Advertisement

ಧರ್ಮವನ್ನು ಮೀರಿದರೆ ಅನಾಹುತ: ಸುಬ್ರಹ್ಮಣ್ಯ ಶ್ರೀ

01:00 AM Feb 16, 2019 | Team Udayavani |

ಬಸ್ರೂರು: ಮನುಷ್ಯ ಧರ್ಮವನ್ನು ಪಾಲಿಸಬೇಕು. ಪ್ರಾಚೀನ ದೇವಸ್ಥಾನಗಳಲ್ಲಿ ದಿವ್ಯ ಶಕ್ತಿಯಿರುತ್ತದೆ. ಶಿಥಿಲವಾಗಿದ್ದರೆ ಜೀರ್ಣೋದ್ಧಾರ ಮಾಡಬೇಕಾಗುತ್ತದೆ. ಶಕ್ತಿ ಕೇಂದ್ರದ ಅಭಿವೃದ್ಧಿಯಲ್ಲಿ ಬ್ರಹ್ಮಕಲಶಾಭಿಷೇಕ ಮುಖ್ಯ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ನುಡಿದರು.

Advertisement

ಅವರು ಶುಕ್ರವಾರ ಸೌಕೂರು ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಹಾಲಾಡಿ ಪಂಚಾಂಗಕರ್ತ ತಟುವಟ್ಟು ವಾಸುದೇವ ಜೋಯಿಸರು ಧಾರ್ಮಿಕ ಉಪನ್ಯಾಸ ನೀಡಿದರು. ದಾನಿಗಳನ್ನು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಕಿಶನ್‌ ಹೆಗ್ಡೆ ಅವರು. ಬ್ರಹ್ಮಕಲಶಾಭಿಷೇಕ ಸಂದರ್ಭ ಭಕ್ತರು, ದಾನಿಗಳ ಸೇವಾ ಕಾರ್ಯವನ್ನು ಶ್ಲಾ ಸಿದರು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಉದ್ಯಮಿ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ, ಮೈಸೂರು ಬಂಟರ ಸಂಘದ ಅಧ್ಯಕ್ಷ ತೊಂಭತ್ತು ಪ್ರಭಾಕರ ಶೆಟ್ಟಿ, ಉಡುಪಿ ಕಿದಿಯೂರು ಹೊಟೇಲ್‌ ಆಡಳಿತ ನಿರ್ದೇಶಕ ಜಿತೇಶ್‌ ಕಿದಿಯೂರು, ಸೌಕೂರು ಭಂಡಾರ್ರಮನೆಯ ಜಗದೀಶ ಶೆಟ್ಟಿ, ವೇ|ಮೂ| ಬ್ರಹ್ಮಶ್ರೀ ನಾಗೇಶ್ವರ ಭಟ್ಟ ದೇವಲ್ಕುಂದ ಹಾಗೂ ಅರ್ಚಕ ಎಸ್‌. ಅನಂತ ಅಡಿಗ ಉಪಸ್ಥಿತರಿದ್ದರು.ಸಕ್ಕಟ್ಟು ರಾಜಶೇಖರ ಸ್ವಾಗತಿಸಿದರು, ದಾಮೋದರ ಶರ್ಮ ನಿರೂಪಿಸಿದರು, ಆನಂದ ಮೊಗವೀರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next