬುದಾಗಿ ಗುರುತಿಸಿದ. ಪಾರ್ಥನಿಗೆ ಇದನ್ನೇ ತಿಳಿಸಿ ಹೇಳಿದ. ಅದರಾಚೆ ಈಚೆ ನಾನಿದ್ದೇನೆ. ಅವ್ಯಕ್ತನಾಗಿದ್ದೇನೆ ಎಂದ. ಆದರೂ ವಿಶೇಷವಾಗಿ ಒಂದು ದೃಷ್ಟಿ ನೀಡಿ ತನ್ನ ವಿರಾಟ್‌ ರೂಪ ದರ್ಶನ ಮಾಡಿಸಿದ. ರಾಹುಕೇತುಗಳು ಹೀಗಾಗಿ ವ್ಯಕ್ತಮಧ್ಯವಾದ ಭೂಮಿಗೆ ಆಚೆ ಈಚೆಯ ಅವ್ಯಕ್ತಗಳು. ವಿರಾಟರೂಪಗಳು, ವಿರಾಟರೂಪಗಳು. ಅದು ವಿಷಮಯ. ಭೂಮಿ ಅಮೃತಮಯ.

ಅವ್ಯಕ್ತವಾದರೂ ರಾಹುಕೇತುಗಳು ಆಟ ಅಂತಿಥದ್ದಲ್ಲ
ನಮ್ಮ ಆಧುನಿಕ ವಿಜಾnನ ಪಂಚಭೂತಗಳನ್ನು ಗುರುತಿಸಿದೆ. ಪಂಚಭೂತಗಳನ್ನು ನಮ್ಮ ಪುರಾಣಗಳು ಶತಶತಮಾನಗಳಿಂದ ಗುರುತಿಸಿಕೊಂಡು ಬಂದಿದೆ. ಈ ಬಾನು, ಈ ಚುಕ್ಕಿ, ಈ ನೀರು, ಈ ಗಾಳಿ, ಈ ಸದ್ದು, ಈ ಬೆಳಕು, ಈ ಮಣ್ಣು ಅಲ್ಲಾಡಿದರೆ ಎಷ್ಟು? 
ಪಂಚ ಭೂತಗಳಾಚೆಗೂ ವ್ಯಾಪ್ತಿ ಇದೆ ಎಂಬುದನ್ನು ಕೇವಲ ಅವ್ಯಕ್ತವಾದ ಬಾನಿನ ಮೂಲಕವೇ ನಮ್ಮ ಆಷೇìಯ ಜಿಜಾnಸೆ ಗುರುತಿಸಿಕೊಂಡಿತ್ತು. ಸದ್ದೂ ಅಷ್ಟೇ ಎಲ್ಲಿದೆ ಅದು? ಎಲ್ಲಿ ಇಂಗಿ ಹೋಗುತ್ತದೆ? ಎಲ್ಲರ ಧ್ವನಿಯೂ ಎಲ್ಲಾ ಸದ್ದೂ ಮಿಶ್ರವಾಗಿ ಅಂತಿಮವಾಗಿ ಒಳಗುವುದು ಓಂಕಾರ ಮಾತ್ರ. ಓಂಕಾರದಲ್ಲೂ ಮತ್ತೆ ಅದೇ ಒಗಟು. ಎಲ್ಲಿದೆ ಅದು? ಅದು ಇದೆ ಅಷ್ಟೇ. ಯಾಕೆಂದರೆ ನಮ್ಮ ಬುದ್ಧಿಗೆ ಓಂಕಾರದ ಸದ್ದು ನೀರವ ಮೌನದಲ್ಲಿ ಕೇಳಿಸುತ್ತದೆ. ಅದು ಸ್ಥಾಯಿ. ಸ್ಥಾಯಿ ಎಂದರೆ ಏನು ಗುರುತಿಸಲಾಗದ್ದು ಛಾಯಾರೂಪ.

