Advertisement

ದಕ್ಷಿಣ ಆಫ್ರಿಕಾ ವಿಶ್ವಕಪ್‌ ಫೇವರಿಟ್‌ ಅಲ್ಲ: ಎಬಿಡಿ

12:30 AM Mar 17, 2019 | Team Udayavani |

ಜೊಹಾನ್ಸ್‌ಬರ್ಗ್‌: “ಚೋಕರ್’ ಎಂದೇ ಗುರುತಿಸಲ್ಪಡುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ ಈ ಬಾರಿಯ ವಿಶ್ವಕಪ್‌ನ ಫೇವರಿಟ್‌ ಅಲ್ಲವಂತೆ. ಹೀಗೆಂದು ಸ್ವತಃ ಆ ನಾಡಿನ ಕ್ರಿಕೆಟ್‌ ಗ್ರೇಟ್‌ ಎಬಿ ಡಿ ವಿಲಿಯರ್ ಅಭಿಪ್ರಾಯಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು 4 ನೆಚ್ಚಿನ ತಂಡಗಳನ್ನು ಗುರುತಿಸಿದ್ದಾರೆ. ಇದರಲ್ಲಿ ಭಾರತವೂ ಸೇರಿದೆ. ಉಳಿದ 3 ತಂಡಗಳೆಂದರೆ ಆತಿಥೇಯ ಇಂಗ್ಲೆಂಡ್‌, ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ. “ದಕ್ಷಿಣ ಆಫ್ರಿಕಾವೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 4-0 ಮುಂದಿದೆ ನಿಜ, ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಮ್ಮದು ವಿಶ್ವಕಪ್‌ ಕೂಟದ ನೆಚ್ಚಿನ ತಂಡವಲ್ಲ. ಇವರೂ ಓಟದಲ್ಲಿರುತ್ತಾರೆ, ಅಷ್ಟೇ…’ ಎಂಬುದಾಗಿ ಎಬಿಡಿ ಹೇಳಿದ್ದಾರೆ.

Advertisement

“ನನ್ನ ಪ್ರಕಾರ ಇಂಗ್ಲೆಂಡ್‌ ಮತ್ತು ಭಾರತ ಟ್ರೋಫಿ ಎತ್ತುವ ಪ್ರಬಲ ತಂಡಗಳಾಗಿವೆ. ಇವರೊಂದಿಗೆ ಆಸ್ಟ್ರೇಲಿಯ, ಪಾಕಿಸ್ಥಾನವನ್ನೂ ಸೇರಿಸಬಹುದು. ಆಸ್ಟ್ರೇಲಿಯ ಈಗಾಗಲೇ 5 ಸಲ ಚಾಂಪಿಯನ್‌ ಆಗಿದೆ. ಪಾಕಿಸ್ಥಾನ 2 ವರ್ಷಗಳ ಹಿಂದೆ ಇಂಗ್ಲೆಂಡಿನಲ್ಲೇ ಚಾಂಪಿಯನ್ಸ್‌ ಟ್ರೋಫಿ ಎತ್ತಿದೆ. ಆದರೆ ದಕ್ಷಿಣ ಆಫ್ರಿಕಾದ ಇತ್ತೀಚಿನ ಏಕದಿನ ಪ್ರದರ್ಶನ ಸ್ಫೂರ್ತಿದಾಯಕ ಎಂಬುದರಲ್ಲಿ ಎರಡು ಮಾತಿಲ್ಲ’ ಎಂದಿದ್ದಾರೆ ಡಿ ವಿಲಿಯರ್. ಎಬಿಡಿ ಸದ್ಯದಲ್ಲೇ ಐಪಿಎಲ್‌ ಆಡಲು ಭಾರತಕ್ಕೆ ಆಗಮಿಸಲಿದ್ದು, ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಪ್ರತಿನಿಧಿಸಲಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next