Advertisement

ಐತಿಹಾಸಿಕ ಪ್ರವಾಸ: ಪಾಕಿಸ್ಥಾನಕ್ಕೆ ಬಂದಿಳಿದ ದಕ್ಷಿಣ ಆಫ್ರಿಕಾ ತಂಡ

01:03 AM Jan 17, 2021 | Team Udayavani |

ಕರಾಚಿ: ಹದಿನಾಲ್ಕು ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ ಪಾಕಿಸ್ಥಾನಕ್ಕೆ ಸರಣಿಯನ್ನಾಡಲು ಆಗಮಮಿಸಿದೆ. ಜ. 26ರಿಂದ ಫೆ. 14ರ ತನಕ ನಡೆಯಲಿರುವ 2 ಟೆಸ್ಟ್‌ ಹಾಗೂ 3 ಟಿ20 ಸರಣಿಗಳಲ್ಲಿ ಪಾಕಿಸ್ಥಾನ-ದಕ್ಷಿಣ ಆಫ್ರಿಕಾ ಮುಖಾಮುಖೀ ಆಗಲಿವೆ.

Advertisement

ಶನಿವಾರ ದಕ್ಷಿಣ ಆಫ್ರಿಕಾ ಆಟಗಾರರು ಹಾಗೂ ತಂಡದ ಸಹಾಯಕ ಸಿಬಂದಿ ವಿಶೇಷ ವಿಮಾನದಲ್ಲಿ ಕರಾಚಿಗೆ ಬಂದಿಳಿದರು. ಫೇಸ್‌ ಮಾಸ್ಕ್ ಹಾಗೂ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಬಂದ ಇವರು ಕರಾಚಿಯಲ್ಲಿ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.

ದಕ್ಷಿಣ ಆಫ್ರಿಕಾ, 2009ರಲ್ಲಿ ಶ್ರೀಲಂಕಾ ಕ್ರಿಕೆಟಿಗರಿದ್ದ ಬಸ್ಸಿನ ಮೇಲೆ ಲಾಹೋರ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಪಾಕಿಸ್ಥಾನಕ್ಕೆ ಆಗಮಿಸಿದ ಕೇವಲ 3ನೇ ಟೆಸ್ಟ್‌ ತಂಡವಾಗಿದೆ. ಉಳಿದೆರಡು ತಂಡಗಳೆಂದರೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ.

ದ.ಆಫ್ರಿಕಾ ಕೊನೆಯ ಸಲ 2007ರಲ್ಲಿ ಪಾಕಿಸ್ಥಾನಕ್ಕೆ ಆಗಮಿಸಿತ್ತು. ಅಂದು 2 ಟೆಸ್ಟ್‌ ಹಾಗೂ 5 ಏಕದಿನ ಪಂದ್ಯಗಳನ್ನಾಡಿತ್ತು. ಈ ಬಾರಿ ತವರಲ್ಲಿ ಲಂಕಾವನ್ನು 2-0 ವೈಟ್‌ವಾಶ್‌ ಮಾಡಿ ಇಲ್ಲಿಗೆ ಬಂದಿಳಿದಿದೆ.

ಕ್ರಿಕೆಟಿಗೆ ಪಾಕ್‌ ಸುರಕ್ಷಿತ :

Advertisement

“ನಮ್ಮ ಭದ್ರತಾ ತಂಡದ ಸದಸ್ಯರು ಮೊದಲು ಪಾಕಿಸ್ಥಾನಕ್ಕೆ ಆಗಮಿಸಿ, ಇಲ್ಲಿ ಅಪಾಯವೇನಿಲ್ಲ, ಕ್ರಿಕೆಟಿಗೆ ಇದು ಸುರಕ್ಷಿತ ಎಂದು ಸೂಚಿಸಿದ ಬಳಿಕ ನಾವು ಪ್ರವಾಸ ಕೈಗೊಂಡಿದ್ದೇವೆ’ ಎಂಬುದಾಗಿ ದಕ್ಷಿಣ ಆಫ್ರಿಕಾ ತಂಡದ ಪ್ರಧಾನ ಕೋಚ್‌ ಮಾರ್ಕ್‌ ಬೌಷರ್‌ ಹೇಳಿದರು.

ಈ ವರ್ಷ ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌, ವೆಸ್ಟ್‌ ಇಂಡೀಸ್‌ ತಂಡಗಳೂ ಪಾಕಿಸ್ಥಾನಕ್ಕೆ ಕ್ರಿಕೆಟ್‌ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮವಿದೆ.

Advertisement

Udayavani is now on Telegram. Click here to join our channel and stay updated with the latest news.

Next