Advertisement
ಕೆ-ಪಾಪ್ ಗಾಯಕಿಯ ನಿಧನ ಸುದ್ದಿಯನ್ನು ಕೇಳಿ ದಕ್ಷಿಣ ಕೊರಿಯಾದ ಮ್ಯೂಸಿಕ್ ಇಂಡಸ್ಟ್ರಿ ಶಾಕ್ ಆಗಿದೆ.
Related Articles
Advertisement
2010 ರಲ್ಲಿ Mnet ಆಡಿಷನ್ ಪ್ರೋಗ್ರಾಂ ‘ಸೂಪರ್‌ಸ್ಟಾರ್ K2’ ನಲ್ಲಿ ಭಾಗವಹಿಸಿದ ನಂತರ ಪಾರ್ಕ್ ಬೊ ರಾಮ್ ಖ್ಯಾತಿಯನ್ನು ಗಳಿಸಿದ್ದರು. ಇದಾದ ಬಳಿಕ 2014 ರಲ್ಲಿ ʼಬ್ಯೂಟಿಫುಲ್ʼ ಹಾಡಿನ ಮೂಲಕ ಪಾಪ್ ಮ್ಯೂಸಿಕ್ ಇಂಡಸ್ಟ್ರಿಗೆ ಕಾಲಿಟ್ಟರು. ಅದೇ ವರ್ಷ ಅವರು 2014 ರ ಗಾಂವ್ ಚಾರ್ಟ್ ಸಂಗೀತ ಪ್ರಶಸ್ತಿಗಳಲ್ಲಿ ವರ್ಷದ ಕಲಾವಿದ ಪ್ರಶಸ್ತಿಯನ್ನು ಗೆದ್ದರು. 2015 ರಲ್ಲಿ, ಪಾರ್ಕ್ ‘ಸೆಲೆಪ್ರೆಟಿ’ ಎನ್ನು ಆಲ್ಬಂನ್ನು ರಿಲೀಸ್ ಮಾಡಿದ್ದರು. ʼ ಹೈವಾಡಾಂಗ್ʼ, ʼ Please Say Something Even Though I know It’s a Lieʼ ಮುಂತಾದ ಹಾಡುಗಳಿಂದ ಖ್ಯಾತಿ ಗಳಿಸಿದ್ದರು.
ಎರಿಕ್ ನ್ಯಾಮ್, ಪಾರ್ಕ್ ಕ್ಯುಂಗ್, ಪಾರ್ಕ್ ಜೇ ಜಂಗ್, ಲಿಲ್ ಬೋಯಿ ಮತ್ತು ಹುಹ್ ಗಕ್ ಸೇರಿದಂತೆ ಕೊರಿಯಾದಲ್ಲಿ ಅನೇಕ ಕಲಾವಿದರೊಂದಿಗೆ ಕೆಲಸ ಮಾಡಿದ್ದರು.
ಏಪ್ರಿಲ್ 3 ರಂದು ಪಾರ್ಕ್ ಬೋ ರಾಮ್ ಅವರು ‘ಐ ಮಿಸ್ ಯು’ ಎಂಬ ಹಾಡನ್ನು ಬಿಡುಗಡೆ ಮಾಡಿದರು. ಇದು ಈಗ ಯೂಟ್ಯೂಬ್‌ನಲ್ಲಿ 211k ವೀಕ್ಷಣೆ ಕಂಡಿದೆ.
ಸದ್ಯ ಅವರ ನಿಗೂಢ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.