Advertisement

ಮೂಡಿಬರಲಿದೆ  ಸೌರವ್‌ ಗಂಗೂಲಿ ಸಿನೆಮಾ

09:18 AM Dec 14, 2018 | Team Udayavani |

ಹೊಸದಿಲ್ಲಿ: ಬಾಲಿವುಡ್‌ನ‌ಲ್ಲಿ ಕ್ರೀಡಾಪಟುಗಳ ಜೀವನಾಧಾರಿತ ಸಿನೆಮಾ ಬರುವುದು ಈಗ ಮಾಮೂಲು. ಈಗಾಗಲೇ ಬಾಕ್ಸರ್‌ ಮೇರಿ ಕೋಮ್‌, ಕ್ರಿಕೆಟಿಗ ಎಂ.ಎಸ್‌. ಧೋನಿ ಕುರಿತಾದ ಸಿನಿಮಾಗಳು ತೆರೆಗೆ ಬಂದಿವೆ. ಈಗ ಕ್ರಿಕೆಟ್‌ ಲೋಕದ ಮತ್ತೋರ್ವ ದಿಗ್ಗಜ ಸೌರವ್‌ ಗಂಗೂಲಿ ಕುರಿತಾದ ಸಿನೆಮಾ ಸಿದ್ದಗೊಳ್ಳುತ್ತಿದೆ.

Advertisement

ಈ ಸಿನೆಮಾ ಶ್ರೀಜಿತ್‌ ಅವರ ನಿರ್ದೇಶನದಲ್ಲಿ ಮೂಡಿಬರಲಿದ್ದು, ನಿರ್ಮಾಣದಲ್ಲಿ ಏಕ್ತಾ ಕಪೂರ್‌ ಆಸಕ್ತಿ ಹೊಂದಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಶ್ರೀಜಿತ್‌ ಮುಖರ್ಜಿ ಅವರು ಗಂಗೂಲಿಯನ್ನು ಭೇಟಿ ಮಾಡಿ ಸಿನೆಮಾ ಕುರಿತು ಚರ್ಚೆ ಮಾಡಿದ್ದಾರೆ. ಆದರೆ ಗಂಗೂಲಿ ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದು ಗಂಗೂಲಿ ಅವರ “ಎ ಸೆಂಚುರಿ ಈಸ್‌ ನಾಟ್‌ ಇನಫ್’ ಆತ್ಮಚರಿತ್ರೆಯ ಆಧಾರದಲ್ಲಿ ಮೂಡಿಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next