Advertisement

ಪತ್ನಿಯೊಂದಿಗಿನ ಕ್ಷುಲ್ಲಕ ಜಳಗ: ಎಸ್‌ಪಿ ಯುವ ನಾಯಕ ಆತ್ಮಹತ್ಯೆ

12:06 PM Nov 16, 2018 | Team Udayavani |

ಬಹರೇಚ್‌, ಉತ್ತರ ಪ್ರದೇಶ : 32ರ ಹರೆಯದ ಸಮಾಜವಾದಿ ಪಕ್ಷದ ನಾಯಕ ಸಂಜಯ್‌ ಅಲಿಯಾಸ್‌ ಶೀಬೂ ಎಂಬವರು ತಮಗೆ ತಾವೇ  ಗುಂಡು ಹೊಡೆದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಪತ್ನಿಯೊಂದಿಗೆ ಕ್ಷುಲ್ಲಕ ಜಗಳದ ಪರಾಕಾಷ್ಠೆಯಲ್ಲಿ ಅವರು ಈ ದುರದೃಷ್ಟಕರ ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ.

Advertisement

ಶೀಬೂ ಅವರು ಜಿಲ್ಲಾ ಪಂಚಾಯತ್‌ ಸದಸ್ಯರೂ ಎಸ್‌ಪಿ ಯುವ ನಾಯಕರೂ ಆಗಿದ್ದರು. ಇವರು ಮಾಜಿ ಶಾಸಕ ಶಬ್ಬೀರ್‌ ಅಹ್ಮದ್‌ ಅವರ ಮಗ. 

ಶೀಬೂ ಅವರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ; ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next