Advertisement
ಪಾಕಿಸ್ಥಾನದ ನಾಯಕ ಬಾಬರ್ ಆಜಂ ಎಲ್ಲ ದಿಕ್ಕುಗಳಿಂದಲೂ ಒತ್ತಡ ಎದುರಿಸುತ್ತಿದ್ದಾರೆ. ಒಂದೆಡೆ ರನ್ ಬರಗಾಲ, ಇನ್ನೊಂದೆಡೆ ನಾಯ ಕತ್ವದ ಮೇಲೆ ತೂಗುಗತ್ತಿ, ತಂಡದ ಸತತ ಸೋಲು… ಇದನ್ನೆಲ್ಲ ಹೇಗೆ ನಿಭಾಯಿಸಬೇಕು, ತಂಡವನ್ನು ಎಲ್ಲಿಂದ ಮೇಲೆತ್ತಬೇಕು ಎಂಬುದು ಹೊಳೆ ಯದೆ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಅಫ್ಘಾನಿಸ್ಥಾನ ವಿರುದ್ಧ ಕಳೆದ ಪಂದ್ಯದಲ್ಲಿ ಅನುಭವಿಸಿದ ಆಘಾತಕಾರಿ ಸೋಲು ಪಾಕಿಸ್ಥಾನವನ್ನು ಅತಿಯಾಗಿ ಕಾಡಿದೆ. ಸಾಮಾನ್ಯವಾದರೂ ಈ ಅಪಾ ಯಕಾರಿ ತಂಡದ ವಿರುದ್ಧ ಇದೇ ಚೆನ್ನೈ ಅಂಗಳದಲ್ಲಿ 8 ವಿಕೆಟ್‌ಗಳಿಂದ ಪಾಕ್ ಮುಗ್ಗರಿಸಿತ್ತು. ಇದಕ್ಕೂ ಮೊದಲು ಭಾರತ ಮತ್ತು ಆಸ್ಟ್ರೇಲಿಯ ವಿರುದ್ಧವೂ ಹೀನಾಯ ಸೋಲುಂಡಿತ್ತು. ನೆದ ರ್ಲೆಂಡ್ಸ್ ಮತ್ತು ಶ್ರೀಲಂಕಾವನ್ನು ಮಣಿಸಿದ ಬಳಿಕ ಪಾಕ್ ಗೆಲುವಿನ ಮುಖ ಕಂಡಿಲ್ಲ. ಈಗಿನ ಲೆಕ್ಕಾಚಾರದ ಪ್ರಕಾರ ಉಳಿದ ನಾಲ್ಕೂ ಪಂದ್ಯಗಳನ್ನು ಗೆದ್ದರಷ್ಟೇ ಸೆಮಿಫೈನಲ್ ಪ್ರವೇಶಿಸಬಲ್ಲದು. ಇದೇ ವೇಳೆ ಆಸ್ಟ್ರೇಲಿಯ ಉಳಿದ 4 ಪಂದ್ಯಗಳಲ್ಲಿ ಎರಡನ್ನಾದರೂ ಸೋಲಬೇಕು!
Related Articles
“ಚೋಕರ್’ ಹಣೆಪಟ್ಟಿಯನ್ನು ಕಿತ್ತೆಸೆಯಲು ಸರ್ವಪ್ರಯತ್ನ ಮಾಡುತ್ತಿ ರುವ ದಕ್ಷಿಣ ಆಫ್ರಿಕಾ ಈ ಬಾರಿ ಪ್ರಚಂಡ ಪ್ರದರ್ಶನ ಕಾಯ್ದುಕೊಂಡು ಬಂದಿದೆ. ಮೊದಲು ಬ್ಯಾಟಿಂಗ್ ನಡೆಸಿದರೆ 350 ರನ್ ಗ್ಯಾರಂಟಿ. ಡಿ ಕಾಕ್, ಡುಸೆನ್, ಮಾರ್ಕ್‌ರಮ್, ಕ್ಲಾಸೆನ್, ಮಿಲ್ಲರ್, ಆಲ್‌ರೌಂಡರ್ ಮಾರ್ಕೊ ಜಾನ್ಸೆನ್… ಹೀಗೆ ಸುಂಟರಗಾಳಿ ಎಲ್ಲ ದಿಕ್ಕುಗಳಿಂದಲೂ ಬೀಸುತ್ತಿದೆ. ಇವರಲ್ಲಿ ಡುಸೆನ್ ಹೊರತುಪಡಿಸಿ ಉಳಿದೆಲ್ಲರ ರನ್‌ರೇಟ್ ನೂರರ ಗಡಿ ದಾಟಿದೆ. ಡಿ ಕಾಕ್ ಅವರಂತೂ ಶತಕದ ಮೇಲೆ ಶತಕ ಪೇರಿಸುತ್ತಿದ್ದಾರೆ. ಇದನ್ನು ತಡೆಯಬಲ್ಲ ಬೌಲರ್ ಪಾಕಿಸ್ಥಾನದ ಬಳಿ ಇದ್ದಾರೆಯೇ? ಇದು ಇನ್ನೊಂದು ಚಿಂತೆಗೆ ಕಾರಣವಾಗಿದೆ. ಏಕೆಂದರೆ, ದೊಡ್ಡ ಮೊತ್ತವನ್ನು ಚೇಸಿಂಗ್‌ಗೆ ಇಳಿದ ಅಫ್ಘಾನಿಸ್ಥಾನಕ್ಕೇ ಕಡಿವಾಣ ಹಾಕಲು ಪಾಕ್‌ನಿಂದ ಸಾಧ್ಯವಾಗಿರಲಿಲ್ಲ. ಉರು ಳಿಸಿದ್ದು 2 ವಿಕೆಟ್ ಮಾತ್ರ. ಇನ್ನು ದಕ್ಷಿಣ ಆಫ್ರಿಕಾದ ರನ್ ಯಂತ್ರಗಳು ಮುನ್ನುಗ್ಗಿ ಬರುವುದನ್ನು ತಡೆಯಲು ಸಾಧ್ಯವೇ? ಪ್ರಶ್ನೆ ಸಹಜ.
