Advertisement
ಕಟ್ಟೆ ಗುರುರಾಜ್
ಕೊನೆ ಉಸಿರು ಇರೋ ತನಕ ಸಂಗೀತದ ಮಡಿಲಲ್ಲೇ ಇಬೇìಕು ಅನ್ನೋದು. ಇನ್ನೊಂದು, ನನ್ನಿಂದ ಬೇರೆಯವರಿಗೆ ನೋವಾಗದ ರೀತಿ ಬದುಕಬೇಕು. ಪತ್ಯಕ್ಷವಾಗೋ, ಪರೋಕ್ಷವಾಗೋ ನನ್ನಿಂದ ತೊಂದರೆ ಆಯ್ತು ಅಂತ ಗೊತ್ತಾದರೆ ತಕ್ಷಣ ನಾನೇ ಹೋಗಿ ಅವರಿಗೆ ಸಾರಿ ಕೇಳ್ತೀನಿ. ಇದಕ್ಕಿಂತ ಇನ್ನೇನೂ ಇಲ್ಲ. ಈಗಲೂ ಮೊದಲ ಹಾಡು ಹಾಡಬೇಕಾದರೆ…
ಮೊದಲ ಹಾಡಲ್ಲ, ವೇದಿಕೆಗೆ ಹೋಗುವಾಗಲೇ ನನಗೆ ಟೆನÒನ್. ಸಾಯಂಕಾಲದ ಕಚೇರಿಗೆ ಬೆಳಗ್ಗೆಯಿಂದ ಹಾಡುಗಳನ್ನ ಮನನ ಮಾಡ್ಕೊತಾ ಇರ್ತೀನಿ. ಏನೂ ಕೆಲ್ಸ ಇಟ್ಕೊಳ್ಳಲ್ಲ. ಮೊನ್ನೆ ಇಲ್ಲೇ ಕಾರ್ಯಕ್ರಮ ನಡೀತು. ಅದಕ್ಕೂ ಎರಡು ದಿನ ಮೊದಲು ಆರ್ಕೇಸ್ಟ್ರಾ ಜೊತೆ ಪ್ರಾಕ್ಟೀಸ್ ಮಾಡೆª. ಬೆಳಗ್ಗೆಯಿಂದ ಯಾವ ಗೆಸ್ಟ್‌ನ್ನೂ ಅಲೋ ಮಾಡಲಿಲ್ಲ; ಕಾರಣ ಭಯ. ಎಲ್ಲಾ ಹಾಡುಗಳನ್ನು ಜ್ಞಾಪಕ ಇಟ್ಕೊà ಬೇಕು, ಆತ್ಮವಿಶ್ವಾಸ ಬರಬೇಕು ಅಂದರೆ ಮತ್ತೆ ಮತ್ತೆ ಪ್ರಾಕ್ಟೀಸ್ ಮಾಡಲೇಬೇಕು.
Related Articles
ಭಯ ಇದ್ದರೆ ಭಕ್ತಿ. ಭಕ್ತಿ ಇದ್ದರೆ ಶ್ರದ್ಧೆ ಇರುತ್ತೆ. ಇವರೆಡೂ ಇರದಿದ್ದಲೆ ಒಳ್ಳೆ ಗಾಯಕನಾಗೋಕೆ ಆಗೋಲ್ಲ. ಭಕ್ತಿ, ಶ್ರದ್ಧೆ ಇಲ್ಲ ಅಂದ್ರೆ ಯಾವುದೇ ವೃತ್ತಿಯಲ್ಲೂ ಮೇಲೆ ಬರೋಕೆ ಆಗೋಲ್ಲ. ನನಗೆ ಹೆಸರಿದೆ, ಏನು ಹಾಡಿದರೂ ಜನ ಕೇಳ್ತಾರೆ ಅನ್ನೋ ಮನೋಭಾವ ಬರಬಾರದು. ಎವ್ವೆರಿ ಡೇ ಈಸ್ ಬಿಗಿನಿಂಗ್ ಡೇ.
Advertisement
ಮೊದಲು ಹಾಡಿನ ಶೃತಿ ಏನು?ಒಂದು ಸಲ ಪ್ರಾಕ್ಟೀಸ್ ಮಾಡಿದ ಮೇಲೆ ಯಾವ ಶ್ರುತಿಯ ಹಾಡಾದರೂ ಪರವಾಗಿಲ್ಲ. ವಾರ್ಮಪ್ ಆಗೋ ತನಕ ತೀವ್ರ ಸ್ಥಾಯಿಯಲ್ಲಿ ಹಾಡೋದು ಕಷ್ಟ. ಹೀಗಾಗಿ, ಅಂಥ ಹಾಡನ್ನು ಸಭೆಯ ಆರಂಭದಲ್ಲಿ ಹಾಕಿರೊಲ್ಲ. ಪ್ರಾಕ್ಟೀಸ್ ಮಾಡಕ್ಕಾಗದೇ, ಆ ಹಾಡಿಂದಲೇ ಕಾರ್ಯಕ್ರಮ ಶುರು ಮಾಡಬೇಕಾದಾಗ ಕಷ್ಟ ಆಗುತ್ತೆ. ಬಟ್, ನನ್ನ ಎಲ್ಲಾ ಎನರ್ಜೀನ ಅದಕ್ಕೆ ಹಾಕಿ ಹಾಡ್ತೀನಿ. ವಾರ್ಮಪ್‌ಗೆ ಗೀತೆಗಳು ಅಂತೇನಾದರು ಇದೆಯೇ?
