ಮುಂಬಯಿ: ನಗರದ ಬೀದಿಯಲ್ಲಿ ಲೈವ್ ವಿಡಿಯೋ ಮಾಡುತ್ತಿದ್ದ ವೇಳೆ ಕಿರುಕುಳಕ್ಕೊಳಗಾದ ದಕ್ಷಿಣ ಕೊರಿಯಾದ ಯೂಟ್ಯೂಬರ್ ಯುವತಿ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ್ದು, ”ನನಗೆ ಈ ಅನುಭವ ಬೇರೆ ದೇಶದಲ್ಲಿಯೂ ಆಗಿದೆ. ಆದರೆ ಆ ಸಮಯದಲ್ಲಿ ನಾನು ಪೊಲೀಸರಿಗೆ ಕರೆ ಮಾಡಲಾಗಲಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಭಾರತದಲ್ಲಿ, ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.
ಲೈವ್ ಸ್ಟ್ರೀಮಿಂಗ್ ಮಾಡುವಾಗ ಕಿರುಕುಳಕ್ಕೊಳಗಾದ ಯೂಟ್ಯೂಬರ್ ಹ್ಯೊಜಿಯೊಂಗ್ ಪಾರ್ಕ್ ”ನಾನು 3 ವಾರಗಳಿಗೂ ಹೆಚ್ಚು ಕಾಲ ಮುಂಬೈನಲ್ಲಿದ್ದೇನೆ, ಹೆಚ್ಚು ಕಾಲ ಉಳಿಯಲು ಯೋಜಿಸುತ್ತಿದ್ದೇನೆ. ಈ ಒಂದು ಕೆಟ್ಟ ಘಟನೆಯು ನನ್ನ ಸಂಪೂರ್ಣ ಪ್ರಯಾಣವನ್ನು ಹಾಳುಮಾಡಲು ಮತ್ತು ಇತರ ದೇಶಗಳಿಗೆ ಅದ್ಭುತವಾದ ಭಾರತವನ್ನು ತೋರಿಸುವ ನನ್ನ ಉತ್ಸಾಹವನ್ನು ಹಾಳುಮಾಡಲು ನಾನು ಬಯಸುವುದಿಲ್ಲ”ಎಂದು ಹೇಳಿದ್ದಾರೆ.
ಕಿರುಕುಳ ನೀಡಿದ ಯುವಕರಾದ ಮೊಬೀನ್ ಚಾಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರಿಲಾಮ್ ಅನ್ಸಾರಿ ಎಂಬವರನ್ನು ಬಂಧಿಸಲಾಗಿದೆ. ಖಾರ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇಬ್ಬರು ಆರೋಪಿಗಳನ್ನು 1 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ
ಕಿರುಕುಳ ನೀಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ವಿದೇಶದಲ್ಲೂ ಸುದ್ದಿಯಾಗಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.