Advertisement
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಭಾರತ ಆತಿಥೇಯ ಹರಿಣಗಳಿಗೆ ಗೆಲ್ಲಲು 297 ರನ್ ಗಳ ಗುರಿ ಮುಂದಿಟ್ಟಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮ್ಯಾನ್ ಗಳು ಭಾರತದ ಬೌಲಿಂಗ್ ದಾಳಿಯ ಎದುರು ಮಂಕಾದರು. 45.5 ಓವರ್ ಗಳಲ್ಲಿ 218 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು ತವರಿನಲ್ಲಿ ಸರಣಿ ಸೋಲಿನ ಕಹಿ ಅನುಭವಿಸಿತು.
Related Articles
ಸಂಜು ಸ್ಯಾಮ್ಸನ್ ಅವರು ಚೊಚ್ಚಲ ಅಂತಾರಾಷ್ಟ್ರೀಯ ಅಮೋಘ ಶತಕ ಸಿಡಿಸಿ ಸಂಭ್ರಮಿಸಿದರು . ಒನ್ ಡೌನ್ ಆಟಗಾರನಾಗಿ ಬಂದ ಸ್ಯಾಮ್ಸನ್ ಅವಕಾಶವನ್ನು ಭರಪೂರವಾಗಿ ಬಳಸಿಕೊಂಡರು. ಅಮೋಘ ಇನ್ನಿಂಗ್ಸ್ ಆಡಿದ ಅವರು 108 ರನ್ ಗಳಿಸಿ ಔಟಾದರು. 114 ಎಸೆತಗಳಲ್ಲಿ6 ಬೌಂಡರಿ ಮತ್ತು 3 ಆಕರ್ಷಕ ಸಿಕ್ಸರ್ ಗಳು ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು.
Advertisement
ಆರಂಭಿಕರಾದ ರಜತ್ ಪಾಟಿದಾರ್ 22, ಸಾಯಿ ಸುದರ್ಶನ್ 10 ರನ್ ಗೆ ಔಟಾದರು. ನಾಯಕ ಕೆಎಲ್ ರಾಹುಲ್ 21 ರನ್ ಗಳಿಗೆ ಪೆವಿಲಿಯನ್ ಗೆ ಮರಳಿದರು. ಆ ಬಳಿಕ ಸ್ಯಾಮ್ಸನ್ ಅವರಿಗೆ ಸಾಥ್ ನೀಡಿದ ತಿಲಕ್ ವರ್ಮ 52 ರನ್ ಗಳಿಸಿ ಔಟಾದರು. ರಿಂಕು ಸಿಂಗ್ 38, ವಾಷಿಂಗ್ಟನ್ ಸುಂದರ್ 14, ಅರ್ಷದೀಪ್ ಸಿಂಗ್ ಔಟಾಗದೆ 7 ರನ್ ಗಳಿಸಿದರು. 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್ ಕಲೆ ಹಾಕಿತು.