ಹಾಡೋದೆಲ್ಲಾ ವಾರ್ಮಪ್ಪೇ. ಬೆಳಗ್ಗೆ ಎದ್ದಾಗ, ಸ್ನಾನ ಮಾಡಿದ ತಕ್ಷಣ ದನಿ ಬೇಸ್ ಆಗಿರುತ್ತೆ. ಆಗ ತೀವ್ರಸ್ಥಾಯಿಯಲ್ಲಿ ಹಾಡೋದು ಕಷ್ಟ. ಪ್ರಾಕ್ಟೀಸ್ ಅನ್ನೋದು ಗಾಯಕರಿಗೆ ಲೂಬ್ರಿಕೆಂಟ್ ಥರ. ಹಾಡ್ತಾ ಹಾಡ್ತಾ ಕಂಠ ಸಡಿಲವಾಗಿ ಶೃತಿಗಳಿಗೆ ಹೊಂದಿಕೊಳ್ಳುತ್ತದೆ. ಹಾಡುಗಳ ಆಯ್ಕೆ ಹೇಗೆ?
ಒಂದೊಂದು ಜಾಗದಲ್ಲಿ ಒಂದೊಂದು ರೀತಿ ಇರುತ್ತೆ. ಹಿಂದೆ, ಆಂಧ್ರ, ತಮಿಳುನಾಡುಗಳಿಗೆ ಹೋದರೆ ಆರ್ಟಿಸ್ಟ್ ಅನ್ನು ಮನಸ್ಸಲ್ಲಿ ಇಟ್ಕೊಂಡು ಕೇಳ್ತಿದ್ದರು. ಈಗ ಹಾಗೇನೂ ಇಲ್ಲ. ಭಗವಂತನ ಕೃಪೆಯಿಂದ ನಾನು ಏನು ಹಾಡಿದರೂ ಕೇಳ್ಕೊàತಾರೆ. ಕಾರಣ, ಅಷ್ಟು ಹಾಡುಗಳನ್ನು ಹಾಡಿದ್ದೀನಿ. ನಮ್ಮಲಿಸ್ಟ್‌ನಲ್ಲಿ ಹೆಚ್ಚಾಗಿ ಜನಪ್ರಿಯ, ಮಾಧುರ್ಯ ಪ್ರಧಾನ ಗೀತೆಗಳು ಇರ್ತವೆ. ಒಂದು ವೇಳೆ ವೇದಿಕೆ ಏರಿ, ಆಡಿಯನ್ಸ್ ಪಲ್ಸ್ ನೋಡಿದ ಮೇಲೆ ತಿಳಿಯುತ್ತೆ ಫಾಸ್ಟ್ ಸಾಂಗ್‌ಗಳು ಬೇಕು ಅಂತ. ಜನರ ಪಲ್ಸ್ ಹೇಗೆ ತಿಳಿಯುತ್ತೆ?
ವೇದಿಕೆ ಏರುತ್ತಿದ್ದಂತೆ ಮೈಕ್ ತಗೊಂಡು ನಾನು ಸ್ವಲ್ಪ ಜಾಸ್ತಿನೇ ಮಾತಾಡ್ತೀನಿ. ಅದಕ್ಕೆ ಎರಡು ಕಾರಣ. ಒಂದು; ನನ್ನನ್ನು ನಾನು ಕಂಟ್ರೋಲ್ ಮಾಡ್ಕೊಳ್ಳೋದಕ್ಕೆ. ಇನ್ನೊಂದು,ಮಾತನಾಡುವಾಗಲೇ ಕೇಳುಗರ ಮೂಡ್, ನಿರೀಕ್ಷೆ, ಹೇಗೆ ರಿಯಾಕ್ಟ್ ಮಾಡಬಹುದು ಅನ್ನೋ ಫಲ್ಸ್ ತಿಳಿದುಕೊಳ್ಳೋಕೆ. ಒಂದೇ ನಾಲಿಗೆ ಮೇಲೆ ಹಲವು ಭಾಷೆಗಳನ್ನು ಹಾಡುವ ಗುಟ್ಟೇನು?
