Advertisement
ಭಾರತೀಯರ ಧರ್ಮ ಸಹಿಷ್ಣುತೆ ಎಂಬುವುದು ಅಚಲವಾದುದು ಹಾಗೂ ಅಷ್ಟೇ ಪವಿತ್ರತೆಯಾಗಿದೆ. ನಾವಾಗಿ ಯಾರ ಮೇಲು ಆಕ್ರಮಣ ಮಾಡಿದವರಲ್ಲ. ಆಕ್ರಮಣ ನಡೆದರೆ ಮಂಡಿಯೂರಿ ಶರಣಾದವರು ನಾವಲ್ಲ. ಅಷ್ಟೇ ವೇಗವಾಗಿ ಪ್ರತ್ಯುತ್ತರವನ್ನು ನಿಡುವಂಥಹ ದೃಧ ನಿರ್ಧಾರವನ್ನು ಹೊಂದಿದವರು ಭಾರತೀಯರು. ಹಿಂದೂ ಸಂಸ್ಕೃತಿಯ ಮೇಲೆ ಆಕ್ರಮಣ ನಡೆದಾಗಲೂ ಕೂಡ ದಿಟ್ಟತನದಿಂದ ಹೋರಾಡಿ ನಮ್ಮತನವನ್ನು ಉಳಿಸಿಕೊಂಡವರು ನಾವು. ತಮ್ಮ ಜಾತೀಯತೆ, ಕಲೆ, ಸಂಸ್ಕೃತಿಯನ್ನು ಉಳಿಸಿಕೊಂಡು ಇಂದಿಗೂ ಮೆರೆಯುತಿರುವ ದೇಶವೊಂದಿದ್ದರೆ ಅದು ಭಾರತ. ಮಹಾರಾಷ್ಟ್ರದ ಶಿವಾಜಿ ಮಹಾರಾಜ್, ಕರ್ನಾಟಕದ ಕಿತ್ತೂರು ಚೆನ್ನಮ್ಮ, ವಿಜಯ ನಗರ ಅರಸರು, ಉತ್ತರದಲ್ಲಿ ರಾಣಾ ಪ್ರತಾಪ್ ಸಿಂಗ್, ಜಾನ್ಸಿ ರಾಣಿ ಲಕ್ಷ್ಮೀ ಬಾಯಿ, ಪಂಜಾಬ್‌ನ ಗುರು ಗೋವಿಂದ್ ಸಿಂಗ್ ಮೊದಲಾದವರು ಜನ್ಮ ಭೂಮಿ ಮತ್ತು ಧರ್ಮ ರಕ್ಷಣೆಗಾಗಿ ಹೋರಾಡಿ ಮಡಿ ದವರು. ಭಾರತಿಯ ಧರ್ಮ ಸಂಸ್ಕೃತಿಯನ್ನು ಕಲಿತು ಕೆಲವು ದೇಶಗಳು ಅವನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡಿವೆ. ಇದನ್ನು ಸೌತ್ ಈಸ್ಟ್ ದೇಶಗಳಲ್ಲಿ ನಾವು ಇಂದಿಗೂ ಕಾಣಬಹುದು.
