Advertisement

ಕೋವ್ಯಾಕ್ಸಿನ್ ಪಡೆದ ನಟ ಕಮಲ್ ಹಾಸನ್, ಮುಂದಿನ ತಿಂಗಳು ಭ್ರಷ್ಟಾಚಾರದ ವಿರುದ್ಧ ಲಸಿಕೆ!

03:24 PM Mar 02, 2021 | Team Udayavani |

ನವದೆಹಲಿ : ಭಾರತದಾದ್ಯಂತ ಸೋಮವಾರ(ಮಾರ್ಚ್ 01)ದಿಂದ ಎರಡನೇ ಹಂತದ ಕೋವಿಡ್  ಲಸಿಕೆ ವಿತರಣೆ ಮಾಡಲಾಗುತ್ತಿದೆ. ನಿನ್ನೆಯಿಂದ 60 ವರ್ಷ ಮೇಲ್ಪಟ್ಟವರು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ.

Advertisement

ಇಂದು ತಮಿಳು ಹಿರಿಯ ನಟ ಹಾಗೂ ಮಕ್ಕಳ್​ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಡೋಸ್ ಪಡೆದ ನಂತ್ರ ಟ್ವೀಟ್‍ ಮಾಡಿರುವ ನಟ, ತಮ್ಮ ಬಗ್ಗೆ ಮಾತ್ರವಲ್ಲದೆ ಇತರರ ಬಗ್ಗೆಯೂ ಕಾಳಜಿ ವಹಿಸುವವರು ಇದನ್ನು ಸಹಿಸಿಕೊಳ್ಳಬೇಕು. ಇದೀಗ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿದೆ. ಮುಂದಿನ ತಿಂಗಳು ಭ್ರಷ್ಟಾಚಾರದ ವಿರುದ್ಧ ಲಸಿಕೆ ಹಾಕಲಾಗುವುದು… ತಯಾರಾಗಿ ಎಂದು ಬರೆದುಕೊಂಡಿದ್ದಾರೆ.

ಚೆನ್ನೈನ ಶ್ರೀ ರಾಮಚಂದ್ರ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಪಡೆದಿರುವ ಇವರು, ಭಾರತದ ನಟರ ಪೈಕಿ ಮೊಟ್ಟ ಮೊದಲನೆಯದಾಗಿ ಕೋವಿಡ್ ಲಸಿಕೆ ಹಾಕಿಸಿಕೊಂಡ ನಟ ಎಂಬ ಹೆಗ್ಗಳಿಕೆಗೆ ಕಮಲ್‍ ಹಾಸನ್ ಭಾಜನರಾಗಿದ್ದಾರೆ.

ಇನ್ನು ನಿನ್ನೆ ಪ್ರಧಾನ ಮಂತ್ರಿ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಒಡಿಶಾ ಸಿಎಂ ನವೀನ್​ ಪಟ್ನಾಯಕ್, ರಾಜಸ್ಥಾನ ಗರ್ವನರ್​ ಕಾಲ್​​ರಾಜ್ ಮಿಶ್ರಾ, ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್, ಎನ್​​ಸಿಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್​, ಕೇಂದ್ರ ಸಚಿವ ಜಗದೀಶ್​ ಶೆಟ್ಟರ್ ಸೇರದಂತೆ ಹಲವರು ಲಸಿಕೆಯನ್ನು ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next