ಗುಟ್ಟೇನೂ ಇಲ್ಲ. ಭಾಷೆ ಬಗ್ಗೆ ಗೌರವ ಇರಬೇಕು. ಕೆಲವರಿಗೆ, ತಮಗೆ ಗೊತ್ತಿರೋ ಭಾಷೇನೆ ದೊಡ್ಡದು, ಅರ್ಥವಾಗದೇ ಇರೋದು ಒಳ್ಳೇ ಭಾಷೆಯಲ್ಲ ಅನ್ನೋದು ಇರುತ್ತೆ. ಇದು ಸರಿಯಲ್ಲ. ಭಾಷೆ ಬಗ್ಗೆ ಗೌರವ, ಭಕ್ತಿ ಇಲ್ಲದೆ ಹಾಡೋಕ್ಕಾಗುತ್ತಾ? ಒಂದೊಂದು ಭಾಷೆಯವರು ಕೂಡ “ಇವನ ಕಂಠ ಚೆನ್ನಾಗಿದೆ, ಇವನ ಹತ್ತಿರ ನಮ್ಮ ಹಾಡುಗಳನ್ನು ಹಾಡಿಸಬೇಕು’ ಅಂತ ಪ್ರೀತಿಯಿಂದ ಅವಕಾಶ ಕೊಡುವಾಗ, ಇಂಗ್ಲೀಷ್‌ನಲ್ಲೋ, ಬೇರೆ ಭಾಷೆಯಲ್ಲೋ ಬರೆದುಕೊಂಡು, ಅರ್ಥ ಮಾಡಿಕೊಂಡು ಹಾಡಿಬಿಟ್ಟರೆ ಸಾಕಪ್ಪಾ ಸಾಕು ಅಂದುಕೊಳ್ಳಲಿಲ್ಲ ನಾನು. ಭಾಷೆ ನಮಗೆ ಅವಗಾಹನೆ ಆದರೆ, ಹಾಡಿನ ಎಕ್ಸ್‌ಪ್ರೆಷನ್ ಚೆನ್ನಾಗಿ ಕೊಡಬಹುದು. ಬರೀ ರೆಕಾರ್ಡಿಂಗ್ ರೂಮ್‌ಗೆ ಹೋಗಿ, ನಿರ್ದೇಶಕರು ಕೊಟ್ಟ ಹಾಡನ್ನು ಐದು ನಿಮಿಷ ಹಾಡಿ, ಹಣ ಸಂಪಾದನೆ ಮಾಡಬೇಕು ಅಂತ ಮಾಡಿದ್ದರೆ, ನನಗೆ ಇಷ್ಟು ದಿನ ಫೀಲ್ಡಿನಲ್ಲಿ ಇರೋದಕ್ಕೆ ಕಷ್ಟವಾಗ್ತಿತ್ತು. ಹಾಡೋದು, ಮಾತನಾಡುವುದು ಬೇರೆ ಬೇರೇನಾ?
ಭಾಷೆ ಕಲಿಯೋದು ಸುಲಭ. ಶಾಸ್ತ್ರಬದ್ಧ ಉಚ್ಚಾರಣೆ ಕಷ್ಟ. ಭಾಷೆಯ ಚರಿತ್ರೆ, ಅಕ್ಕಪಕ್ಕದ ಭಾಷೆಗಳು ಈ ಭಾಷೆಯ ಮೇಲೆ ಉಂಟು ಮಾಡಿದ ಪ್ರಭಾವ ಎಲ್ಲವೂ ತಿಳಿದಿರಬೇಕು. ಉದಾಹರಣೆಗೆ- ಕನ್ನಡದಲ್ಲಿ ಅರ್ಥಪೂರ್ಣ ಅಂತೀವಿ.. “ಥ ‘ ಇಲ್ಲಿ ಮಹಾಪ್ರಾಣ. ಇದು ಸಂಸ್ಕೃತ ಪದ. ತೆಲುಗಿನಲ್ಲಿ ಹಾಗೇ ಬರೀತಾರೆ. ಆದರೆ ಉಚ್ಚಾರಣೆ ಮಾಡುವಾಗ ಅ’ರ್ಧ’ಪೂರ್ಣ ಅಂತಾರೆ. ವೋ ಆಥೀಹೈ ಅಂತ ಉಚ್ಚರಿಸುವಾಗ ನಮಗೆ “ವೋ’, ” ಓ ‘ ಎರಡರ ವ್ಯತ್ಯಾಸ ಗೊತ್ತಿರಬೇಕು. ಭಾಷೆಯ ಅರಿವಿದ್ದರೆ ಎಲ್ಲವೂ ಸುಲಭ.
ಮೈಕಲ್ಲಿ ಯಾವ ಪದದ ಮೇಲೆ ಎಷ್ಟು ಭಾರ ಬಾಕಿ ಹಾಡಬೇಕು?
ಇದನ್ನೇ ಪ್ರೊಫೆಷನ್ ಅನ್ನೋದು. ಸಂದರ್ಭಕ್ಕೆ ತಕ್ಕಂತೆ, ಮೆಲೋಡಿಗೆ ಧಕ್ಕೆ ಆಗದ ರೀತಿ ಪದಗಳ ಮೇಲೆ ದನಿ ಹಾಕುವುದರಿಂದ ಹಾಡಿನ ಎಕ್ಸಪ್ರಷನ್, ಫೀಲ್ ಬದಲಾಗಿ, ಅದಕ್ಕೆ ನೇಟಿವಿಟಿ ಬಂದು ಬಿಡುತ್ತೆ. ಆಗಲೇ ಗಾಯಕ “ನಮ್ಮವರೇ’ ಅಂತ ಅನಿಸೋದು. ಎಲ್ಲಾ ಗೊತ್ತಾಗಬೇಕು ಅಂದರೆ ಭಾಷೆ ಕಲಿಯುವ ಆಸಕ್ತಿ ಇರಬೇಕು. ಸ್ಟೇಜ್‌ನಲ್ಲಿ ಮಾತ್ರವಲ್ಲ ರೆಕಾರ್ಡಿಂಗ್ ರೂಮಲ್ಲೂ ಇದನ್ನು ಪಾಲಿಸಬೇಕು. ಅದಕ್ಕೂ ಮೊದಲು, ರೆಕಾರ್ಡಿಂಗ್ ಹೇಗೆ ಆಗುತ್ತದೆ? ಹಾಡಿದ ನಂತರ ನಮ್ಮ ದನಿ ಹೇಗೆ ಬಳಕೆ ಆಗುತ್ತೆ ಮುಂತಾದವನ್ನೆಲ್ಲಾ ತಿಳಿದುಕೊಂಡಿದ್ದರೆ ಒಳ್ಳೆಯದು. ಮೈಕ್ ಅಂತರ ಎಷ್ಟಿರಬೇಕು?