Related Articles
Advertisement
ಸುಬ್ರಹ್ಮಣ್ಯನ್ ಸ್ವಾಮೀ ಅವರನ್ನು ಸೌತ್ ವೆಲ್ಫೆàರ್ ಅಸೋಸಿಯೇಶನ್‌ನ ವತಿಯಿಂದ ಶಾಲು ಹೊದೆಸಿ, ಪುಷ್ಪಗುಚ್ಚ, ಸ್ಮರಣಿಕೆಯನ್ನಿತ್ತು ಅಧ್ಯಕ್ಷ ಪದ್ಮನಾಭ ಶೆಟ್ಟಿ ಸಮ್ಮಾನಿಸಿ ಗೌರವಿಸಿದರು. ಸಮಾರಂಭದಲ್ಲಿ ಪರಿಸರದ ದಕ್ಷಿಣ ಭಾರತೀಯರಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜ ಸೇವಕಿ ನೂತನ್ ಸುವರ್ಣ, ವರ್ಷಾ ಅನಂತ ರಾಮನ್, ಜಯಶ್ರೀ ನಾಗರಾಜನ್ , ನಿರ್ಮಲಾ ಕೃಷ್ಣ ಕುಮಾರ್, ವೈದೇಹಿ ರಾಜಾರಾಂ ಹಾಗು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು, ಶಿವಲಿಂಗ ಧವಳೇಶ್ವರ್, ಅರ್. ಎಸ್. ಕುಮಾರ್, ಪಿ. ಎನ್. ಕೆ. ನಾಯರ್ ಅವರನ್ನು ಪಂಚರತ್ನ ಪ್ರಶಸ್ತಿಯನ್ನು ಸುಭ್ರಹ್ಮಣ್ಯ ಸ್ವಾಮೀ ಹಾಗೂ ಪದಾಧಿಕಾರಿಗಳು ಪ್ರದಾನಿಸಿ ಶುಭಹಾರೈಸಿದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಭಾರತೀಯ ನಾಲ್ಕು ರಾಜ್ಯಗಳ ಶೈಲಿಯಲ್ಲಿ ನೃತ್ಯ, ಗಾಯನ ವೈಭವ ನಡೆಯಿತು. ಸಮಾರಂಭದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಪಿಂಪ್ರಿ-ಚಿಂಚಾÌಡ್ ಬಂಟರ ಸಂಘದ ಅಧ್ಯಕ್ಷ ವಿಜಯ ಶೆಟ್ಟಿ ಬೋರ್ಕಟ್ಟೆ, ಉಪಾಧ್ಯಕ್ಷ ರಾಕೇಶ್ ಶೆಟ್ಟಿ, ಪಿಂಪ್ರಿ-ಚಿಂಚಾÌಡ್ ತುಳುಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್, ಪಿಂಪ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ, ಎರ್ಮಾಳ್ ವಿಶ್ವನಾಥ್ ಶೆಟ್ಟಿ, ಎರ್ಮಾಳ್ ಸೀತಾರಾಮ್ ಶೆಟ್ಟಿ, ಪ್ರಮುಖರಾದ ರಮೇಶ್ ಶೆಟ್ಟಿ, ಸುಧಾಕರ ಶೆಟ್ಟಿ ಪೆಲತ್ತೂರು ಮತ್ತು ನಾಲ್ಕು ರಾಜ್ಯಗಳ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗು ಹೆಚ್ಚಿನ ಸಂಖ್ಯೆಯ ದಕ್ಷಿಣ ಭಾರತೀಯರು ಉಪಸ್ಥಿತರಿದ್ದರು. ಸೌತ್ ವೆಲ್ಫೆàರ್ ಅಸೋಸಿಯೇಶನ್‌ನ ಪ್ರಮುಖ ಪದಾಧಿಕಾರಿಗಳಾದ ರಾಕೇಶ್ ಶೆಟ್ಟಿ, ಪ್ರಸಾದ್ ನಾಯರ್, ಅರ್. ಪ್ರಭಾಕರನ್, ಗಣೇಶ್ ಅಂಚನ್, ವೇಣು ಅಂಬಲಪುಜØ, ಅಭಿಲಾಷ ಸವಿಧಾನ್, ದೀಪಕ್ ನಾಯರ್, ಅವಿನಾಶ್ ಹೊಸಮನಿ, ರೋಶಿತ್ ರವೀಂದ್ರ, 1ಸದಸ್ಯರಾದ ದಿಲೀಪ್ ನಾಯರ್, ರಾಜೇಶ್ ವಲ್ಸನ್, ಸತ್ಯನಾಥನ್ ನಂಬಿಯಾರ್, ಜಯಾನಂದ ಶೆಟ್ಟಿ, ಸತೀಶ್ ಐಯ್ಯರ್, ಅಭಿನಂದ, ಶಶಿ ನಂಬಿಯಾರ್, ಮುರ್ಗೆಶ್ ಗಿರಿಸಾಗರ್, ಮನು ರಾಜನ್, ಸಂತೋಷ್ ಆಯಾರ್ಪುಲ್ಲಿ, ಪ್ರಜೀಶ್ ಪದ್ಮನ್ ಮೊದಲಾದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಶ್ರುತಿ ಶಶಿಧರನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪಿಂಪ್ರಿ-ಚಿಂಚಾÌಡ್ ನಗರದಲ್ಲಿ ವಿವಿಧ ಕ್ಷೇತ್ರಗಳ ಉದ್ದಿಮೆದಾರರು, ಉದ್ಯೋಗಿಗಳು ಸೇರಿದಂತೆ ಸುಮಾರು 7 ಲಕ್ಷಕ್ಕಿಂತಲೂ ಹೆಚ್ಚಿನ ದಕ್ಷಿಣ ಭಾರತೀಯರು ವಾಸವಾಗಿ¨ªಾರೆ. ಅಂತೆಯೇ ಅವರ ಪ್ರತಿಯೊಂದು ರಾಜ್ಯದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಭಾಷಾ ಸಂಘಟನೆಗಳಿವೆ. ಎಲ್ಲಾ ರಾಜ್ಯಗಳ ಜನರನ್ನು ಒಂದುಗೂಡಿಸಿದ ಸಂಘಟನೆಯಾಗಿ ಸೌತ್ ವೆಲ್ಫೆàರ್ ಅಸೋಸಿಯೇಶನ್ ಅಸ್ತಿತ್ವಕ್ಕೆ ಬಂದು ಆ ಮೂಲಕ ದಕ್ಷಿಣದ ರಾಜ್ಯಗಳ ಜನರಿಗೆ ಸಹಾಯಕವಾಗಳು ಕಾರ್ಯನಿರ್ವಹಿಸುತ್ತಿದೆ. ನಮ್ಮ ಪ್ರತಿಯೊಂದು ರಾಜ್ಯದ ಜನರ ಅಚಾರ ವಿಚಾರ, ಕಲೆ -ಸಂಸ್ಕೃತಿ, ಆಚರಣೆಗಳನ್ನು ಒಟ್ಟಾಗಿ ಬೆರೆತು ಆಚರಿಸುವ ಮೂಲಕ ಸೋದರತ್ವವನ್ನು ಬೆಳೆಸಬೇಕು. ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಕೊಡುಗೆಯನ್ನು ಸಲ್ಲಿಸುವಂತಹ ದೃಢ ಸಂಕಲ್ಪ ಈ ಸಂಸ್ಥೆಯದ್ದಾಗಿದೆ. ಈ ಸಂಸ್ಥೆ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಬೇಕಾಗಿದೆ. ನಾಲ್ಕು ರಾಜ್ಯಗಳ ಜನರ ಒಗ್ಗಟ್ಟಿನ ಒಂದು ಸಂಸ್ಥೆ ಎಂದರೆ ಅದು ಅಷ್ಟೇ ಬಲಯುತವಾಗಿ ಸದೃಢವಾಗಬೇಕು.
– ಪದ್ಮನಾಭ ಶೆಟ್ಟಿ,
ಅಧ್ಯಕ್ಷರು, ಸೌತ್ ವೆಲ್ಫೆàರ್ ಅಸೋಸಿಯೇಶನ್ ಪಿಂಪ್ರಿ-ಚಿಂಚ್‌ವಾಡ್ ಚಿತ್ರ-ವರದಿ : ಹರೀಶ್ ಮೂಡಬಿದ್ರಿ