ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ, ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಈಗ ಮತ್ತೆ ಐಪಿಎಲ್ ಫ್ರಾಂಚೈಸಿ ಕಾಣಿಸಿಕೊಂಡಿದ್ದಾರೆ. ತಾನು ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪಾಳಯಕ್ಕೆ ಮತ್ತೆ ಗಂಗೂಲಿ ಸೇರ್ಪಡೆಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿದ್ದಾರೆ.
ಬಿಸಿಸಿಐ ಅಧ್ಯಕ್ಷಗಿರಿಯಿಂದ ಕೆಳಕ್ಕಿಳಿದ ಬಳಿಕ ಇದೇ ಮೊದಲ ಬಾರಿಗೆ ವೃತ್ತಿಪರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಗಂಗೂಲಿ ಅವರು ಐಪಿಎಲ್ 2019 ರ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಆ ವೇಳೆ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು. ಅವರು ಅಕ್ಟೋಬರ್ 2019 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜವಾಬ್ದಾರಿಯನ್ನು ತ್ಯಜಿಸಬೇಕಾಗಿತ್ತು. ಇದೀಗ ಮತ್ತೆ ನಿರ್ದೇಶಕರಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಳಯ ಸೇರಿದ್ದಾರೆ.
ಇದನ್ನೂ ಓದಿ:ಉದ್ಘಾಟನೆಗೊಂಡು ನಾಲ್ಕೇ ದಿನಕ್ಕೆ ವಂದೇ ಭಾರತ್ ರೈಲಿಗೆ ಕಲ್ಲೆಸೆತ, ತನಿಖೆಗೆ ಬಿಜೆಪಿ ಒತ್ತಾಯ
2022 ರ ಅಕ್ಟೋಬರ್‌ನಲ್ಲಿ ಮಾಜಿ ವಿಶ್ವಕಪ್ ವಿಜೇತ ಆಲ್‌ರೌಂಡರ್ ರೋಜರ್ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ನಂತರ ಗಂಗೂಲಿ ಅವರ ಅವಧಿಯು ಕೊನೆಗೊಂಡಿತು.