Advertisement

ಉ.ಪ್ರ. ಸದನದಲ್ಲಿ ಪ್ರತಿಭಟನೆ ನಿರತ ಎಸ್‌ಪಿ ಶಾಸಕನನಿಗೆ ಮೆದುಳಾಘಾತ

01:58 PM Feb 05, 2019 | udayavani editorial |

ಲಕ್ನೋ : ಉತ್ತರ ಪ್ರದೇಶ ವಿಧಾನಸಭೆಯ ಉಭಯ ಸದನಗಳನ್ನು ಉದ್ದೇಶಿಸಿ ಇಂದು ಮಂಗಳವಾರ ಬೆಳಗ್ಗೆ ರಾಜ್ಯಪಾಲ ರಾಮ ನಾಯಕ್‌ ಅವರು ಭಾಷಣ ಮಾಡುತ್ತಿದ್ದಂತೆಯೇ ಪ್ರತಿಭಟನೆ ನಿರತ ಸಮಾಜವಾದಿ ಪಕ್ಷದ ಶಾಸಕ ಸುಭಾಷ್‌ ಪಸಿ ಅವರಿಗೆ ಮೆದುಳಾಘಾತವಾಗಿ ಕುಸಿದು ಬಿದ್ದರು. 

Advertisement

ಪ್ರಜ್ಞಾಹೀನರಾಗಿದ್ದ  50ರ ಹರೆಯದ ಎಸ್‌ಪಿ ಶಾಸಕ ಪಸಿ ಅವರನ್ನು ಒಡನೆಯೇ ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿ ಬಳಿಕ ಅಲ್ಲಿಂದ ಕಿಂಗ್‌ ಜಾಜ್‌ರ ಮೆಡಿಕಲ್‌ ಯುನಿವರ್ಸಿಟಿಯ ಟ್ರೋಮಾ ಸೆಂಟರ್‌ಗೆ ಸೇರಿಸಲಾಯಿತು. 

ಟ್ರೋಮಾ ಸೆಂಟರ ಮುಖ್ಯಸ್ಥ ಡಾ. ಸಂದೀಪ್‌ ತಿವಾರಿ ಹೇಳಿರುವ ಪ್ರಕಾರ ಪಸಿ ಅವರಿಗೆ ಮೆದುಳಾಘಾತವಾಗಿದೆ; ಆದರೂ ಈಗ ಪ್ರಜ್ಞೆ ಮರಳಿದೆ; ಅವರನ್ನು  ಮುಂದಿನ 48 ತಾಸುಗಳ ಕಾಲ ಐಸಿಯು ನಲ್ಲೇ ಇರಿಸಿ ತೀವ್ರ ನಿಗಾ ವಹಿಸಲಾಗುವುದು. 

Advertisement

Udayavani is now on Telegram. Click here to join our channel and stay updated with the latest news.

Next