ಲಾಸ್ ಏಂಜಲಿಸ್ : ಕಳೆದ ಎರಡು ದಶಕಗಳಲ್ಲೇ ಅತ್ಯಂತ ಪ್ರಬಲ ಎನಿಸಿರುವ 6.4 ಅಂಕಗಳ ತೀವ್ರತೆಯ ಅತ್ಯಂತ ಪ್ರಬಲ ಭೂಕಂಪ ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ಸಂಭವಿಸಿದೆ.
ಈ ಭೂಕಂಪದಿಂದ ಇಲ್ಲಿನ ಸೇನಾ ಸೌಕರ್ಯಗಳಿಗೆ ಭಾರೀ ಹಾನಿ, ನಾಶ, ನಷ್ಟ ಉಂಟಾಗಿದೆ. ಆದರೆ ಅತ್ಯಂತ ವಿರಳ ಜನವಸತಿಯ ಕಾರಣ ಸಾವು ನೋವು ಅತ್ಯಂತ ಸಣ್ಣ ಪ್ರಮಾಣದಲ್ಲಿ ಆಗಿದೆ ಎಂದು ವರದಿಗಳು ತಿಳಿಸಿವೆ.
ದಕ್ಷಿಣ ಕ್ಯಾಲಿಫೋರ್ನಿಯದ ಸಣ್ಣ ನಗರವಾಗಿರುವ ರಿಜ್ ಕ್ರೆಸ್ಟ್ ನಿಂದ ಕೇವಲ ಹತ್ತು ಕಿ.ಮೀ. ದೂರದಲ್ಲಿರುವ ಮೊಜಾವೆ ಮರಭೂಮಿಯಲ್ಲಿ ನಿನ್ನೆ ಗುರುವಾರ ಸ್ಥಳೀಯ ಕಾಲಮಾನ ಬೆಳಗ್ಗೆ 10.33ರ ಹೊತ್ತಿಗೆ (ಜಿಎಂಟಿಟಿ 1733) ಸಂಭವಿಸಿರುವ ಈ ಭೂಕಂಪ, 160 ಮೈಲು ದೂರದಲ್ಲಿರುವ ಲಾಸ್ ಏಂಜಲಿಸ್ ನಲ್ಲೂ ಜನರ ಅನುಭವಕ್ಕೆ ಬಂದಿದೆ. ಭೂಕಂಪವನ್ನು ಅನುಸರಿಸಿ ಹಲವು ಡಜನ್ ಪಶ್ಚಾತ್ ಕಂಪನಗಳು ಉಂಟಾಗಿವೆ.
ಭೂಕಂಪದಿಂದ ಉಂಟಾಗಿರುವ ನಾಶ ನಷ್ಟದ ನೈಜ ಸ್ವರೂಪ ಇನ್ನಷ್ಟೇ ಗೊತ್ತಾಗಬೇಕಾಗಿದೆ ಎಂದು ವರದಿಗಳು ತಿಳಿಸಿವೆ.