Advertisement

ಮೈಸೂರು : ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳ ಪರಿಶೀಲನೆ ಮಾಡಿದ ಎಸ್.ಪಿ.ರಿಶ್ಯಂತ್

09:32 AM May 13, 2021 | Team Udayavani |

ಹುಣಸೂರು: ಹೆದ್ದಾರಿಯಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್‌ಗಳಲ್ಲಿನ ವ್ಯವಸ್ಥೆ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಮೈಸೂರು ಜಿಲ್ಲಾ ಎಸ್.ಪಿ.ರಿಶ್ಯಂತ್ ಪರಿಶೀಲಿಸಿದರು.

Advertisement

ಮೈಸೂರಿಗೆ ಸಮೀಪದ ಇಲವಾಲ, ತಾಲೂಕಿನ ಬಿಳಿಕೆರೆ-ಹಾಸನ ಹೆದ್ದಾರಿಯ ಬಿಳಿಕೆರೆ, ಹುಣಸೂರು ನಗರದ ಕೃಷಿ ಇಲಾಖೆ ಬಳಿ ನಿರ್ಮಿಸಿರುವ ಚೆಕ್‌ಪೋಸ್ಟ್, ಕೊಡಗು ಜಿಲ್ಲೆ ಸಂಪರ್ಕಿಸುವ ಕೊಪ್ಪಗೇಟ್, ಹಾಸನ ಸಂಪರ್ಕಿಸುವ ಬೆಟ್ಟದಪುರ, ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆ ನಿರ್ಮಿಸಿರುವ ಚೆಕ್ ಪೋಸ್ಟ್‌ಗಳಲ್ಲಿ ಕೆಲಹೊತ್ತು ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಗಳ ಕಾರ್ಯವೈಖರಿಯನ್ನು ವೀಕ್ಷಿಸಿ, ಅವರಿಂದ ಮಾಹಿತಿ ಪಡೆದ ಎಸ್.ಪಿ.ಯವರು ಚೆಕ್ ಪೋಸ್ಟ್‌ಸಿಬ್ಬಂದಿಗಳಿಗೆ ಅನಾವಶ್ಯಕವಾಗಿ ಸಾರ್ವಜನಿಕರನ್ನು ಮುಟ್ಟಬೇಡಿ, ಅವರೊಂದಿಗೆ ಹತ್ತಿರದಿಂದ ಚರ್ಚೆಗಿಳಿಯಬೇಡಿ, ಮಾಸ್ಕ್, ಗ್ಲೌಸ್, ಫೇಶ್‌ಶೀಲ್ಡ್ ಇಲ್ಲದೆ ಕರ್ತವ್ಯಕ್ಕಿಳಿಯಬೇಡಿ, ಆಗಾಗ್ಗೆ ಸ್ಯಾನಿಟೈಸರ್ ಮಾಡಿಕೊಳ್ಳುತ್ತಿರಬೇಕೆಂದು ಸೂಚಿಸಿದರು.

ಚೆಕ್‌ಪೋಸ್ಟ್‌ಗಳಲ್ಲಿ ಅನಾವಶ್ಯಕವಾಗಿ ಸಾರ್ವಜನಿಕರೊಂದಿಗೆ ಚರ್ಚಿಸಬೇಡಿ, ತರಕಾರಿ ಮತ್ತಿತರ ಅಗತ್ಯವಸ್ತುಗಳ ಸಾಗಾಟದ ಗೂಡ್ಸ್ ವಾಹನಗಳನ್ನು ತಡೆಯುವ ನೊಂದಣಿ ಮಾಡುವ ಅವಶ್ಯವಿಲ್ಲ, ಹಾಗೂ ಖಾಸಗಿ ವಾಹನಗಳಲ್ಲಿ ರೋಗಿಗಳಿದ್ದಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಿ, ಪದೇಪದೇ ಓಡಾಡುವ ಬೈಕ್, ಕಾರು ಮತ್ತಿತರ ವಾಹನಗಳ ಬಗ್ಗೆ ನಿಗಾವಹಿಸಿ. ಮುಲಾಜಿಲ್ಲದೆ ಸೀಜ್ ಮಾಡಬೇಕು, ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಇದನ್ನೂ ಓದಿ:ಕೋವಿಡ್ ಸಂಕಷ್ಟ : ಸಿಎಂ ಪರಿಹಾರ ನಿಧಿಗೆ ಒಂದು ಕೋಟಿ ಹಣ ದೇಣಿಗೆ ನೀಡಿದ ನಟ ಸೂರ್ಯ

ಹಳೆ ಬ್ಯಾರಿಕೇಡ್ ಬದಲಾಯಿಸಿ:

Advertisement

ಹುಣಸೂರು ಕೃಷಿ ಇಲಾಖೆ ಬಳಿಯಲ್ಲಿ ಹಾಕಲಾಗಿದ್ದ ಹಳೆ ಬ್ಯಾರಿಕೇಡ್‌ಗಳನ್ನು ಕಂಡ ಎಸ್.ಸಿ.ಯವರು ಬಣ್ಣ ರಹಿತ, ರಿಫ್ಲೆಕ್ಟರ್ ಇಲ್ಲದ ಬ್ಯಾರಿಕೇಡ್‌ಗಳಿಂದ ರಾತ್ರಿವೇಳೆ ವಾಹನ ಸವಾರರಿಗೆ ಸಮಸ್ಯೆಯಾಗಲಿದೆ, ಹಳೆ ಬ್ಯಾರಿಕೇಡ್‌ಗಳನ್ನು ವಾಪಾಸ್ ಕಳುಹಿಸಿಕೊಟ್ಟಲ್ಲಿ ಅಗತ್ಯಕ್ಕೆ ತಕ್ಕಂತೆ ಸರಬರಾಜಿಗೆ ಕ್ರಮವಹಿಸಲಾಗುವುದೆಂದು ಡಿವೈಎಸ್‌ಪಿ ರವಿಪ್ರಸಾದ್ ರಿಗೆ ಸೂಚಿಸಿದರು. ಎಸ್.ಪಿ.ಯವರೊಂದಿಗೆ ಹುಣಸೂರು ಉಪ ವಿಭಾಗದ ಡಿವೈಎಸ್‌ಪಿ ರವಿಪ್ರಸಾದ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next