Advertisement
ಈ ಹಿಂದೆ “ಫಸ್ಟ್ ರ್‍ಯಾಂಕ್ ರಾಜು’, “ರಾಜು ಕನ್ನಡ ಮೀಡಿಯಂ’ನಂತಹ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ನರೇಶ್ ಈ ಚಿತ್ರದ ನಿರ್ದೇಶಕರು. ಈಗ ಸದ್ದಿಲ್ಲದೇ “ಸೌತ್‌ಇಂಡಿಯನ್ ಹೀರೋ’ ಎಂಬ ಸಿನಿಮಾ ಮಾಡಿದ್ದು, ಚಿತ್ರ ಫೆ.24ರಂದು ತೆರೆಕಾಣುತ್ತಿದೆ.
Related Articles
Advertisement
“ಸೌತ್‌ಇಂಡಿಯನ್ ಹೀರೋ’ ಸಿನಿಮಾ ಬಗ್ಗೆಮಾತನಾಡುವ ನಿರ್ದೇಶಕ ನರೇಶ್, “ಇದು ಲಾಕ್‌ಡೌನ್‌ನಲ್ಲಿ ಆರಂಭವಾದ ಕಥೆ. ಒಂದು ಗಟ್ಟಿ ಕಂಟೆಂಟ್ ಇರುವ ಸಿನಿಮಾ ಮಾಡಬೇಕೆಂದು ಯೋಚಿಸಿದ ಹುಟ್ಟಿದ ಕಥೆಯೇ “ಸೌತ್ ಇಂಡಿಯನ್ ಹೀರೋ’. ಸಿನಿಮಾದ ಚಿತ್ರೀಕರಣ ಕೂಡಾ ಲಾಕ್‌ಡೌನ್ ಸಮಯದಲ್ಲೇ ಮುಗಿಸಿದೆವು’ ಎಂದು ಸಿನಿಮಾ ಬಗ್ಗೆ ವಿವರ ನೀಡುತ್ತಾರೆ.
“ಸೌತ್ ಇಂಡಿಯನ್ ಹೀರೋ’ ಸಿನಿಮಾದ ಪ್ರಮುಖ ಹೈಲೈಟ್ ಎಂದರೆ ಲಾಜಿಕ್ ಲಕ್ಷ್ಮಣ್ ರಾವ್ ಪಾತ್ರ. ಎಲ್ಲದರಲ್ಲೂ ಲಾಜಿಕ್ ಹುಡುಕುವ ಲಕ್ಷ್ಮಣ್ ರಾವ್ ಎಂಬ ವ್ಯಕ್ತಿ ಸಿನಿಮಾಕ್ಕೆ ಎಂಟ್ರಿಕೊಟ್ಟರೆ ಏನಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ.
ಈ ಬಗ್ಗೆ ಮಾತನಾಡುವ ನರೇಶ್, “ಮೊದಲು ಹುಟ್ಟಿದ ಪಾತ್ರವೇ ಲಾಜಿಕ್ ಲಕ್ಷ್ಮಣ್ ರಾವ್. ಸಾಮಾನ್ಯವಾಗಿ ಸಿನಿಮಾದವರು ಲಾಜಿಕ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.ಅದರಲ್ಲೂ ಕಮರ್ಷಿಯಲ್ ಸಿನಿಮಾದಲ್ಲಿ ಹೀರೋಏಳೆಂಟು ಜನರಿಗೆ ಹೊಡೆಯುವುದು ಸೇರಿದಂತೆಅನೇಕ ಸಾಹಸಗಳನ್ನು ಮಾಡುತ್ತಾರೆ. ಇವೆಲ್ಲವನ್ನುನಾವು ಲಾಜಿಕ್ ದೃಷ್ಟಿಯಿಂದ ನೋಡಲಾಗುವುದಿಲ್ಲ. ಆದರೆ, ಲಾಜಿಕ್ ಲಕ್ಷ್ಮಣ್ ರಾವ್ ಪಾತ್ರ ಎಲ್ಲದರಲ್ಲೂ ಲಾಜಿಕ್ ಹುಡುಕುವ ವ್ಯಕ್ತಿತ್ವ ಹೊಂದಿರುತ್ತದೆ. ಇಂತಹ ವ್ಯಕ್ತಿ ಸಿನಿಮಾಕ್ಕೆಬರುತ್ತಾನೆ, ಸ್ಟಾರ್ ಆಗುತ್ತಾನೆ, ಸೌತ್‌ಇಂಡಿಯನ್ ಸ್ಟಾರ್ ಆಗಿ ಮೆರೆಯುತ್ತಾ ನೆ. ಆತನ ಈ ಹಾದಿ ಹೇಗಿರುತ್ತದೆ. ಲಾಜಿಕ್ ಹುಡುಕುವ ಆತ ಸಿನಿಮಾದಲ್ಲಿಹೇಗೆ ವರ್ತಿಸುತ್ತಾನೆ ಎಂಬ ಅಂಶ ಸೇರಿದಂತೆ ಅನೇಕ ವಿಚಾರಗಳನ್ನು ಈಸಿನಿಮಾದಲ್ಲಿ ಹೇಳಿದ್ದೇವೆ’ ಎನ್ನುವುದು ನರೇಶ್ ಮಾತು.
ಚಿತ್ರದಲ್ಲಿ ಸಾರ್ಥಕ್ ಎನ್ನುವವರು ಹೀರೋ ಆಗಿ ನಟಿಸಿದ್ದಾರೆ. ನರೇಶ್ ಅವರಿಗೆ ಯಾವುದೇ ಇಮೇಜ್ ಇಲ್ಲದ ಹೊಸ ಮುಖ ಬೇಕಾದ ಕಾರಣ ಸಾರ್ಥಕ್ ಅವರನ್ನು ಆಯ್ಕೆ ಮಾಡಿದ್ದಾರೆ. ಉಳಿದಂತೆ ಊರ್ವಶಿ, ಕಾಶಿಮಾ ನಾಯಕಿಯರು. ಚಿತ್ರದಲ್ಲಿ ಯೋಗರಾಜ್ ಭಟ್ ನಟಿಸಿದ್ದಾರೆ. ಇಡೀ ತಂಡ ಸಿನಿಮಾದ ಬಗ್ಗೆ ಮಾತನಾಡಿತು.