Advertisement
ಪುರುಷರ ಆಲ್ ಇಂಡಿಯನ್ ಫೈನಲ್‌ನಲ್ಲಿ ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಖ್ಯಾತಿಯ ಸಿರಿಲ್ ವರ್ಮ 17-21, 23-21, 21-13 ಅಂತರದಿಂದ ಆರ್ಯಮನ್ ಟಂಡನ್ ಅವರನ್ನು ಮಣಿಸಿದರು. ವನಿತಾ ಸಿಂಗಲ್ಸ್ ಕೂಡ ಭಾರತೀಯ ಆಟಗಾರ್ತಿಯರ ನಡುವೆಯೇ ಸಾಗಿತು. ಇಲ್ಲಿ ಅಶ್ಮಿತಾ ಚಾಲಿಹಾ 21-18, 25-23ರಿಂದ ಗಾಯತ್ರಿ ಗೋಪಿಚಂದ್‌ಗೆ ಸೋಲುಣಿಸಿದರು.
Related Articles
Advertisement
ಅಪೇಕ್ಷಾಗೆ ಈಜು ಚಿನ್ನಸೌತ್ ಏಶ್ಯನ್ ಗೇಮ್ಸ್ ಈಜು ಸ್ಪರ್ಧೆಯಲ್ಲಿ ಕಿನ್ನಿಗೋಳಿ ಮೂಲದ ಅಪೇಕ್ಷಾ ಫೆರ್ನಾಂಡಿಸ್ ಚಿನ್ನದ ಪದಕ ಜಯಿಸಿದ್ದಾರೆ. ಅವರು 200 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ 2 ನಿಮಿಷ, 38.05 ಸೆಕೆಂಡ್‌ಗಳ ಸಾಧನೆ ದಾಖಲಿಸಿ ಮೊದಲಿಗರಾದರು. 5ನೇ ದಿನವೂ ಪದಕ ಬೇಟೆ
ಸೌತ್ ಏಶ್ಯನ್ ಗೇಮ್ಸ್‌ನ 5ನೇ ದಿನವೂ ಭಾರತ ಪದಕ ಬೇಟೆ ಮುಂದುವರಿಸಿ ಅಗ್ರಸ್ಥಾನ ಕಾಯ್ದುಕೊಂಡಿತು. ಶುಕ್ರವಾರ ಭಾರತ 19 ಚಿನ್ನ ಸಹಿತ ಒಟ್ಟು 41 ಪದಕಗಳನ್ನು ಗೆದ್ದಿತು. ಇದರಲ್ಲಿ 18 ಬೆಳ್ಳಿ, 4 ಕಂಚು ಸೇರಿವೆ. ಭಾರತದ ಒಟ್ಟು ಪದಕಗಳ ಸಂಖ್ಯೆಯೀಗ 165ಕ್ಕೆ ಏರಿದೆ (81 ಚಿನ್ನ, 59 ಬೆಳ್ಳಿ, 25 ಕಂಚು). ಆತಿಥೇಯ ನೇಪಾಲ 116 ಪದಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ (41 ಚಿನ್ನ, 27 ಬೆಳ್ಳಿ, 48 ಕಂಚು). 134 ಪದಕ ಜಯಿಸಿರುವ ಶ್ರೀಲಂಕಾ 3ನೇ ಸ್ಥಾನ ಉಳಿಸಿಕೊಂಡಿದೆ (23 ಚಿನ್ನ, 42 ಬೆಳ್ಳಿ, 69 ಕಂಚು). ಭಾರತದ ಈಜು ತಾರೆಯರು ಅಪ್ರತಿಮ ಪ್ರದರ್ಶನ ಮುಂದುವರಿಸಿದರು. ಕರ್ನಾಟಕದ ಶ್ರೀಹರಿ ನಟರಾಜ್ ಹಾಗೂ ಎಸ್.ಪಿ. ಲಿಖೀತ್ ಚಿನ್ನದ ಪದಕ ಗೆದ್ದು ಮಿಂಚಿದರು. 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ ನಟರಾಜ್ 1 ನಿಮಿಷ 59.69 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಸ್ವರ್ಣಕ್ಕೆ ಕೊರಳೊಡ್ಡಿದರು. ಎಸ್.ಪಿ. ಲಿಖೀತ್ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 1 ನಿಮಿಷ 00.42 ಸೆಕೆಂಡ್ಸ್‌ನಲ್ಲಿ ಗುರಿ ಸೇರಿ ಚಿನ್ನದ ಪದಕ ಗೆದ್ದರು. ಈಜಿನಲ್ಲಿ ಭಾರತೀಯರು ಒಟ್ಟು 10 ಪದಕ ಗೆದ್ದಿದ್ದಾರೆ.