Advertisement

ಬಿತ್ತನೆ ಬೀಜ ವಿತರಣೆಗೆ ಚಾಲನೆ

05:09 AM May 14, 2020 | Suhan S |

ಭಟ್ಕಳ: ತಾಲೂಕಿನ ಸೂಸಗಡಿ ಹೋಬಳಿ ಹಾಗೂ ಮಾವಳ್ಳಿ ಹೋಬಳಿಗಳಲ್ಲಿ ಸಾವಿರಾರು ರೈತರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದು, ರೈತರಿಗೆ ಅನುಕೂಲವಾಗುವಂತೆ ಕೃಷಿ ಇಲಾಖೆಯಿಂದ ಬೀಜ ವಿತರಣೆ ಕಾರ್ಯಕ್ಕೆ ಮಾವಳ್ಳಿ ಹೋಬಳಿಯಲ್ಲಿ ಶಾಸಕ ಸುನೀಲ್‌ ನಾಯ್ಕ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಟ್ಕಳ ನಗರ ಹಾಟ್‌ಸ್ಪಾಟ್‌ ಆಗಿದ್ದರೂ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಗೊಳಿಸಲಾಗಿದೆ. ಕೃಷಿಕರು ಕೃಷಿ ಇಲಾಖೆಯಿಂದ ಭತ್ತದ ಬೀಜ ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರಲ್ಲದೇ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಕೂಡಾ ಮಾಸ್ಕ್ ಹಾಕುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕರೆ ನೀಡಿದರು. ಅಧಿಕಾರಿಗಳ ಬಳಿ ಭತ್ತದ ಬೀಜ ದಾಸ್ತಾನು ಕುರಿತು ಶಾಸಕರು ಮಾಹಿತಿ ಪಡೆದುಕೊಂಡರು.

ಮಾವಳ್ಳಿ ಹೋಬಳಿಯ ಶಿರಾಲಿಯ ಸಾರದೊಳೆ, ಕಾಯ್ಕಿಣಿಯ ತೆರ್ನಮಕ್ಕಿ ಮತ್ತು ಬೈಲೂರಿನಲ್ಲಿ ಭತ್ತದ ಬೀಜಗಳನ್ನು ವಿತರಿಸಲಾಗುತ್ತಿದ್ದು, ಎಂಟಿಯು 1001, ಎಂಓ-4, ಜಯಾ ತಳಿ ಸೇರಿದಂತೆ ಒಟ್ಟೂ 550 ಕ್ವಿಂಟಾಲ್‌ ಬೀಜಗಳನ್ನು ದಾಸ್ತಾನು ಇಡಲಾಗಿದೆ. ಭಟ್ಕಳದ ರೈತ ಸಂಪರ್ಕ ಕೇಂದ್ರಕ್ಕೆ 170 ಕ್ವಿಂಟಾಲ್‌ ಭತ್ತದ ಬೀಜ ದಾಸ್ತಾನಿದ್ದು, ಕೆಲವೇ ದಿನಗಳಲ್ಲಿ ರೈತರಿಗೆ ವಿತರಿಸುವ ಕಾರ್ಯ ಮಾಡುತ್ತೇವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರದೊಳೆಯಲ್ಲಿ ಒಂದೇ ದಿನ 160 ರೈತರಿಗೆ ಭತ್ತದ ಬೀಜಗಳನ್ನು 200 ಕ್ವಿಂಟಲ್‌ ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಜಿ.ಎನ್‌. ನಾಯ್ಕ, ಜಿ.ಎಲ್‌. ನಾಯ್ಕ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next