ಈ ಸರಣಿ ಮುಂದಿನ ವರ್ಷದ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವ ಪಡೆದಿತ್ತು. ನಮ್ಮ ಯುವ ತಂಡ ವಿದೇಶಿ ಟ್ರ್ಯಾಕ್‌ನಲ್ಲಿ ಎಂತಹ ಪ್ರದರ್ಶನ ನೀಡೀತು ಎಂಬುದನ್ನು ಅರಿಯಬೇಕಿತ್ತು. ಅಲ್ಲದೇ ಟಿ20 ವಿಶ್ವಕಪ್‌ಗ್ೂ ಮುನ್ನ ಉಳಿದದ್ದು 6 ಪಂದ್ಯ ಮಾತ್ರ. ಇದರಲ್ಲಿ ಒಂದು ಈಗಾಗಲೇ ಮಳೆಪಾಲಾಗಿದೆ. ಉಳಿ ದೆರಡು ಪಂದ್ಯಗಳ ಬಳಿಕ ಭಾರತ ತವರಲ್ಲಿ ಅಫ್ಘಾನಿಸ್ಥಾನ ವಿರುದ್ಧ 3 ಪಂದ್ಯಗಳನ್ನು ಆಡಬೇಕಿದೆ. ಇದು ಬಿಟ್ಟರೆ ವಿಶ್ವಕಪ್ ಸಿದ್ಧತೆಗೆ ಉಳಿದದ್ದು ಐಪಿಎಲ್ ಮಾತ್ರ. ಜೂನ್‌ನಲ್ಲಿ ವೆಸ್ಟ್ ಇಂಡೀಸ್-ಅಮೆರಿಕ ಆತಿಥ್ಯದಲ್ಲಿ ವಿಶ್ವಕಪ್ ನಡೆಯಲಿದೆ.
Advertisement
2 ಪಂದ್ಯ, 17 ಆಟಗಾರರುಅರ್ಥಾತ್, ವಿಶ್ವಕಪ್‌ಗೂ ಮೊದಲು ಭಾರತಕ್ಕೆ ವಿದೇಶದಲ್ಲಿ ಆಡಲಿಕ್ಕಿರುವುದು 2 ಪಂದ್ಯ ಮಾತ್ರ. ತಂಡದಲ್ಲಿ 17 ಆಟಗಾರರಿದ್ದಾರೆ. ಈ ಸೀಮಿತ ಅವಕಾಶದಲ್ಲಿ ಎಲ್ಲರನ್ನೂ ಆಡಿಸಬೇಕಾದ ಒತ್ತಡವೀಗ ಎದುರಾಗಿದೆ.
ಆಸ್ಟ್ರೇಲಿಯ ವಿರುದ್ಧ ಸರಣಿ ಗೆದ್ದ ತಂಡದಲ್ಲಿನ ಆಟಗಾರರನ್ನು ಹೊರತು ಪಡಿಸಿ ಕೆಲವು ಅನುಭವಿ ಆಟಗಾರರನ್ನು ಈ ತಂಡ ಹೊಂದಿದೆ. ಶುಭಮನ್ ಗಿಲ್, ರವೀಂದ್ರ ಜಡೇಜ, ಮೊಹಮ್ಮದ್ ಸಿರಾಜ್ ಇವರಲ್ಲಿ ಪ್ರಮುಖರು. ಇವರಿಗೆ ಆಡುವ ತಂಡದಲ್ಲಿ ಸ್ಥಾನ ನೀಡಬೇಕಾ ದರೆ ಆಸೀಸ್ ವಿರುದ್ಧ ಆಡಿದ ಕೆಲವರನ್ನು ಒಂದು ಪಂದ್ಯದ ಮಟ್ಟಿಗಾದರೂ ಕೈಬಿಡಬೇಕಾಗುತ್ತದೆ. ಹೀಗಾಗಿ ಜೈಸ್ವಾಲ್, ಗಾಯಕ್ವಾಡ್, ತಿಲಕ್ ವರ್ಮ, ಜಿತೇಶ್ ಶರ್ಮ, ಇಶಾನ್ ಕಿಶನ್ ಮೊದಲಾದವರು ತಮಗೆ ಲಭಿಸಿದ ಅವಕಾಶವನ್ನು ವ್ಯರ್ಥಗೊಳಿಸುವಂತಿಲ್ಲ.
Related Articles
Advertisement
ಹರಿಣಗಳಿಗೂ ಮಹತ್ವದ ಸರಣಿದಕ್ಷಿಣ ಆಫ್ರಿಕಾ ಪಾಲಿಗೂ ಇದು ವಿಶ್ವಕಪ್ ದೃಷ್ಟಿಯಿಂದ ಅತ್ಯಂತ ಮಹ ತ್ವದ ಸರಣಿ. ವಿಶ್ವಕಪ್‌ಗ್ೂ ಮೊದಲು ಹರಿಣಗಳ ಮುಂದಿರುವುದು 5 ಟಿ20 ಪಂದ್ಯ ಮಾತ್ರ.
ವೇಗಿಗಳಾದ ಮಾರ್ಕೊ ಜಾನ್ಸೆನ್ ಮತ್ತು ಗೆರಾಲ್ಡ್ ಕೋಟಿj ಅವರನ್ನು ಮೊದಲೆರಡು ಪಂದ್ಯಗಳಿಗಷ್ಟೇ ಆರಿಸಲಾಗಿದೆ. ಇವರ ಮುಂದೆ ಉಳಿದಿರುವುದು ಒಂದೇ ಅವಕಾಶ. ಹಾಗೆಯೇ ತಂಡದಲ್ಲಿ ಬಹಳಷ್ಟು ಮಂದಿ ಯುವ ಆಟಗಾರರಿದ್ದಾರೆ. ಇವರಿಗೆ ಉತ್ತಮ ಅಭ್ಯಾಸ ಲಭಿಸಬೇಕಿದೆ. ಸ್ಥಳ: ಜೆಬೆರಾ
ಆರಂಭ: ರಾತ್ರಿ 8.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್