Advertisement

ಟ್ಯಾಕ್ಸಿ ಪಾರ್ಕಿಂಗ್‌ ಸೌಲಭ್ಯಕ್ಕೆ ಎಸ್‌ಪಿ ಶಶಿಕುಮಾರಗೆ ಮನವಿ

11:20 AM Dec 15, 2018 | Team Udayavani |

ವಾಡಿ: ಪಟ್ಟಣದಲ್ಲಿ ಟ್ಯಾಕ್ಸಿ ಪಾರ್ಕಿಂಗ್‌ ಸೌಲಭ್ಯ ಒದಗಿಸುವಂತೆ ಎಸ್‌ಪಿ ಎನ್‌. ಶಶಿಕುಮಾರಗೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯ್ಯದ್‌ ಮಹೆಮೂದ್‌ ಸಾಹೇಬ ಮನವಿ ಸಲ್ಲಿಸಿದರು.ಪಟ್ಟಣದ ಪೊಲೀಸ್‌ ಠಾಣೆಗೆ ಭೇಟಿ ನೀಡಿದ ಎಸ್‌ಪಿಎನ್‌. ಶಶಿಕುಮಾರ ಅವರನ್ನು ಭೇಟಿ ಮಾಡಿದ ಮಹೆಮೂದ್‌ ಸಾಹೇಬ, ದಿನೇದಿನೆ ಬೆಳೆಯುತ್ತಿರುವ ಪಟ್ಟಣದಲ್ಲಿ ನೂರಾರು ಟ್ಯಾಕ್ಸಿಗಳು ಪ್ರವಾಸಿಗರ ಅನುಕೂಲಕ್ಕೆ ಬಳಕೆಯಾಗುತ್ತಿವೆ. ಅನೇಕ ಯುವಕರು ಟ್ಯಾಕ್ಸಿ ನಡೆಸುವ ಮೂಲಕ ಸ್ವಯಂ ಉದ್ಯೋಗ ಕಂಡುಕೊಂಡಿದ್ದಾರೆ. ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಟ್ಯಾಕ್ಸಿ ಗಳನ್ನು ಮುಖ್ಯ ರಸ್ತೆ ಬದಿಗೆ ನಿಲ್ಲಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ. ಟ್ಯಾಕ್ಸಿ ವಾಹನಗಳನ್ನು ನಿಲ್ಲಿಸಲು ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಒದಗಿಸಿಕೊಟ್ಟರೆ ಅನುಕೂಲವಾಗುತ್ತದೆ ಎಂದು ಗಮನ ಸೆಳೆದರು. ಟ್ಯಾಕ್ಸಿ ಗಳ ನಿಲುಗಡೆಗೆ ಪರ್ಯಾಯ ಜಾಗ ಇದೆಯೇ ಎನ್ನುವ ಕುರಿತು ಸ್ಥಳೀಯ ಪೊಲೀಸ್‌ ಅಧಿಕಾರಿಗಳನ್ನು ಪ್ರಶ್ನಿಸಿದ ಎಸ್‌ಪಿ ಶಶಿಕುಮಾರ, ಜಾಗ ಇದ್ದರೆ ಗಮನಕ್ಕೆ ತೆಗೆದುಕೊಂಡು ಬನ್ನಿ. ಪಾರ್ಕಿಂಗ್‌ ಸೌಲಭ್ಯ ಒದಗಿಸುವ ಕುುರಿತು ಕ್ರಮಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು. ಡಿವೈಎಸ್‌ಪಿ ಕೆ.ಬಸವರಾಜ, ಸಿಪಿಐ ಪಿ.ವಿ.ಸಾಲಿಮಠ, ಪಿಎಸ್‌ಐ ವಿಜಯಕುಮಾರ ಭಾವಗಿ, ಪುರಸಭೆ ಮಾಜಿ ಸದಸ್ಯ ಚಾಂದಮಿಯ್ನಾ ಈ ಸಂದರ್ಭದಲ್ಲಿದ್ದರು. 

Advertisement

ಆರೋಗ್ಯಕ್ಕೆ ದೈಹಿಕ ಶ್ರಮ ಅಗತ್ಯ: ಪೀರಪಾಶಾ
ಶಹಾಬಾದ: ಆಧುನಿಕ ಜೀವನ ಶೈಲಿ, ಆಹಾರ ಕ್ರಮದಲ್ಲಿ ಆಗಿರುವ ಬದಲಾವಣೆ, ದೈಹಿಕ ಶ್ರಮವಿಲ್ಲದ ಕೆಲಸಗಳು ಹೆಚ್ಚಾಗಿರುವುದರಿಂದಲೇ ಹಲವಾರು ಮಾರಕ ರೋಗಗಳು ಬರುತ್ತಿವೆ ಎಂದು ಅಂಜುಮನ್‌ ಕಾಲೇಜಿನ ಪ್ರಾಂಶುಪಾಲ ಪೀರಪಾಶಾ ಹೇಳಿದರು. ನಗರದ ಕೂಡಲಸಂಗಮ ಪದವಿ ಮಹಾ ವಿದ್ಯಾಲಯದಲ್ಲಿ ಎನ್‌.ಎಸ್‌.ಎಸ್‌ ಹಾಗೂ ರೆಡ್‌ ಕ್ರಾಸ್‌ ಸಂಸ್ಥೆ ವತಿಯಿಂದ ಆಯೋಜಿಸಲಾದ ಆರೋಗ್ಯದ ಬಗ್ಗೆ ನಾಗರಿಕರ ಹೊಣೆಗಾರಿಕೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾರಕ ಕಾಯಿಲೆಗಳಿಂದ ದೂರವಿರಲು ನಿರಂತರವಾಗಿ ಕಠಿಣ ಪರಿಶ್ರಮದ ಕೆಲಸ ಮಾಡಬೇಕು. ಅಲ್ಲದೇ ಪ್ರತಿಯೊಬ್ಬರೂ ತಮ್ಮ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯದಿಂದ ಇರಬಹುದಾಗಿದೆ. ಅದಕ್ಕಾಗಿ ಹೆಚ್ಚು ಹಣ್ಣು-ತರಕಾರಿ, ಹಸಿಯಾಗಿರುವ ಮೊಳಕೆಯೊಡೆದ ಕಾಳುಗಳನ್ನು ಸೇವಿಸಬೇಕು. ಆಹಾರವೇ ಆರೋಗ್ಯದ ಗುಟ್ಟು ಎಂದು ಹೇಳಿದರು. ಪ್ರಾಂಶುಪಾಲ ನಾನಾಗೌಡ ಹಿಪ್ಪರಗಿ, ಉಪನ್ಯಾಸಕ ಗುರಲಿಂಗ ತುಂಗಳ, ಮೋಹನ ಚವ್ಹಾಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next