ಇದು ಅನುಭವದಿಂದ ಬರೋದು. ಮಹಾಪ್ರಾಣಗಳಾದ ಪ, ಫ, ಭಾ ಉಚ್ಚರಿಸಿದರೆ ಬಾಯಿಂದ ಗಾಳಿ ಬರುತ್ತೆ. ಅಆ ಇಈ ಗೆ ಹೀಗೆ ಆಗೋಲ್ಲ. ಮೈಕಲ್ಲಿ ಭ, ಛ, ಘ, ಖ ಉಚ್ಚರಿಸುವಾಗ ಮೈ ಎಲ್ಲಾ ಕಣ್ಣಾಗಿರಬೇಕು. ಸುಮ್ಮನೆ ನೇರ ಮೈಕ್ ಹಿಡಿದು ಮಹಾಪ್ರಾಣ ಉಚ್ಚರಿಸಿದರೆ ಪ್ರುಪ್ ಪ್ರುಪ್ ಅಂತ ಸೌಂಡ್ ಬಂದು ಕರ್ಕಷ ಅನಿಸುತ್ತೆ. ಹೀಗಾಗಿ, ಕೆಲವು ಪದಗಳು ಬಂದಾಗ ನಾನು ಮೈಕನ್ನು ಸೈಡ್‌ಗೆ, ಕ್ರಾಸ್ ಮಾಡ್ಕೊಳ್ಳೋದು ಆ ಗಾಳಿ ಶಬ್ದ ಬರಬಾರದು ಅಂತ. ಇವೆಲ್ಲ ನಿಮಗೆ ಹೇಗೆ ಬಂತು?
ನೋಡಿ ನೋಡಿ ಕಲಿತದ್ದು. ನನ್ನ ರೆಕಾರ್ಡಿಂಗ್ ಮುಗಿದ ಮೇಲೆ, ಪಕ್ಕದ ಇನ್ನೊಂದು ರೆಕಾರ್ಡಿಂಗ್‌ನಲ್ಲಿ ಕೂತ್ಕೊàತಾ ಇದ್ದೆ. ಈ ಸಿಗ್ನಲ್ ಏಕೆ ಕಡಿಮೆ, ವಾಯ್ಸ ಹೇಗೆಲ್ಲಾ ಬ್ಯಾಲೆನ್ಸ್ ಮಾಡ್ತಾರೆ ಅಂತ ಕೇಳ್ತಾ ಇದ್ದೆ. ನಾನು ಮ್ಯುಸಿಕ್ ಮಾಡೋಕೆ ಶುರು ಮಾಡಿದ ಮೇಲೆ, ಎಲ್ಲಾ ಹಾಡುಗಳನ್ನು ನಾನೇ ರೆಕಾರ್ಡಿಂಗ್ ಮಾಡಿಕೊಂಡೆ. ರೀ ರೆಕಾರ್ಡಿಂಗ್ ಕೂಡ ಶೇ.90ರಷ್ಟು ನಾನೇ ಮಿಕ್ಸ್ ಮಾಡ್ಕೊಂಡೆ. ಇದು ನನಗೆ ಪ್ಯಾಷನ್. ಅಂಧನಾಗಿ ಹೋಗಿ, ಹಾಡಿ, ಹಣ ಬಂತು ಅನ್ನೋದೆಲ್ಲ ಇಲ್ಲ ನನಗೆ. ಮೈ ಕ್ ಮುಂದೆ ನಿಂತು ಜಗತ್ತನ್ನು ಮರೆಯೋದು ಹೇಗೆ?