ಇಂಥ ಗುರುತಿಸಲಾಗದ್ದನ್ನು ಎರಡಾಗಿ ವಿಷ್ಣು ಛೇದಿಸಿದ
ವಿಷ್ಣುವಿನದ್ದು ಒಂದು ವಿರಾಟ ಶಕ್ತಿ. ಸರ್ಪ ಇಡಿಯಾಗಿದ್ದರೆ ಅದರೊಳಗಿನ ಅಮೃತದಿಂದಾಗಿ ಅದು ತಾನು ನಾಶಗೊಳ್ಳದೆ ವಿಶ್ವವನ್ನೇ ನಾಶಮಾಡುತ್ತದೆ ಎಂಬ ಕಾರಣಕ್ಕಾಗಿ ವಿಷ್ಣು ಸರ್ರನೆ ಮಿಂಚಿನಂತೆ ಸರ್ಪವನ್ನು ಚಕ್ರವನ್ನು ಕತ್ತರಿಸಿದ. ವಿಷ್ಣುವಿನ ಚಕ್ರದಿಂದಾಗಿ ವಿಷಮಯದೊಳಗೆ ಸೇರಿದ ಅಮೃತವು ವಿಷವಾಗಿ ಪರಿವರ್ತನೆಗೊಳ್ಳಲಿಲ್ಲ. ಅದು ಸರ್ಪದ ಎರಡೂ ತುಂಡಿನಲ್ಲೂ ಉಳಿಯಿತು. ಆದರೆ ಕಂಟಕವಾಗುವ ಹಾಗೆ ಇರದೆ ಸರ್ಪ ಇಡಿಯಾಗಿ ಇರದೆ ಹೋದುದರಿಂದ ಉಳಿದುಕೊಂಡಿತು. ಅಮೃತಮಯವಾದ ಭೂಮಿ ಹೀಗಾಗಿ ವಿಷದ ಜಂತುವಿನ ಎರಡು ಭಾಗಗಳ ನಡುವೆ ಉಳಿಯಿತು. ರಾಹುವೂ ಕೇತುವೂಪರಸ್ಪರ ಒಂದರ ಎದುರು ಇನ್ನೊಂದಿರುತ್ತದೆ. ಒಟ್ಟಿಗೆ ಇದ್ದಿದ್ದರೆ ಪ್ರಪಂಚದ ಕತೆ ಎಂದೋ ಮುಗಿಯುತ್ತಿತ್ತು. ವಿಶ್ವದ ಕತೆಯೂ ಮುಗಿದುಹೋಗಿ ಬರೀ ಕತ್ತಲಿರುತ್ತಿತ್ತು. ಬರೀ ಕತ್ತಲು ಎಂಬ ಆಸ್ತಿತ್ವವೇ ಇರದ ಶೂನ್ಯದ ಭಜನೆ ಅಮೃತ ಬೆರೆತುಕೊಂಡಾಗಲೇ ಸಾಧ್ಯವಾಗಿ ರಾಹುಕೇತುಗಳಾದವು. ಹಾಗಾದರೆ ಇರದಿರುವುದನ್ನು ಇರುವಂತೆ ಮಾಡುವ ಇರುವುದನ್ನು ಇರದಂತೆ ಮಾಡುವ ಶಕ್ತಿ ಎರಡೂ ಹಿಂದಿನ ವಾರದ ನನ್ನ ಅಂಕಣದಲ್ಲಿ ತಿಳಿಸಿದ ಪುರುಷಸೂಕ್ತದ ಪುರುಷನೇ. ಇದೇಶಕ್ತಿ ಸಕಲಕ್ಕೂ ಆಧಾರ. ಸಕಲವನ್ನು ತಿಂದು ಮುಗಿಸುವ ಕಾಲ. ಅಂತೂ ಅನಂತವಾದ ವ್ಯಾಪ್ತಿಗೂ ಎಲ್ಲಿಂದ ಕೊನೆಗೊಂಡಿತು ಎಂಬ ಕಾಲಕ್ಕೂ ನಿಜವಾದ ಅಸ್ತಿತ್ವಗಳೆಲ್ಲ ಅದು ಕೇವಲ ಇದೆ ಎಂಬ ನಂಬಿಕೆಯೊಂದಿಗಿನ ಛಾಯೆಗಳಾಗಿದೆ. ಫ‌ಲಿಸುವ ಕನ್ನಡಿ ಹೊರಹೊಮ್ಮಿಸುತ್ತದೆ. ಬಿದ್ದ ಬೆಳಕನ್ನು ತನ್ನೊಳಗೆ ಪ್ರತಿಬಿಂಬವನ್ನು ಮೂಡಿಸುತ್ತದೆ. ಎದುರುಬದುರಾದಾಗ ಅನಂತವಾಗುತ್ತದೆ. ಕತ್ತಲು ಹಾಗೂ ಬೆಳಕು ವಾಸ್ತವವೇ? ಇದನ್ನೇ ಬಹುಶಃ ಭಗವಾನ್‌ ಶಂಕರಾಚಾರ್ಯರು ಜಗನ್‌ ಮಿಥ್ಯಾಬ್ರಹ್ಮೋ ಸತ್ಯಂ ಎಂದರು. ಅಹಂ ಬ್ರಹ್ಮಾಸ್ಮಿ ಎಂದು ಕೂಡಾ ಅಂದರು. ಮಾಧ್ವರು ಅವನೇ ಬೇರೆ ನಾನೇ ಬೇರೆ ಎಂದರು. ಈ ಎರಡೂ ಆಚಾರ್ಯ ಪುರುಷರ ತರ್ಕಗಳೂ ಸತ್ಯ. ಈ ವಾದಗಳು ರಾಹುಕೇತುಗಳೆಂಬ ಛಾಯಾಗ್ರಹದ ಕಲ್ಪನೆಗಳು ಅನೇಕ ವಿಚಾರಗಳನ್ನು ಎಲ್ಲರ ಸೂಕ್ಷ್ಮ ವಿವೇಚನೆಗೆ ನಿಕ್ಷೇಪ ಒದಗಿಸುತ್ತದೆ. 

