Advertisement

ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಗುಪ್ತಾ ನಿವೃತ್ತಿ

06:45 AM Oct 02, 2018 | |

ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಶೋಕ ಕುಮಾರ ಗುಪ್ತಾ ಸೆ.30ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.

Advertisement

2016ರ ಅಗಸ್ಟ್‌ 2ರಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಮೆಕ್ಯಾನಿಕಲ್‌ ಹಾಗೂ ಇಲೆಕ್ಟ್ರಿಕಲ್‌ ಎಂಜಿನಿಯರ್‌ ಆಗಿರುವ ಅವರು ಐಆರ್‌ಎಸ್‌ಎಂಇ 1974ರ ಅಧಿಕಾರಿಯಾಗಿದ್ದಾರೆ. ರೈಲ್ವೆಯಲ್ಲಿ 37 ವರ್ಷಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 

ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾಗಿದ್ದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರು. ಈ ಅವಧಿಯಲ್ಲಿ ಸುಮಾರು 200 ಕಿ.ಮೀ. ಹೊಸ ರೈಲು ಹಳಿ ಕಾಮಗಾರಿ ನಡೆದಿದೆ. ಬೆಂಗಳೂರು-ಹಾಸನ 100 ಕಿ.ಮೀ ಡಬ್ಲಿಂಗ್‌ ಲೈನ್‌ ಪೂರ್ಣಗೊಂಡಿದೆ. 50 ಹೊಸ ಮೇಲ್‌, ಎಕ್ಸ್‌ಪ್ರೆಸ್‌ ಹಾಗೂ ಪ್ಯಾಸೆಂಜರ್‌ ರೈಲುಗಳನ್ನು ಪರಿಚಯಿಸಲಾಗಿದೆ. ಗುಪ್ತಾ ನಾಯಕತ್ವದಲ್ಲಿ ನೈಋತ್ಯ ರೈಲ್ವೆ 2017-18ನೇ ಸಾಲಿನ ಭಾರತ ಮಟ್ಟದ ಸುರಕ್ಷಾ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next