ನೀವು ಉಸಿರನ್ನು ಹ್ಯಾಗೆ ತಗೋತೀರ, ಹ್ಯಾಗೆ ಬಿಡ್ತೀರ? ಹಾಗೇನೆ ಇದು. ಸ್ಟೇಜ್‌ಮೇಲೆ ಇದ್ದಾಗ, ಬಾಲು ಎಲÅನೂ ನೋಡ್ತಾ ಇರ್ತಾರೆ ಅಂದೊRàತಾರೆ. ಆದರೆ, ಎಲ್ಲರೂ ಔಟ್ ಫೋಕಸ್ ಟು ಮಿ. ನೋಡಿದೆ ಅಂತಿಟ್ಟುಕೊಳ್ಳಿ, ಎದುರಿಗೆ ಹುಳ್ಳಗೆ ಮಾಡಿಕೊಂಡ ಮುಖ ಕಂಡರೆ ನಾನು ಚೆನ್ನಾಗಿ ಹಾಡ್ತಾ ಇಲ್ಲ ಅನ್ನೋ ಫೀಲ್ ಶುರುವಾಗಿ, ಆತ್ಮವಿಶ್ವಾಸ ಕಡಿಮೆ ಆಗಲೂ ಬಹುದು. ಹಾಗಾಗಿ ನನ್ನ ಫೋಕಸ್ ಗೀತೆಯ ಮೇಲೆ ಮಾತ್ರ ಇರುತ್ತೆ. ಗಾಯಕ ತಾನಾಯ್ತು ತನ್ನ ಮೈಕಾಯ್ತು ಅಂತಿರಬೇಕಾ?
ಪಕ್ಕದಲ್ಲಿ ನಿಮಗಿಂತ ಚಿಕ್ಕೋರು ಹಾಡಿದರೂ, ಚೆನ್ನಾಗಿ ನುಡಿಸಿದರೂ ತತ್‌ಕ್ಷಣ ರಿಯಾಕ್ಟ್ ಮಾಡದೆ ಇದ್ದರೆ ನೀವು ಮ್ಯೂಸಿಷಿಯನ್ನೇ ಅಲ್ಲ. ಮೊನ್ನೆ ವೇದಿಕೆ ಮೇಲೆ ಗಾಯಕಿ ಮಂಗಳಮ್ಮ ತೊರೆದು ಜೀವಿಸ ಬಹುದೆ…ಹಾಡುವಾಗ ನನ್ನ ಎಮೋಷನನ್ನು ಕಂಟ್ರೋಲ್ ಮಾಡ್ಕೊಳಕ್ಕೆ ಆಗಲಿಲ್ಲ. ಎದ್ದು ಬಂದು ರಿಯಾಕ್ಟ್ ಮಾಡಿದೆ. ಇಂಥ ಸಂದರ್ಭದಲ್ಲಿ ನಾನು ಬಾಲ ಸುಬ್ರಮಣ್ಯಂ , ಮೊಹ್ಮದ್ ರಫಿ ಅನ್ನೋದೆಲ್ಲಾ ಮುಖ್ಯವಲ್ಲ. ಇನ್ನೊಂದು ಸಲ ಮೈಸೂರಿನ ಹೋಟೆಲ್ ಮುಂದೆ ಚಿಕ್ಕ ವಯಲಿನ್ ಥರ ಇರೋ ಏಕ್‌ಥಾರ ಇಟ್ಕೊಂಡು ಒಬ್ಬ ವ್ಯಕ್ತಿ ನುಡಿಸ್ತಾ ಇದ್ದರು. ಅವರ ಹತ್ರ ನಿಂತುಕೊಂಡು, “ಆ ಹಾಡು ನುಡಿಸಯ್ನಾ, ಈ ಹಾಡು ನುಡಿಸಯ್ನಾ’ ಅಂತ ಕೇಳ್ಕೊಂಡು ಕೂತಿದ್ದೆ. ನಾನು ಗ್ರೇಟ್ ಸಿಂಗರ್ ಬಾಲಸುಬ್ರಮಣ್ಯಂ ಅಂತ ಅಂದೊRಂಡ್ರೆ ಇವೆಲ್ಲ ಮಾಡೋಕೆ ಆಗುತ್ತಾ? ವೇದಿಕೇಲಿ ತಪ್ಪು ಮಾಡಿದರೆ..?
ಮುನಿಸಿಕೋ ಬಾರದು . ನನ್ನನ್ನೂ ಸೇರಿದಂತೆ ಎಲÅೂ ತಪ್ಪು ಮಾಡೋರೆ. ಆದರೆ ಮತ್ತೆ ಮರುಕಳಿಸದಂತೆ ನೋಡ್ಕೊàಬೇಕು. ತಪ್ಪಾದಾಗ ಸ್ವಲ್ಪ ಅವರ ಕಡೆ ನೋಡಿದ್ರೆ ಸಾಕು ಅವರಿಗೆ ಗೊತ್ತಾಗುತ್ತೆ. ಪ್ರಪಂಚದಲ್ಲಿ ಪರಫೆಕ್ಟ್ ಆರ್ಟಿಸ್ಟೇ ಇಲ್ಲ. ಮೋಸ್ಟ್ ಪರಫೆಕ್ಟ್ ಆರ್ಟಿಸ್ಟ್ ಅಂದರೆ ಕಡಿಮೆ ತಪ್ಪು ಮಾಡೋರು. ಮೆಲೋಡಿಗೆ ಶಾಸ್ತ್ರೀಯತೆ ಪ್ರಮಾಣ ಎಷ್ಟು?
