Advertisement
ಈ ಸಲವೂ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಿದೆ. ಇದಕ್ಕೂ ಮೊದಲು ರವಿವಾರ ಕೋಲ್ಕತಾದ “ಈಡನ್ ಗಾರ್ಡನ್ಸ್’ನಲ್ಲಿ ದೊಡ್ಡ ಹರ್ಡಲ್ಸ್ ಒಂದನ್ನು ದಾಟಬೇಕಿದೆ. ಟೆಂಬ ಬವುಮ ಪಡೆ ಆತಿಥೇಯ ಹಾಗೂ ಅಜೇಯ ಭಾರತದ ಸವಾಲನ್ನು ಎದುರಿಸಬೇಕಿದೆ.
ದಕ್ಷಿಣ ಆಫ್ರಿಕಾ ಅಂತಾ ರಾಷ್ಟ್ರೀಯ ಕ್ರಿಕೆಟಿಗೆ ಪುನರಾ ಗಮನ ಸಾರಿದ್ದೇ ಭಾರತದ ವಿರುದ್ಧ ಆಡುವ ಮೂಲಕ. ವಿಶ್ವಕಪ್‌ನಲ್ಲಿ ಮೊದಲ ಮುಖಾಮುಖಿ ಏರ್ಪಟ್ಟಿದ್ದು 1992ರಲ್ಲಿ. ಇದೂ ಸೇರಿದಂತೆ 1999 ಹಾಗೂ 2011ರ ವಿಶ್ವ ಕಪ್ ಕೂಟಗಳಲ್ಲಿ ಭಾರತವನ್ನು ಮಣಿಸಿದ ದಕ್ಷಿಣ ಆಫ್ರಿಕಾ ಹ್ಯಾಟ್ರಿಕ್ ಗೆಲುವು ಕಂಡಿತ್ತು. ಅನಂತರದ 2015 ಮತ್ತು 2019ರ ಕೂಟಗಳಲ್ಲಿ ಜಯಭೇರಿ ಮೊಳಗಿಸುವ ಸರದಿ ಭಾರತದ್ದಾಗಿತ್ತು.
Related Articles
Advertisement
ಹೋವ್‌ನಲ್ಲಿ ಸಾಗಿದ 1999ರ ಮುಖಾಮುಖೀಯಲ್ಲಿ ಮತ್ತೆ ದಕ್ಷಿಣ ಆಫ್ರಿಕಾ ಅಬ್ಬರಿಸಿತು. 4 ವಿಕೆಟ್‌ಗಳಿಂದ ಜಯಿ ಸಿತು. ಭಾರತ 5ಕ್ಕೆ 253 ರನ್ ಗಳಿಸಿದರೆ, ಹರಿಣಗಳ ಪಡೆ 47.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಬಾರಿಸಿತು. ಈ ಪಂದ್ಯದಲ್ಲಿ ಸೌರವ್ ಗಂಗೂಲಿ 97, ಜಾಕ್ ಕ್ಯಾಲಿಸ್ ಅಜೇಯ 96 ರನ್ ಮಾಡಿ ಮಿಂಚಿದ್ದರು.
2011ರ ಜಯಭೇರಿಭಾರತ 2011ರಲ್ಲಿ 2ನೇ ಸಲ ವಿಶ್ವಕಪ್ ಗೆದ್ದು ಮೆರೆ ದಾಡಿದ್ದು ಇತಿಹಾಸ. ಆದರೆ ಈ ಹಾದಿಯಲ್ಲಿ ಧೋನಿ ಪಡೆಗೆ ದಕ್ಷಿಣ ಆಫ್ರಿಕಾವನ್ನು ಮಣಿಸಲು ಸಾಧ್ಯವಾಗಿರಲಿಲ್ಲ ಎಂಬುದನ್ನು ಗಮನಿಸಬೇಕು. ನಾಗಪುರದಲ್ಲಿ ನಡೆದ ಈ ದೊಡ್ಡ ಮೊತ್ತದ ಮೇಲಾಟದಲ್ಲಿ ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳ ಜಯದೊಂದಿಗೆ ಹ್ಯಾಟ್ರಿಕ್ ಸಾಧಿಸಿತು. ತೆಂಡುಲ್ಕರ್ (111), ಸೆಹವಾಗ್ (73) ಮತ್ತು ಗಂಭೀರ್ (69) ಅವರ ಬ್ಯಾಟಿಂಗ್ ಬಲದಿಂದ ಭಾರತ 296 ರನ್ ಪೇರಿಸಿದರೆ, ಗ್ರೇಮ್ ಸ್ಮಿತ್ ಪಡೆ 49.4 ಓವರ್‌ಗಳಲ್ಲಿ 7 ವಿಕೆಟಿಗೆ 300 ರನ್ ಬಾರಿಸಿ ಗೆದ್ದು ಬಂತು. ಭಾರತದ ಸರದಿ
ಭಾರತ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಲು 2015ರ ತನಕ ಕಾಯಬೇಕಾಯಿತು. ಅಂದಿನ ಮೆಲ್ಬರ್ನ್ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ 130 ರನ್ನುಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ 7ಕ್ಕೆ 307 ರನ್ ಪೇರಿಸಿ ದರೆ, ಎಬಿಡಿ ಪಡೆ 40.2 ಓವರ್‌ಗಳಲ್ಲಿ 177ಕ್ಕೆ ಕುಸಿಯಿತು. ಶಿಖರ್ ಧವನ್ 137 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. 2019ರ ವಿಶ್ವಕಪ್‌ನಲ್ಲೂ ದಕ್ಷಿಣ ಆಫ್ರಿಕಾವನ್ನು ಕೆಡವಲು ಭಾರತ ಯಶಸ್ವಿಯಾಯಿತು. ಇದು ಸೌತಾಂಪ್ಟನ್‌ನಲ್ಲಿ ನಡೆದ ಸೆಣಸಾಟ. ದಕ್ಷಿಣ ಆಫ್ರಿಕಾ 9ಕ್ಕೆ 227 ರನ್ ಗಳಿಸಿದರೆ, ಭಾರತ 47.3 ಓವರ್‌ಗಳಲ್ಲಿ ನಾಲ್ಕೇ ವಿಕೆಟ್ ಕಳೆದುಕೊಂಡು 230 ರನ್ ಬಾರಿಸಿತು. ರವಿವಾರ ಕೋಲ್ಕತಾದಲ್ಲಿ ಹ್ಯಾಟ್ರಿಕ್ ಗೆಲುವಿನ ಅವಕಾಶ ಭಾರತದ ಮುಂದೆ ತೆರೆದುಕೊಂಡಿದೆ. -ಪಿ.ಕೆ. ಹಾಲಾಡಿ