Advertisement

ಸಹೋದರನಿಗೆ ಕೋವಿಡ್ ಪಾಸಿಟಿವ್: ಸೌರವ್ ಗಂಗೂಲಿಗೆ ಹೋಂ ಕ್ವಾರಂಟೈನ್

03:22 PM Jul 16, 2020 | keerthan |

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಸೌರವ್ ಹಿರಿಯ ಸಹೋದರ ಮತ್ತು ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸ್ನೇಹಷೀಶ್ ಗಂಗೂಲಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾದ ಹಿನ್ನಲೆಯಲ್ಲಿ ದಾದಾ ಗೆ ಹೋಂ ಕ್ವಾರಂಟೈನ್ ಇರಲು ಸೂಚಿಸಿಲಾಗಿದೆ.

Advertisement

ಬಂಗಾಳದ ಮಾಜಿ ರಣಜಿ ಆಟಗಾರ ಸ್ನೇಹಷೀಶ್ ಗಂಗೂಲಿ ಅವರು ಕೋವಿಡ್-19 ಸೋಂಕು ದೃಢವಾದ ಹಿನ್ನಲೆಯಲ್ಲಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಅವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಇದೀಗ ಕೋವಿಡ್ ಸೋಂಕು ದೃಢವಾಗಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

ಇತ್ತೀಚೆಗೆ ಮಾಧ್ಯಮದೊಂದಿಗೆ ಮಾತನಾಡಿದ್ದ ಸೌರವ್, ನನ್ನ ಸಹೋದರ ಪ್ರತಿ ದಿನ ತನ್ನ ಫಾಕ್ಟರಿಗೆ ಭೇಟಿ ನೀಡುತ್ತಾನೆ. ಇದರಿಂದ ಆತನಿಗೆ ಕೋವಿಡ್ ಅಪಾಯ ಹೆಚ್ಚು ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next