ಸಿನಿಮಾ ಹಾಡಿಗೆ ಸಂದರ್ಭ ಮುಖ್ಯ. ಶಾಸ್ತ್ರೀಯ ಸಂಗೀತವನ್ನು ಸಂಕ್ಷಿಪ್ತ ಮಾಡಿ, ಅದರಲ್ಲಿರೋ ರಸವನ್ನು ಬಿಡದೆ, ಪಾಮರರಿಗೂ ಅರ್ಥವಾಗುವಂತೆ ಮಾಡುವುದು ಮುಖ್ಯ. ಅಂದರೆ, ನಿರ್ದೇಶಕನಿಗೆ ಆ ಸಂಗೀತ ಪ್ರಜ್ಞೆ ಇರಬೇಕು. ಶಾಸಿŒಯತೆಯನ್ನು ಸೋಸಿ, 4,5 ನಿಮಿಷದ ಸಿನಿಮಾ ಹಾಡು ಮಾಡೋದು ಆರ್ಟ್. ವಿದ್ವಾಂಸರಾಗಿದ್ದರೂ ಎಷ್ಟೋಜನಕ್ಕೆ ಇದು ಕಷ್ಟ. ಪ್ರಸೆಂಟೇಷನ್ ಅಂದರೆ ಏನು ?
ಚಿತ್ರದ ಸಂದರ್ಭವನ್ನು ಹಾಡಲ್ಲಿ ಹೇಳ್ಳೋದು. ಅದಕ್ಕೆ ಪೂರಕವಾದ ಎಕ್ಸಪ್ರೇಷನ್ ಕೊಡೋದು. ಅಂದರೆ, ಕಂಠದಿಂದ ಆ್ಯಕ್ಟ್ ಮಾಡೋದು. ರಫಿ ಇದರಲ್ಲಿ ಅತ್ಯದ್ಬುತ. ಇದು ಪ್ರಾಕ್ಟೀಸ್ ಮಾಡಿದರೆ ಬರುತ್ತೆ ಅನ್ನೋದೆಲ್ಲಾ ಅವರಿಗೆ ಒಪ್ಪೋ ಮಾತಲ್ಲ. ಗಾಡ್ ಗಿಫ್ಟ್ ಅವರಿಗೆ. ಈಗಿನವರು ಸಂಗೀತವನ್ನು ರಿಯಾಲಿಟಿ ಶೋನಲ್ಲೇ ಬಿಟ್ಟು ಬಿಡ್ತಾರಾ…
ಹಾಗೇನಿಲ್ಲಪ್ಪಾ. ಕ್ಲಾಸಿಕಲ್ ಮ್ಯೂಸಿಕ್ ಕಲೀತಾ ರಿಯಾಲಿಟಿ ಶೋನಲ್ಲೂ ತೊಡಗಿಸಿಕೊಳ್ತಾರೆ. ಹಾಗಂತ ಎಲ್ಲರೂ ಸಂಗೀತ ಮರೆತು ಬಿಡ್ತಾರೆ ಅಂತನಿಸಲ್ಲ. ಕ್ಲಾಸಿಕಲ್ ಮ್ಯೂಸಿಕ್ ಕಲಿತು ಲೈಟ್ ಮ್ಯೂಸಿಕ್ ಹಾಡೋದು ಸುಲಭವಲ್ಲ. ಇದರ ಛಾಯೆ ಅದರ ಮೇಲೆ, ಅದರ ಛಾಯೆ ಇದರ ಮೇಲೆ ಬರಬಾರದು. ಅದು ಕೆಲವರಿಗೆ ಮಾತ್ರ ಸಾಧ್ಯ. ಅವರೆಲ್ಲ ಶಾಸ್ತ್ರೀಯ ಸಂಗೀತ ಮರೆಯೋಲ್ಲ. ಆದರೆ, ನಿರಂತರ ಪ್ರಾಕ್ಟೀಸ್ ಮಾಡುತ್ತಾ ಇರಬೇಕು. ಅಲ್ಲಿ ಸಿಗೋ ಪ್ರಚಾರ ಶಾಶ್ವತವಾ?
ಮೈ ಮರೆಯಬಾರದು. ಶೋನಲ್ಲಿ ಇರೋ ತನಕ ಎಷ್ಟು ಚೆನ್ನಾಗಿ ಹಾಡ್ತಾನೆ ಅಂತ ಜನ ಫಾಲೋ ಮಾಡ್ತಾ ಇರ್ತಾರೆ. ಬಹುಮಾನ ಬಂದು, ಮುಂದಿನ ಸೀರೀಸ್ ಹೊತ್ತಿಗೆ ಜನ ಅವರನ್ನು ಮರೆತೇ ಹೋಗಿರ್ತಾರೆ. ಅಲ್ಲಿ ಹಾಡಿದ ನಂತರ ಎಲ್ಲರಿಗೂ ಅವಕಾಶ ಸಿಗುತ್ತೆ ಅಂತ ಹೇಳಕ್ಕಾಗಲ್ಲ. ಸಿಗಬೇಕು ಅನ್ನೋಕೆ ಸಿನಿಮಾ ಪ್ರಪಂಚದಲ್ಲಿ ಅಷ್ಟು ಜಾಗಾನೂ ಇಲ್ಲ. ಇದಕ್ಕೆ ಪರಿಹಾರ ಏನು?
