Advertisement

ಕೃಷಿ ಕ್ಷೇತ್ರದಲ್ಲಿ ಬಿತ್ತನೆ ಜಾಗೃತಿ ವಹಿಸಿ: ನಾಯಕ

12:57 PM Jun 04, 2022 | Team Udayavani |

ದೇವದುರ್ಗ: ಕೃಷಿಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಲು ಮಣ್ಣು ಪರೀಕ್ಷೆ ಅಗತ್ಯವಾಗಿದ್ದು, ಕೃಷಿ ಸಂಜೀವಿನಿ ಯೋಜನೆಯಿಂದ ಮಣ್ಣು ಪರೀಕ್ಷೆ ಸೇರಿದಂತೆ ರೈತರಿಗೆ ಅಗತ್ಯ ಸಲಹೆ, ಸೂಚನೆ ಲಭ್ಯವಾಗಲಿದೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೃಷಿ ಸಂಜೀವಿನಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು ಅಗತ್ಯವಾಗಿ ತಮ್ಮ-ತಮ್ಮ ಜಮೀನಿ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಅಂದಾಗ ಮಾತ್ರ ಜಮೀನಿಗೆ ನೀಡಬೇಕಾದ ಪೋಷಕಾಂಶಗಳ ಬಗ್ಗೆ ಮಾಹಿತಿ ತಿಳಿಯಲಿದೆ. ಇದೀಗ ಕೃಷಿ ಸಂಜೀವಿನಿ ಯೋಜನೆಯಡಿ ಗ್ರಾಮೀಣ ಭಾಗಕ್ಕೆ ವಾಹನ ತೆರಳಿ ಮಣ್ಣಿನ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ಲ್ಯಾಬ್‌ ಟು ಲ್ಯಾಂಡ್‌ ಎಂಬ ಘೋಷ ವಾಕ್ಯದೊಂದಿಗೆ ಕೃಷಿ ಸಂಜೀವಿನಿ ಯೋಜನೆಯಡಿ ಮಣ್ಣಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆ ಮೂಲಕ ನಿಖರ ಮಾಹಿತಿ ತಿಳಿಯಲಿದೆ. ಇದರಿಂದ ಕೃಷಿ ಚಟುವಟಿಕೆ ಹಾಗೂ ಬೆಳೆಗಳ ನಿರ್ವಹಣೆ ಸುಲಭವಾಗಲಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಿದಾಗಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇನ್ನು ಸರಕಾರವೇ ಅಭಿವೃದ್ಧಿ ಪಡಿಸಿರುವ ಜಿಆರ್‌ಜಿ 811 ಎಂಬ ನೂತನ ತಳಿಯ ತೊಗರಿ ಬೀಜವನ್ನು ರೈತರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಂಬಣ್ಣ ನೀಲಗಲ್‌, ಜಹೀರಪಾಷ್‌ ದೇವಿಂದ್ರಪ್ಪ, ನಾಗರಾಜ ಪಾಟೀಲ್‌, ಕೃಷಿ ಸಹಾಯಕ ನಿರ್ದೇಶಕ ಬಸವರಾಜ ಸಿದ್ದರೆಡ್ಡಿ, ಶ್ರೀನಿವಾಸ, ರಂಗಪ್ಪ ಬಂದೇನವಾಜ್‌, ರೇಖಾ, ಶಿವಲಿಂಗಯ್ಯ, ಕೃಷ್ಣ ಪಾಟೀಲ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next