ಕೇವಲ 5 ಪಂದ್ಯಗಳಲ್ಲಿ 155 ಬೌಂಡರಿ ಹಾಗೂ 59 ಸಿಕ್ಸರ್ ಸಿಡಿಸಿದೆ ಎಂಬುದು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಪ್ರಭುತ್ವಕ್ಕೆ ಸಾಕ್ಷಿ. ಪಾಕಿಸ್ಥಾನ ಬಾರಿಸಿದ್ದು 136 ಬೌಂಡರಿ ಹಾಗೂ 24 ಸಿಕ್ಸರ್. 100 ಪ್ಲಸ್ ಸ್ಟ್ರೈಕ್‌ರೇಟ್ ದಾಖಲಿಸಿದವರು ಮಧ್ಯಮ ಕ್ರಮಾಂಕದ ಸೌದ್ ಶಕೀಲ್ ಮತ್ತು ಇಫ್ತಿಕಾರ್ ಅಹ್ಮದ್ ಮಾತ್ರ.
Advertisement
ಅಂದಮಾತ್ರಕ್ಕೆ ದಕ್ಷಿಣ ಆಫ್ರಿಕಾಕ್ಕೆ ಸೋಲಲು ಗೊತ್ತಿಲ್ಲ ಅಂತಲ್ಲ. ಸಾಮಾನ್ಯ ತಂಡವಾದ ನೆದರ್ಲೆಂಡ್ಸ್ ಕೈಯಲ್ಲಿ 38 ರನ್ನುಗಳ ಆಘಾತ ಅನುಭವಿಸಿತ್ತು. ಆದರೆ ಈ ಪಂದ್ಯಕ್ಕೆ ಮಳೆಯಿಂದ ಅಡಚಣೆ ಆಗಿತ್ತು.
ವಿಕೆಟ್ ಕೀಳಲು ಪರದಾಟಅಫ್ಘಾನಿಸ್ಥಾನ ವಿರುದ್ಧ ಪಾಕಿಸ್ಥಾನದ ಬ್ಯಾಟಿಂಗ್ ಉತ್ತಮ ಮಟ್ಟ ದಲ್ಲೇ ಇತ್ತು. 7ಕ್ಕೆ 282 ರನ್ ಸಂಗ್ರಹಗೊಂಡಿತ್ತು. ಆದರೆ ಅಫ್ಘಾನ್ ತಂಡದ ಸಾಮಾನ್ಯ ಬೌಲಿಂಗ್ ಎದುರು, ಬ್ಯಾಟಿಂಗ್‌ಗೆ ಸಹಕಾರಿ ಯಾದ ಟ್ರಾÂಕ್ ಮೇಲೆ ಈ ಮೊತ್ತ ಕಡಿಮೆ ಆಗಿತ್ತೆಂಬುದು ಸುಳ್ಳಲ್ಲ. ದಕ್ಷಿಣ ಆಫ್ರಿಕಾದ ಬೌಲಿಂಗ್‌ಗೆ ಹೋಲಿಸಿದರೆ ಪಾಕಿಸ್ಥಾನದ ಬೌಲಿಂಗ್ ತೀರಾ ದುರ್ಬಲವಾಗಿ ಕಾಣುತ್ತದೆ. ರಬಾಡ, ಜಾನ್ಸೆನ್, ಕೋಟಿj, ಎನ್‌ಗಿಡಿ, ಮಹಾರಾಜ್ ಹರಿಣಗಳ ಬೌಲಿಂಗ್ ಬತ್ತಳಿಕೆಯ ಘಾತಕ ಅಸ್ತ್ರಗಳು. ಆದರೆ ಅಫ್ರಿದಿ ಸೇರಿದಂತೆ ಪಾಕ್ ಬೌಲರ್ ವಿಕೆಟ್ ಕೀಳಲು ಪರದಾಡುತ್ತಿದ್ದಾರೆ. ಸ್ಥಳ: ಚೆನ್ನೈ
ಆರಂಭ: ಅ. 2.00
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಿಶ್ವಕಪ್ ಮುಖಾಮುಖಿ
ಪಂದ್ಯ: 05
ದಕ್ಷಿಣ ಆಫ್ರಿಕಾ ಜಯ: 03
ಪಾಕಿಸ್ಥಾನ ಜಯ: 02
2019ರ ವಿಶ್ವಕಪ್ ಫಲಿತಾಂಶ
ಪಾಕಿಸ್ಥಾನಕ್ಕೆ 49 ರನ್ ಜಯ