Advertisement

ರಾಹು ಕೇತುಗಳು ಅನಿಷ್ಠಕ್ಕೆ ಮಾತ್ರ ಕಾರಣರಲ್ಲ 
ಇವುಗಳ ಒಳಗಿನ ಅಮೃತದ ಅಸ್ತಿತ್ವವೇ ಈ ಛಾಯಾಗ್ರಹಗಳಿಂದ ಒಳಿತಿಗೂ ಕಾರಣವಾಗುತ್ತದೆ. ಮೂಲದಲ್ಲಿ ಈ ಗ್ರಹಗಳು ವಿಷಮಯವೂ ರಾಕ್ಷಸ ಗ್ರಹಗಳೇ ಆಗಿದ್ದರೂ ವಿಷಕ್ಕೂ ಅಮೃತದ ಲೇಪ ಒದಗಿಸಿ ಒಳ್ಳೆಯದಾಗುವಂತೆ ಮಾಡುತ್ತದೆ. ಕೆಟ್ಟರೆ ಮಾತ್ರ ಅಮೃತವೂ ವಿಷವಾಗುವಂತೆ ಮಾಡುವ ಅಪಾಯಕಾರಿ ಸಂದಿಗ್ಧವೇ ಹೆಚ್ಚು. ಸಂದಿಗ್ಧವೂ ಅಸಂದಿಗ್ಧವೂ ಆಗಿ ಪರಿವರ್ತನೆಗೊಳ್ಳುತ್ತದೆ. ಈ ವಿವರಣೆಗಳು ನಮ್ಮ ಆಧುನಿಕ ಜಾnನದಲ್ಲೂ ಮೈಗೂಡಿದೆ. ಇದು ಒಳ್ಳೆಯದು ಎಂದಿದ್ದ ತನ್ನ ಹೇಳಿಕೆಯನ್ನು ಇನ್ನೊಮ್ಮೆ ಇದು ತೀರಾ ಹೀಗಾದಾಗ ಒಳ್ಳೆಯದಲ್ಲ ಎಂಬ ತಿದ್ದುಪಡಿಯನ್ನು ಆಧುನಿಕ ವಿಜಾnನ ಮಂಡಿಸುತ್ತಲೇ ಇರುತ್ತದೆ. ಇದೇ ರೀತಿಯಲ್ಲಿ ರಾಹು ಕೇತುಗಳು ಅನಿಷ್ಟಕ್ಕೆ ಕಾರಣವಾಗುವ ಛಾಯಾಗ್ರಹಗಳಾದರೂ ಅವು ದೈವತ್ವವನ್ನು ಪಡೆದುಕೊಂಡಾಗಿನ ಸ್ವರೂಪಗಳಲ್ಲಿ ಹರಿಹರ ಬ್ರಹ್ಮಾದಿಗಳಲ್ಲದೆ ನಿರ್ವಿಘ್ನಕಾರಕನಾದ ಗಣಪತಿಯ ಸುಸ್ಥಿರ ಆವರಣಗಳು ಆವಾಹನೆ ಗೊಳ್ಳುತ್ತದೆ. ಒಂದು ರೀತಿಯಲ್ಲಿ ಈ ಛಾಯಾಗ್ರಹಳು ನಮ್ಮ ಕಣ್ಣಿಗೆ ಕಾಣಿಸುವ ಸಪ್ತಗ್ರಹಗಳನ್ನು ದುರ್ಬಲಗೊಳಿಸುತ್ತದೆ. ಈ ಸಪ್ತಗ್ರಹಗಳು ಸರತಿಯಾಗಿ ಹಲವುಸಲ ದುರ್ಬಲರಾಗಿ ತಾಪತ್ರಯದಾಯಕರಾಗುವ ಈ ಛಾಯಾಗ್ರಹಗಳನ್ನು ಅಮೃತಮಯಗೊಳಿಸಿ ಇವುಗಳಿಂದ ಶುಭಕ್ಕೂ ಕಾರಣರಾಗುತ್ತಾರೆ. ಅಂತೂ ಒಂದು ಹಾಗೂ ಇನ್ನೊಂದರ ನಡುವೆ ಅನಾಯಾಸ ಸಂಬಂಧಗಳಿವೆ. ಇರದಿರುವುದು ಇರುವುದು ಒಗ್ಗೂಡಿಯೇ ಕಾಲ ಹಾಗೂ ಅನಂತಮಯವಾದ ವ್ಯಾಪ್ತಿಚಕ್ರವಾಗಿ ಸುತ್ತಬೇಕಾಗುತ್ತದೆ. ಈ ಚಕ್ರವೇ ಜನನ ಮರಣಗಳಿಗೂ ಹಗಲು ರಾತ್ರಿ ಪಕ್ಷ, ಮಾಸ ವರ್ಷ ಋತು ಹಾಗೂ ಆಯನ ಇತ್ಯಾದಿ ಇನ್ನೂ ಅನೇಕಕ್ಕೂ ಕಾರಣವಾಗುತ್ತದೆ. ಗುರುತ್ವಾಕರ್ಷಣಶಕ್ತಿಯನ್ನು ನಿರ್ಮಿಸಿ ಇದೇ ಚಕ್ರವೇ ಶಕ್ತಿಯನ್ನು ಬೆಳಕನ್ನೂ ಸಕಲ ಭೂಮಂಡಲ ವಿಶ್ವದ ಸಕಲ ದ್ರವ್ಯರಾಶಿಯನ್ನು ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಮೂಡಿಸುತ್ತದೆ. ಮೂಡಿದ್ದು ಮತ್ತೆ ಎಲ್ಲಿಂದ ಬಂದಿತೋ ಅಲ್ಲಿಯೇ ಹಿಂತಿರುಗಿ ಕರಗುತ್ತದೆ. ಭ್ರಮೆ ಮತ್ತು ವಾಸ್ತವಗಳಾಚೆಗೆ ಏನೂ ಇಲ್ಲ. ಇದೇ ಜನನ ಹಾಗೂ ಮರಣಗಳು. 

