Advertisement

Bengaluru: ವಿಮಾನದಲ್ಲಿದ್ದವು 10 ಜೀವಂತ ಹಳದಿ ಅನಕೊಂಡಗಳು!!

09:08 PM Apr 22, 2024 | Team Udayavani |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ತಮ್ಮ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಹಳದಿ ಅನಕೊಂಡಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಪ್ರಯಾಣಿಕನೊಬ್ಬನನ್ನು ಬಂಧಿಸಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಬೆಂಗಳೂರು ಕಸ್ಟಮ್ಸ್, ‘ಬ್ಯಾಂಕಾಕ್‌ನಿಂದ ಆಗಮಿಸಿದ್ದ ಪ್ರಯಾಣಿಕರ ಚೆಕ್-ಇನ್ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ 10 ಹಳದಿ ಅನಕೊಂಡಗಳನ್ನು ಕಳ್ಳಸಾಗಣೆಗಾಣಿಕೆ ಮಾಡುವ ಪ್ರಯತ್ನವನ್ನು ತಡೆದಿದ್ದೇವೆ ಎಂದು ತಿಳಿಸಿದ್ದಾರೆ.

“ಪ್ರಯಾಣಿಕನನ್ನು ಬಂಧಿಸಿ ತನಿಖೆ ನಡೆಯುತ್ತಿದೆ. ವನ್ಯಜೀವಿ ಕಳ್ಳಸಾಗಣೆಯನ್ನು ಸಹಿಸಲಾಗುವುದಿಲ್ಲ”ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ. ಭಾರತೀಯ ಕಾನೂನುಗಳ ಪ್ರಕಾರ ವನ್ಯಜೀವಿ ವ್ಯಾಪಾರ ಮಾಡುವುದು ಕಾನೂನುಬಾಹಿರವಾಗಿದೆ ಮತ್ತು ಕಸ್ಟಮ್ಸ್ ಆಕ್ಟ್, 1962 ವನ್ಯಜೀವಿ ಕಳ್ಳಸಾಗಣೆಯನ್ನು ಎದುರಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next