Advertisement

Maski: ಪೊಲೀಸ್ ಪೇದೆಗಳ‌ ಮೇಲೆ ಹಲ್ಲೆ: ಎಸ್ಪಿ, ಎಎಸ್ಪಿ ಭೇಟಿ, ವಿಚಾರಣೆ

04:41 PM Jan 09, 2024 | Team Udayavani |

ಮಸ್ಕಿ: ತಾಲೂಕಿನ ಬಳಗಾನೂರು ಪೊಲೀಸ್ ಠಾಣೆಯ ಪೇದೆಗಳಿಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ವರಿಷ್ಠಾಧಿಕಾರಿ ಪ್ರತ್ಯೇಕ ಭೇಟಿ‌ ನೀಡಿ‌ ವಿಚಾರಣೆ ‌ನಡೆಸಿದ್ದಾರೆ.

Advertisement

ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಶಂಕಿತ ಆರೋಪಿಗಳ ವಿಚಾರಣೆಗೆ ತೆರಳಿದಾಗ ನಾಲ್ಕೈದು ಜನರ ಗುಂಪು ಪೇದೆಗಳಾದ ಮಂಜುನಾಥ, ಗೋಪಾಲ ಎನ್ನುವರ ಮೇಲೆ ದಾಳಿ ನಡೆಸಿದ್ದರು. ಪೇದೆಗಳಿಬ್ಬರು ಗಂಭಿರ ಗಾಯಗೊಂಡು ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್ಪಿ ನಿಖಿಲ್ ಬಿ. ಗಾಯಾಳು ಸಿಬ್ಬಂದಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಬಳಗಾನೂರು ಪೊಲೀಸ್ ಠಾಣೆ, ಹಸ್ಮಕಲ್ ಗ್ರಾಮ‌ ಹಾಗೂ‌ ಮಸ್ಕಿಗೆ ಭೇಟಿ ನೀಡಿ‌ ಘಟನಾ ಸ್ಥಳ‌‌ ಪರಿಶೀಲನೆ ನಡೆಸಿದರು‌ಬ. ಬಳಿಕ‌ ಸುದ್ದಿಗಾರರ ಜತೆ ಮಾತಾನಾಡಿ, ಪೊಲೀಸರ ಮೇಲೆ ದಾಳಿ‌ ಮಾಡುವುದು ಹೊಸದೇನಲ್ಲ. ಇಂತಹ ಘಟನೆಗಳು ಆಗಾಗ ನಡೆಯುತ್ತವೆ. ಶೈಕ್ಷಣಿಕ, ಕಾನೂನಿನ ತಿಳಿವಳಿಕೆ ಕೊರತೆಯಿಂದ ಇಂತಹ ಘಟನೆ ನಡೆಯುತ್ತವೆ. ಈ ಬಗ್ಗೆ ಆರು ಜನರ ಮೇಲೆ ಕೇಸ್ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಸಿಂಧನೂರು ಗ್ರಾಮೀಣ ಸಿಪಿಐ, ಇಬ್ಬರು ಪಿಎಸ್ಐಗಳ ನೇತೃತ್ವದಲ್ಲಿ ವಿಶೇಷ ತಂಡ‌ ರಚನೆ ಮಾಡಲಾಗಿದೆ. ಶೀಘ್ರವೇ ಅರೋಪಿಗಳನ್ನು ಬಂಧಿಸಿ ಕಾನೂನು ಕ್ರಮ‌ ಕೈಗೊಳ್ಲಲಾಗಿತ್ತದೆ ಎಂದರು.

ಬಿಗಿ ಕ್ರಮ: ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಿನ ‌ಅಪರಾಧ‌ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಎಎಸ್ಪಿ ಶಿವಕುಮಾರ್ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಬೀಟ್ ಪೊಲೀಸ್, 112 ವಾಹನ ಸಂಚಾರ,‌ ಹೆದ್ದಾರಿ ಗಸ್ತು ಸೇರಿ ಹೆಚ್ಚಿನ ಪೊಲೀಸ್ ಕಣ್ಗಾವಲು ಇರಿಸಲಾಗಿದೆ. ಸಾರ್ವಜನಿಕರು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: IMDbಯ 2024 ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ: ಸ್ಥಾನ ಪಡೆದ ಕನ್ನಡದ ಏಕೈಕ ಸಿನಿಮಾ

Advertisement

Udayavani is now on Telegram. Click here to join our channel and stay updated with the latest news.

Next