ನಾಲ್ಕೈದು ಗಾಯಕರನ್ನು ಆಯ್ಕೆ ಮಾಡಿಕೊಳ್ಳಿ. ಅವರಿಗೆ ಹೆಚ್ಚು, ಹೆಚ್ಚು ಅವಕಾಶ ಕೊಡಿ. ಈಗಿನವರಿಗೆ ಸೀನಿಯರ್ಸ್ ಜೊತೆ ಕೆಲಸ ಮಾಡುವ ಅವಕಾಶ ಇಲ್ಲ. ನನಗೆ ಆ ಅದೃಷ್ಟ ಲಭಿಸಿತ್ತು. ಅವರನ್ನು ನೋಡ್ತಾ, ನೋಡ್ತಾ, ಜೊತೆಯಲ್ಲಿ ಹಾಡ್ತಾ ಹಾಡ್ತಾ ಎಷ್ಟೊಂದು ವಿಚಾರ ಕಲಿತೆ ಗೊತ್ತ? ಮತ್ತೆ ….?
ಟೆಕ್ನಾಲಜಿ ಬಂದ ಮೇಲೆ, ಬಹುತೇಕರು ಹೋಗ್ತಾರೆ ನಾಲ್ಕು ಬಾರಿ ಸಾಹಿತ್ಯನ, ಸಂಗೀತನ ಉರುಹಚ್ಚಿ, ಹಾಡ್ತಾರೆ. ಹಾಡಿದ ನಾಲ್ಕು ನಾಲ್ಕು ಬಾರ್ ಅನ್ನು ಕಟ್ ಅಂಡ್ ಪೇಸ್ಟ್ ಮಾಡಿ, ಮಾಡಿ ಕೊನೆಗೆ ಸಿಂಗರ್ ಆಗೋಗ್ತಾರೆ. ಇದು ಆಗಬಾರದು. ಗಾಯಕರು ಕಡೇ ಪಕ್ಷ ಪೂರ್ತಿ ಹಾಡನ್ನು ಹಾಡಕ್ಕಾದರೂ ಪ್ರಯತ್ನ ಪಡಬೇಕು. ಟೆಕ್ನಾಲಜಿ ಎಲ್ಲಿ ಬಳಸಬೇಕು?
ಹಾಡುಗಳಲ್ಲಿ ಸಣ್ಣ, ಪುಟ್ಟ ತಪ್ಪು ನುಸುಳಿದರೆ ಅದನ್ನು ಸರಿ ಮಾಡೋಕೆ ಟೆಕ್ನಾಲಜಿ ಬಳಸಬೇಕು ರೀ… ಎಲ್ಲದಕ್ಕೂ ಅದರ ಮೇಲೇನೇ ಡಿಪೆಂಡ್ ಆಗಿ ಬಿಟ್ರೆ ಗತಿ ಏನು? ಗಾಯನದಲ್ಲಿ ಎಷ್ಟೇ ಟೆಕ್ನಾಲಜಿ ಬಂದರೂ ಹ್ಯೂಮನ್ ಎಲಿಮೆಂಟ್ ಬಹಳ ಮುಖ್ಯ. ಆಗಷ್ಟೇ ನಾವು ಹಾಡಿದ್ದು ಹ್ಯೂಮನ್‌ಬೀಯಿಂಗ್‌ಗೆ ತಲುಪೋದು. ಇಲ್ಲವಾದರೆ ಟೆಕ್ನಾಲಜಿ ರೀಚಸ್ ರೋಬಟ್, ನಾಟ್ ಹ್ಯೂಮನ್ ಬೀಯಿಂಗ್. ಕಾರ್ಯಕ್ರಮ ಮುಗಿದ ಮೇಲೆ ನೀವು ಅಳ್ತೀರಂತೆ…
ಕಛೇರಿ ನೋಡಿ, ಚಪ್ಪಾಳೆ ತಟ್ಟಿ ಅಭಿನಂದಿಸಿದವರಲ್ಲಿ ಶೇ. 50 ರಷ್ಟು ಜನ, ನನ್ನ ಕಾರಿನ ಹತ್ತಿರ ನಿಂತಿರುತ್ತಾರೆ. ಹೋಗೋ ತನಕ ” ಏನು ಹಾಡಿದ್ರೀ…’ ಅಂತ ಕೈ ಕೊಡ್ತಾರೆ. ಆಗ ಯಾರಿಗೂ ಸಿಗದ ಜನ್ಮ ಇದು ಅಂತ ಅಳು ಬರುತ್ತೆ. ನಾನು ಹೆಚ್ಚಾಗಿ ಏನು ಮಾಡಿಲ್ಲ, ಕಂಠವನ್ನು ಭಗವಂತ ಕೊಟ್ಟಿದ್ದಾನೆ. ಚೆನ್ನಾಗಿ ಹಾಡೋಕೆ ಪ್ರಯತ್ನ ಪಟಿದ್ದೀನಿ ಅಷ್ಟೇ. ನಾನು ಗ್ರೇಟ್, ನಾನು ಏನೇ ಹಾಡಿದರೂ ಜನ ಚಪ್ಪಾಳೆ ಕೊಡ್ತಾರೆ ಅಂದ್ಕೊಂಡರೆ “ಏನಯ್ನಾ, ಅವನಿಗೆ ಅಷ್ಟೊಂದು ಹೆಡ್‌ವೆಯ್r. ಮನುಷ್ಯತ್ವವೇ ಇಲ್ಲ ಅವನಿಗೆ, ಅವ° ಹಾಡು ಕೇಳಬೇಕ?’ ಅಂತ ಕಛೇರಿಗೇ ಬರೋಲ್ಲ. ನನ್ನ ಅನುಭವದ ಪ್ರಕಾರ, ಮ್ಯೂಸಿಕ್ ಈಜ್ ಎ ರಿಸಿಪ್ಲಿಕೇಷನ್ ಆಫ್ ಲವ್ ಅಂಡ್ ಅಫೆಕ್ಷನ್. ಇಟ್ ಕಮ್ಸ್ ಬ್ಯಾಕ್ ಟು ಯು, ಎನರ್ಜಿ ಕಮ್ಸ್ ಬ್ಯಾಕ್ ಟು ಯು ಫ್ರ್‌ಮ್ ಆಡಿಯನ್ಸ್. ಇಲ್ಲಾಂದ್ರೆ ಹಾಡೋದೇ ಕಷ್ಟವಾಗಿಬಿಡ್ತೆ. ನೀವ್ಯಾಕೆ ಶಾಸ್ತ್ರೀಯ ಸಂಗೀತ ಕಛೇರಿ ಕೊಡಲ್ಲ ?
