Advertisement
ಬಲಾಬಲದ ಲೆಕ್ಕಾಚಾರದಲ್ಲಿ ಇತ್ತಂಡಗಳು ವಿಶ್ವಕಪ್‌ನಲ್ಲಿ 7 ಬಾರಿ ಮುಖಾಮುಖೀಯಾಗಿದ್ದು 5 ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್ ಮೇಲುಗೈ ಸಾಧಿಸಿದೆ. ಇದರಿಂದ ನ್ಯೂಜಿಲ್ಯಾಂಡ್‌ಗೆ ಗೆಲುವಿನ ಸಾಧ್ಯತೆ ಹೆಚ್ಚು ಎನ್ನಲಡ್ಡಿಯಿಲ್ಲ. ಆದರೆ ದಕ್ಷಿಣ ಆಫ್ರಿಕಾವನ್ನು ಸುಲಭವಾಗಿ ಕಡೆಗಣಿಸು ವಂತಿಲ್ಲ. ಮುಂದಿನ ಎಲ್ಲ ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೇರುವ ಕನಸು ಕಾಣುತ್ತಿರುವ ದಕ್ಷಿಣ ಆಫ್ರಿಕಾ ಪ್ರಬಲ ಹೋರಾಟ ಸಂಘಟಿಸುವ ಸಾಧ್ಯತೆಯಿದೆ. ಇಷ್ಟು ಮಾತ್ರವಲ್ಲದೇ 2015ರ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಡಿ-ಎಲ್ ನಿಯಮದಿಂದ ಸೋಲನುಭವಿಸಿದ ದ. ಆಫ್ರಿಕಾ ಸೋಲಿನ ಸೇಡನ್ನು ತೀರಿಸಲು ಕಾದು ಕುಳಿತಿದೆ.
ಆಡಿದ 4 ಪಂದ್ಯದಲ್ಲಿ 3 ಪಂದ್ಯಗಳನ್ನು ಗೆದ್ದಿರುವ ನ್ಯೂಜಿಲ್ಯಾಂಡ್ ಸಶಕ್ತ ತಂಡವಾಗಿದೆ. ಭಾರತದ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡು ಒಂದು ಅಂಕ ಸಂಪಾದಿಸಿದ ನ್ಯೂಜಿಲ್ಯಾಂಡ್ ಅಜೇಯ ತಂಡವಾಗಿ ಗುರುತಿಸಿಕೊಂಡಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ನ್ಯೂಜಿಲ್ಯಾಂಡ್ ಬಲಿಷ್ಠವಾಗಿದೆ. ಗೆಲುವಿನ ವಿಶ್ವಾಸದಲ್ಲಿ ಪ್ಲೆಸಿಸ್ ಪಡೆ
ಸತತ ಸೋಲು ಮತ್ತು ಮಳೆಯಿಂದ ಕಂಗೆಟ್ಟಿರುವ ದಕ್ಷಿಣ ಆಫ್ರಿಕಾ ಅಫ್ಘಾನಿಸ್ಥಾನದ ವಿರುದ್ಧ ಮೊದಲ ಗೆಲುವು ದಾಖಲಿಸಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸುವ ಸೂಚನೆ ನೀಡಿದೆ.
Related Articles
ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ಪ್ರಮುಖ ವೇಗಿ ಲುಂಗಿ ಎನ್‌ಗಿಡಿ ಲಭ್ಯವಿರಲಿದ್ದಾರೆ. ಶೇ.100ರಷ್ಟು ಫಿಟ್ ಆಗಿದ್ದು ಮುಂದಿನ ಪಂದ್ಯದಲ್ಲಿ ಆಡುವುದಾಗಿ ಸ್ವತಃ ಲುಂಗಿ ಎನ್‌ಗಿಡಿ ತಿಳಿಸಿದ್ದಾರೆ. ಆರಂಭದ ಎರಡು ಪಂದ್ಯಗಳ ಬಳಿಕ ಗಾಯದ ಕಾರಣದಿಂದ ಲುಂಗಿ ಎನ್‌ಗಿಡಿ ಹೊರಗುಳಿದಿದ್ದರು. ಬಾಂಗ್ಲಾದೇಶ ತಂಡದ ವಿರುದ್ಧದ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಇದೀಗ ಮರಳಿ ತಂಡ ಸೇರಿಕೊಂಡಿರುವುದರಿಂದ ದಕ್ಷಿಣ ಆಫ್ರಿಕಾದ ಬೌಲಿಂಗ್ ಬಲ ಹೆಚ್ಚಿದಂತಾಗಿದೆ.
Advertisement
ಸಂಭಾವ್ಯ ತಂಡದಕ್ಷಿಣ ಆಫ್ರಿಕಾ
ಕ್ವಿಂಟನ್ ಡಿ ಕಾಕ್, ಐಡನ್ ಮಾರ್ಕ್‌ರಮ್/ಹಾಶಿಮ್ ಆಮ್ಲ, ಫಾ ಡು ಪ್ಲೆಸಿಸ್ (ನಾಯಕ), ಡೇವಿಡ್ ಮಿಲ್ಲರ್, ರಸ್ಸಿ ವಾನ್ ಡರ್ ಡುಸೆನ್, ಜೀನ್‌ಪಾಲ್ ಡ್ಯುಮಿನಿ, ಆ್ಯಂಡಿಲ್ ಫೆಲುಕ್ವಾಯೊ, ಕ್ರಿಸ್ ಮಾರಿಸ್/ ಲುಂಗಿ ಎನ್‌ಗಿಡಿ, ಕಾಗಿಸೊ ರಬಾಡ, ಇಮ್ರಾನ್ ತಾಹಿರ್. ನ್ಯೂಜಿಲ್ಯಾಂಡ್
ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಟಾಮ್ ಬ್ಲಿಂಡೆಲ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಐಶ್ ಸೋಧಿ.