Advertisement

ವಿಂಡೀಸ್ ಕಟ್ಟಿದ ಹಾಕಿದ ಶಮ್ಸಿ ಬಿಗು ದಾಳಿ: ದಕ್ಷಿಣ ಆಫ್ರಿಕಾಗೆ ಸರಣಿ ಜಯ

09:33 AM Jul 04, 2021 | Team Udayavani |

ಗ್ರೆನೆಡಾ: ವಿಶ್ವದ ಅಗ್ರ ಸ್ಥಾನೀಯ ಟಿ20 ಬೌಲರ್ ತಬ್ರೀಜ್ ಶಮ್ಸಿ ಬಿಗು ದಾಳಿ ಮತ್ತು ಆಡನ್ ಮಾಕ್ರಮ್ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ವಿರುದ್ಧದ ಅಂತಿಮ ಟಿ20 ಪಂದ್ಯವನ್ನು ಗೆದ್ದು ಸರಣಿ ಜಯ ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು. ನಾಯಕ ಬವುಮಾ ಶೂನ್ಯ ಸುತ್ತಿದರು. ಆದರೆ ಎರಡನೇ ವಿಕೆಟ್ ಗೆ ಡಿಕಾಕ್ ಮತ್ತು ಮಾಕ್ರಮ್ 128 ರನ್ ಗಳ ಜೊತೆಯಾಟವಾಡಿದರು. ಡಿಕಾಕ್ 60 ರನ್ ಗಳಿಸಿದರೆ, ಮಾಕ್ರಮ್ 70 ರನ್ ಗಳಿಸಿದರು. ಮಿಲ್ಲರ್ ಅಜೇಯ 18 ರನ್ ಗಳಿಸಿದರು. ವಿಂಡೀಸ್ ಪರ ಎಡ್ವರ್ಡ್ ಎರಡು ವಿಕೆಟ್ ಕಬಳಿಸಿದರೆ, ಬ್ರಾವೋ ಮತ್ತು ಮಕಾಯ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ:ಮಿಥಾಲಿ, ಮಂಧನಾ ಬ್ಯಾಟಿಂಗ್ ನೆರವು:  ಗೆಲುವಿನ ಹಳಿಯೇರಿದ ವನಿತೆಯರು

ಗುರಿ ಬೆನ್ನತ್ತಿದ ವಿಂಡೀಸ್ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಎವಿನ್ ಲೆವಿಸ್ ಅರ್ಧಶತಕ ಸಿಡಿಸಿ ಗರಿಷ್ಠ ಸ್ಕೋರರ್ ಆದರು. ( 52 ರನ್) ಹೆಟ್ಮೈರ್ 33 ರನ್ ಮಾಡಿದರೆ ಪೂರನ್ 20 ರನ್ ಗಳಿಸಿದರು. ವಿಂಡೀಸ್ ತಂಡ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ 25 ರನ್ ಗಳ ಸೋಲನುಭವಿಸಿತು.

ಶಮ್ಸಿ ಪಡೆದಿದ್ದು ಒಂದೇ ವಿಕೆಟ್ ಆದರು ನಾಲ್ಕು ಓವರ್ ನಲ್ಲಿ ನೀಡಿದ್ದು ಕೇವಲ 11 ರನ್. ಎನ್ ಗಿಡಿ ಮೂರು ವಿಕೆಟ್ ರಬಾಡ ಎರಡು ವಿಕೆಟ್ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next