Advertisement

ಮಿಂಚಿದ ಕ್ರಾವ್ಲಿ, ಅಬ್ಬಾಸ್ ಮತ್ತು ಮಳೆ: ನೀರಸ ಡ್ರಾನಲ್ಲಿ ಅಂತ್ಯವಾದ ದ್ವಿತೀಯ ಟೆಸ್ಟ್

02:29 PM Aug 18, 2020 | keerthan |

ಸೌಥಂಪ್ಟನ್: ಪ್ರವಾಸಿ ಪಾಕಿಸ್ಥಾನ ಮತ್ತು ಆತಿಥೇಯ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಿರೀಕ್ಷೆಯಂತೆ ನೀರಸ ಡ್ರಾನಲ್ಲಿ ಅಂತ್ಯವಾಗಿದೆ. ಮಳೆ ಕಾಟ ಇಲ್ಲದೆ ನಡೆದ ಐದನೇ ದಿನದ ಆಟದಲ್ಲಿ ಇಂಗ್ಲೆಂಡ್ 110 ರನ್ ಗಳಿಸಿದ್ದಾಗ ಉಭಯ ತಂಡಗಳು ಡ್ರಾ ಮಾಡಲು ನಿರ್ಧರಿಸದವು.

Advertisement

ಏಳು ರನ್ ಗೆ ಒಂದು ವಿಕೆಟ್ ಕಳೆದುಕೊಂಡಲ್ಲಿಂದ ಬ್ಯಾಟಿಂಗ್ ಆರಂಭಿಸಿದ ಆಂಗ್ಲರಿಗೆ ಜ್ಯಾಕ್ ಕ್ರಾವ್ಲಿ ನೆರವಾದರು. ಡೊಮಿನಿಕ್ ಸಿಬ್ಲಿ ಜೊತೆಗೂಡಿ 91 ರನ್ ಜೊತೆಯಾಟ ನಡೆಸಿದರು. ಸಿಬ್ಲಿ 32 ರನ್ ಗೆ ಔಟಾದರೆ, ಕ್ರಾವ್ಲಿ 53 ರನ್ ಗಳಿಸಿದರು.

ಪಾಕ್ ಪರ ಉತ್ತಮ ದಾಳಿ ಸಂಘಟಿಸಿದ ಅಬ್ಬಾಸ್ ಎರಡು ವಿಕೆಟ್ ಪಡೆದರೆ, ಶಹೀನ್ ಅಫ್ರಿದಿ ಮತ್ತು ಯಾಸಿರ್ ಶಾ ತಲಾ ಒಂದು ವಿಕೆಟ್ ಪಡೆದರು. ಮೊಹಮ್ಮದ್ ರಿಜ್ವಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಆಗಾಗ ಮಳೆಯಿಂದ ಅಡ್ಡಿಯಾಗುತ್ತಿದ್ದ ಪಂದ್ಯದಲ್ಲಿ ಐದು ದಿನದಲ್ಲಿ ಒಟ್ಟು ನಡೆದಿದ್ದು 134.3 ಓವರ್ ಮಾತ್ರ. ಮೊದಲ ಪಂದ್ಯ ಗೆದ್ದಿರುವ ಇಂಗ್ಲೆಂಡ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next