ಕೊಡಬಾರದು ಅಂತಲ್ಲ. ಅದಕ್ಕೆ ಒಂದು ಮನೋಧರ್ಮ ಬೇಕು. ಶಾಸ್ತ್ರೀಯವಾಗಿ ಸಂಗೀತ ಕಲ್ತಿರಬೇಕು. ನನಗೆ ಅದು ಗೊತ್ತಿಲ್ಲ. ಸಂಗೀತದಲ್ಲಿ ನನಗೆ ಗೊತ್ತಿರೋದನ್ನೇ ಇಟ್ಕೊಂಡು ಏನೋ ಒಂದು ಮಾಡ್ತಾ ಇರ್ತೀನಿ. ಹಾಗಂತ, ಮಿಕ್ಕವರೆಲ್ಲಾ ಕಛೇರಿ ಮಾಡ್ತಾ ಇದ್ದಾರೆ. ನಾನು ಮಾಡ್ತಾ ಇಲ್ವೇ ಅನ್ನೋ ಕೊರಗಿಲ್ಲ. ಮುಖ್ಯವಾದದ್ದು ವಾಟ್ ಯು ನೋ ವಾಟ್ ಯು ಡೋಂಟ್ ನೋ. ಇದು ನನಗೆ ಚೆನ್ನಾಗಿ ಗೊತ್ತಿದೆ. ಆ ಕಾಲ ಬಹಳ ಚೆನ್ನಾಗಿತ್ತು ಅಂತಾರಲ್ಲ…
ಅದೇ ನನಗೆ ಇಷ್ಟವಾಗಲ್ಲ. ಆ ದಿನಗಳಲ್ಲಿ, ಈ ದಿನಗಳಲ್ಲಿ ಅಂತೇನೂ ಇಲ್ಲ. ಆಗ ಕೆಟ್ಟ ಹಾಡುಗಳ ಸಂಖ್ಯೆ ಕಡಿಮೆ ಇತ್ತು. ಈಗ ಒಳ್ಳೆ ಹಾಡುಗಳ ಸಂಖ್ಯೆ ಕಡಿಮೆ ಇದೆ ಅಷ್ಟೇ. ಆಗ ನಾಲ್ಕೈದು ಗಾಯಕರು, ಮ್ಯೂಸಿಕ್ ಡೈರಕ್ಟರ್‌ಗಳು ಇದ್ದರು. ಜನಕ್ಕೆ ಪರಿಚಿತವಾದ ವಾಯ್ಸ ಅನ್ನು, ತಿರುಗ , ತಿರುಗ ಕೇಳ್ತಾ ಪಾಪ್ಯುಲರ್ ಆಗೋಕ್ಕೆ ಅವಕಾಶ ಆಯ್ತು. ಈಗ, ಒಂದು ಸಿನಿಮಾಕ್ಕೆ ಫ್ರೆಶ್ ವಾಯ್ಸ ಕೊಟ್ಟೋರನ್ನು ಇನ್ನೊಂದು ಸಿನಿಮಾಕ್ಕೆ ಡ್ರಾಪ್ ಮಾಡ್ತಾರೆ. ವೆರೈಟಿ ಅನ್ನೋ ಹೆಸರಲ್ಲಿ ಒಂದೇ ಹಾಡನ್ನು ಮೂವರ ಕೈಲ್ಲಿ ಹಾಡಿಸ್ತಾರೆ. ಸ್ಕ್ರೀನ್‌ನಲ್ಲಿ ಒಬ್ಬ ಆರ್ಟಿಸ್ಟ್ ಕಂಡರೆ, ಅವನ ಗಂಟಲಲ್ಲಿ ಎರಡು ವಾಯ್ಸ ಇರುತ್ತೆ. ದಿಸ್ ಈಸ್ ನಾನ್‌ಸೆನ್ಸ್. ಇದೇನಾ ವೆರೈಟಿ ಅಂದ್ರೆ? ಕಟ್ಟೆ ಗುರುರಾಜ್