Advertisement
ಭಾನುವಾರ 70ನೇ “ಮನ್ ಕಿ ಬಾತ್’ನಲ್ಲಿ ಮೋದಿ, ಪುಲ್ವಾಮಾದ ಜನೋಪಯೋಗಿ ಮುಖವನ್ನು ದೇಶದ ಮುಂದೆ ತೆರೆದಿಟ್ಟಿದ್ದು ವಿಶೇಷವಾಗಿತ್ತು. “ದೇಶದ ಒಟ್ಟು ಬೇಡಿಕೆಯ ಶೇ.90ರಷ್ಟು ಪೆನ್ಸಿಲ್ ಸ್ಲೇಟ್‌ಗಳನ್ನು ಕಾಶ್ಮೀರ ಕಣಿವೆ ಪೂರೈಸುತ್ತದೆ. ಇದರಲ್ಲಿ ಪುಲ್ವಾಮಾ ಸಿಂಹಪಾಲು ಹೊಂದಿದೆ. ಪುಲ್ವಾಮಾ ಜನತೆಯ ಶ್ರಮ ದಿಂದಾಗಿ ದೇಶದುದ್ದಗಲ ವಿದ್ಯಾರ್ಥಿಗಳು ಹೋಮ್‌ವರ್ಕ್, ನೋಟ್ಸ್ ಗಳನ್ನು ಸಿದ್ಧ ಮಾಡಿಕೊಳ್ಳುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವದೇಶಿ ಖಾದಿ ಸಾಗರೋತ್ತರ ಜನಪ್ರಿಯತೆಗಳಿಸಿದ ಬಗ್ಗೆಯೂ ಮೋದಿ ಬಣ್ಣಿಸಿದರು. “ಯಾವಾಗ ನಾವು ಸ್ವದೇಶಿ ವಸ್ತುಗಳಿಗೆ ಪ್ರಚಾರ ಕೊಟ್ಟೆವೋ, ಜಗತ್ತು ನಮ್ಮ ಉತ್ಪನ್ನಗ ಳಿಗೆ ಅಭಿಮಾನಿಯಾಗುತ್ತಿದೆ. ನಮ್ಮ ಅನೇಕ ಉತ್ಪನ್ನಗಳು ಜಾಗತಿಕ ಗುಣ ಮಟ್ಟ ಹೊಂದಿವೆ. ಅವುಗಳಲ್ಲಿ ಖಾದಿಯೂ ಒಂದು. ಕೇವಲ ನಮ್ಮಲ್ಲಿ ಮಾತ್ರವೇ ಅಲ್ಲ, ಜಗತ್ತಿನ ಹಲವೆಡೆ ಖಾದಿ ಉತ್ಪಾದನೆಯಾಗುತ್ತಿದೆ. ಮೆಕ್ಸಿಕೊದ ಒಕ್ಸಾಕಾದ ಹಲವು ಮಂದಿ ಖಾದಿ ನೇಯುತ್ತಾರೆ. ಅಲ್ಲಿ ಇದು ಓಕ್ಸಾಕಾ ಖಾದಿಯೆಂದೇ ಜನಪ್ರಿಯಗೊ ಳ್ಳುತ್ತಿದೆ’ ಎಂದರು.