ನ್ಯೂಟನ್ನಿನ ಸಿದ್ಧಾಂತಗಳಾಗಲೀ ಐನ್‌ಸ್ಟೈನಿನ ಥಿಯರಿಗಳಾಗಲೀ ಇನ್ನೇನೆ ಇರಲಿ ಅನುಪಮವಾದ ಈ ಸಂಶೋಧನೆಗಳನ್ನು ನಮ್ಮ ವೇದಗಳು ಮಂಡಿಸಿದ ನಿರ್ಗುಣಂ, ನಿರ್ವಿಶೇಷಂ ವಿಚಾರಗಳನ್ನು ಇಟ್ಟು ನೋಡೋಣ. ಆಗ ರಾಹುಕೇತುಗಳೆಂಬ ಛಾಯಾಗ್ರಹಗಳು ನಮ್ಮ ಆಷೇìಯ ಕಲ್ಪನೆಗಳು ಏಕೆ ಏನು ಹೇಗೆ ಇತ್ಯಾದಿ ಎಂಬ ವಿಚಾರ ತಿಳಿಯಲು ಅನುಕೂಲವಾಗುತ್ತದೆ.

ನಮ್ಮ ಪರಂಪರೆಯಲ್ಲಿ ರಾಹುವು ರುದ್ರ ಭೀಕರನೂ ಘೋರರೂಪಿಯೂ ಕಾಲ ರೂಪಿಯೂ ಮಹಾಬಲನೂ ಅರ್ಧಕಾಯನೂ ಚಂದ್ರಾದಿತ್ಯರನ್ನು ಮಂಕುಗೊಳಿಸುವವನೂ ಎಂದು ಬಣ್ಣಿಸಲ್ಪಟ್ಟಿದೆ. ಕೇತುವು ಮೋಕ್ಷಕಾರಕ. ಇರುವ ಕಲ್ಪಿಸಲು ಸಾಧ್ಯವಾಗದ ನಂತರದಲ್ಲಿ ನಮ್ಮಭೂಮಿಯನ್ನು ಕರಗಿಸಿಬಿಡುತ್ತಾನೆ ಎಂದು ನಮ್ಮ ಪರಂಪರೆ ನಂಬಿದೆ. ಸುನಾಮಿ ಭೂಕಂಪ ಪ್ರಳಯ ಬಿರುಗಾಳಿ ಅತಿವೃಷ್ಟಿ ûಾಮ ಪಂಚಭೂತಗಳು ಆನಂದದಾಯಕವಾಗಿದ್ದಾಗ ಮಹಾಬಲನೆನಿಸುವ ಕಾಲ ರಾಹುವಾದರೆ ಅನಂತವನ್ನು ಬಿಂಬಿಸುವವನೇ ಕೇತು. ಆದರೂ ಇವಕ್ಕೆ ಸ್ವಂತ ರೂಪವಲ್ಲ ಛಾಯಾಗ್ರಹಗಳು. 

Advertisement

Udayavani is now on Telegram. Click here to join our channel and stay updated with the latest news.

Next