Advertisement

ಗೆಲುವಿಗೆ ಸಹಕಾರ ನೀಡಿದಲ್ಲಿ ಪದವೀಧರರ ಧ್ವನಿಯಾಗುವೆ: ಮಧು ಜಿ.ಮಾದೇಗೌಡ

06:37 PM Apr 13, 2022 | Team Udayavani |

ಹುಣಸೂರು: ತಮ್ಮ ತಂದೆ ಮಾಜಿ ಸಚಿವ ಜಿ.ಮಾದೇಗೌಡರ ಅನೇಕ ಜನಪರ ಕಾರ್ಯಕ್ರಮಗಳು, ಕಾಂಗ್ರೆಸ್ ಮುಖಂಡರ ಅಖಂಡ ಬೆಂಬಲ, ಕಾರ್ಯಕರ್ತರ ಪ್ರಚಾರದೊಂದಿಗೆ ತಮ್ಮ ಗೆಲುವು ನಿಶ್ಚಿತವೆಂದು ದಕ್ಷಿಣ ಪದವೀಧರ ಕ್ಷೇತ್ರದ ಕಾಂಗ್ರೇಸ್‌ನ ನಿಯೋಜಿತ ಅಭ್ಯರ್ಥಿ ಮಧು ಜಿ.ಮಾದೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಚುನಾವಣಾ ಪ್ರಚಾರ ಸಂಬಂಧ ಹುಣಸೂರಿನ ಕಾಂಗ್ರೆಸ್ ಕಛೇರಿಯಲ್ಲಿ ಪಧವೀಧರರ ಸಭೆಯ ನಂತರ ಶಾಸಕ ಮಂಜುನಾಥ್‌ರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ತಂದೆ ಶಾಸಕ, ಸಂಸದ, ಮಂತ್ರಿಯಾಗಿ ಅನೇಕ ರೈತಪರ, ಕಾವೇರಿ ಹೋರಾಟ ನಡೆಸಿದ್ದು, ಜನಮಾನಸದಲ್ಲಿ ಇನ್ನೂ ಅಚ್ಚಹಸಿರಾಗಿದೆ. ಇನ್ನು ಭಾರತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ನೀಡಿದ್ದು, ಶೈಕ್ಷಣಿಕ ವ್ಯವಸ್ಥೆಗೆ ಕೊಡುಗೆ ನೀಡಿರುವುದು. ತಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಸಾವಿರಾರು ಹಿರಿಯ ವಿದ್ಯಾರ್ಥಿಗಳಿದ್ದು, ಅನೇಕ ಹುದ್ದೆಗಳಲ್ಲಿದ್ದಾರೆ, ಇವರೆಲ್ಲರನ್ನು ಭೇಟಿಯಾಗಿ ಮತಯಾಚಿಸಿದ್ದೇನೆ ಮತ್ತು ಪಕ್ಷದವತಿಯಿಂದ ೪೫ಸಾವಿರಕ್ಕೂ ಹೆಚ್ಚು ಪದವೀಧರರನ್ನು ನೋಂದಾಯಿಸಿದ್ದು, ಕಾರ್ಯಕರ್ತರ ಪಡೆ ಮನೆ-ಮನೆ ಭೇಟಿ ನೀಡಿ ಮತ ಯಾಚಿಸುತ್ತಿದ್ದಾರೆ.

ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಸ್ ಪಕ್ಷ ಈ ಕ್ಷೇತ್ರವನ್ನು ಗೆದ್ದಿಲ್ಲ, ಈ ಬಾರಿ ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದು ಈಗಾಗಲೇ 3ಬಾರಿ ಸಭೆ ಮಾಡಿರುವುದು ಗೆಲುವಿಗೆ ರಹದಾರಿಯಾಗಿದೆ. ತಾವು ಚುನಾಯಿತರಾದಲ್ಲಿ ಪದವೀಧರರ ಧನಿಯಾಗುತ್ತೇನೆ ಎಂದ ಅವರು ಕ್ಷೇತ್ರದ ಪದವೀಧರರು ಬೆಂಬಲಿಸುವಂತೆ ಮನವಿ ಮಾಡಿದರು.

ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ತಾಲೂಕಿನಲ್ಲಿ 1800ಮಂದಿ ನೋಂದಾಯಿಸಲಾಗಿದೆ. ಇವರ ತಂದೆ ಜಿ.ಮಾದೇಗೌಡರು ಸ್ವಚಾರಿತ್ರ್ಯರಾಗಿದ್ದು, ಆರೋಗ್ಯ, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇನ್ನು ಎರಡೂ ಸರಕಾರಗಳ ವೈಫಲ್ಯದಿಂದ ಮಧು ಜಿ.ಮಾದೇಗೌಡರು ಗೆಲುವು ಸಾಧಿಸುತ್ತಾರೆಂದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್, ದೇವರಾಜು, ನಾರಾಯಣ್, ಮಾಜಿ ಅಧ್ಯಕ್ಷ ಕೆಂಪೇಗೌಡ, ಮುಖಂಡರಾದ ಹಂದನಹಳ್ಳಿಸೋಮಶೇಖರ್ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next